ಕಾರ್ಗಲ್ ಸಬ್ ಇನ್ಸ್ ಪೆಕ್ಟರ್ ಕಾಳಜಿಯಿಂದ ಉಳಿದ ಜೀವ* *ಜೋಗ ಜಲಪಾತದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದವನ ಜೀವ ಉಳಿಸಿದ ಖಾಕಿ*
*ಕಾರ್ಗಲ್ ಸಬ್ ಇನ್ಸ್ ಪೆಕ್ಟರ್ ಕಾಳಜಿಯಿಂದ ಉಳಿದ ಜೀವ*
*ಜೋಗ ಜಲಪಾತದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದವನ ಜೀವ ಉಳಿಸಿದ ಖಾಕಿ*
ಜೋಗ ಜಲಪಾತದ ಅತೀ ಅಪಾಯಕಾರಿ ಸ್ಥಳದ ಬಗ್ಗೆ ಆಟೋ ಚಾಲಕನಲ್ಲಿ ವಿಚಾರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ತಯಾರಿಯಲ್ಲಿದ್ದ ಜೀವವೊಂದನ್ನು ಕಾರ್ಗಲ್ ಪೊಲೀಸರು ಉಳಿಸಿದ್ದಾರೆ.
ಕಾರ್ಗಲ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಆ.25ರಂದು ಠಾಣಾ ವ್ಯಾಪ್ತಿಯ ಜೋಗ್ ಫಾಲ್ಸ್ ನಲ್ಲಿ ರೌಂಡ್ಸ್ ನಲ್ಲಿದ್ದಾಗ ಒಬ್ಬ ವ್ಯಕ್ತಿಯು ಜೋಗ್ ಫಾಲ್ಸ್ ನಲ್ಲಿ ಇರುವ ಅತಿ ಅಪಾಯಕಾರಿ ಸ್ಥಳಗಳ ಬಗ್ಗೆ ಅಲ್ಲಿನ ಆಟೋ ಚಾಲಕರಲ್ಲಿ ವಿಚಾರಿಸಿದ್ದ.
ಆತನ ಬಗ್ಗೆ ಅನುಮಾನ ಬಂದು, ವಿಚಾರಿಸಲಾಗಿ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿ ಮಾಡುತ್ತಿದ್ದ ವ್ಯಕ್ತಿಯು ವ್ಯಾಪಾರದಲ್ಲಿ ನಷ್ಟಪಡಿಸಿಕೊಂಡಿದ್ದು, ತನ್ನ ಪೋಷಕರ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ಲಕ್ಷಗಟ್ಟಲೆ ಸಾಲ ಮಾಡಿ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಬೇಜಾರಾಗಿ ಸುಮಾರು 20 ದಿನದ ಹಿಂದೆ ಮನೆ ಬಿಟ್ಟು ಬಂದಿದ್ದ.
ಹೊರಗಡೆ ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ಮಲಗಿದ್ದ. ನಂತರ ಸಾಯುವ ನಿರ್ಧಾರ ತೆಗೆದುಕೊಂಡು ಜೋಗ್ ಫಾಲ್ಸ್ ಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬಂದಿದ್ದ. ಈ ಬಗ್ಗೆ ವಿಚಾರಣೆಯಲ್ಲಿ ಆತನೇ ಹೇಳಿಕೊಂಡಿದ್ದಾನೆ.
ನಂತರ ಆತನಿಗೆ ಧೈರ್ಯ ತುಂಬಿ ಮನವೊಲಿಸಿದ ಪೊಲೀಸರು, ಅವನ ಪೋಷಕರನ್ನು ಫೋನ್ ಮುಖಾಂತರ ಸಂಪರ್ಕಿಸಿದ್ದಾರೆ. ಮನ ಪರಿವರ್ತನೆ ಮಾಡಿ ವಾಪಸ್ ಬೆಂಗಳೂರಿನ ಅವನ ಮನೆಗೆ ಕಳಿಸಿ ಕೊಟ್ಟ ಘಟನೆ ನಡೆದಿದ್ದು, ಸಾಕಷ್ಟು ಅಭಿನಂದನೆಗೆ ಕಾರಣವಾಗಿದೆ.