*ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ದೇಶಾದ್ಯಂತ 82 ಕೋಟಿ ರೂ.,ಗಳಿಗೂ ಹೆಚ್ಚಿನ ಹಣ ವಂಚಿಸಿದ್ದ ಮೂವರ ಬಂಧನ* *ಶಿವಮೊಗ್ಗದ ಇಬ್ಬರು- ಚಿಕ್ಕಮಗಳೂರಿನ ಓರ್ವನನ್ನು ಬಂಧಿಸಿ ಜೈಲಿಗಟ್ಟಿದ ಸೈಬರ್ ಕ್ರೈಂ ಪೊಲೀಸರು*

*ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ದೇಶಾದ್ಯಂತ 82 ಕೋಟಿ ರೂ.,ಗಳಿಗೂ ಹೆಚ್ಚಿನ ಹಣ ವಂಚಿಸಿದ್ದ ಮೂವರ ಬಂಧನ*

*ಶಿವಮೊಗ್ಗದ ಇಬ್ಬರು- ಚಿಕ್ಕಮಗಳೂರಿನ ಓರ್ವನನ್ನು ಬಂಧಿಸಿ ಜೈಲಿಗಟ್ಟಿದ ಸೈಬರ್ ಕ್ರೈಂ ಪೊಲೀಸರು*

15 ಮ್ಯೂಲ್ ಬ್ಯಾಂಕ್ ಖಾತೆಗಳ ಮೂಲಕ ದೇಶಾದ್ಯಂತ ವಂಚನೆ 82 ಕೋಟಿ ರೂ.,ಗಳಿಗೂ ಹೆಚ್ಚು ಹಣ ವಂಚಿಸಿದ್ದ ಮೂವರನ್ನು ಬಂಧಿಸಿರುವ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು, ಉಳಿದ ಆರೋಪಿಗಳಿಗೂ ಬಲೆ ಬೀಸಿದ್ದಾರೆ.

ಶಿವಮೊಗ್ಗ ಶರಾವತಿ ನಗರದ ಆರ್.ಸಿ.ಜಗದೀಶ್, ಚಿಕ್ಕಮಗಳೂರು ಶಂಕರಪುರದ ಅರ್ಷಾದ್, ಶಿವಮೊಗ್ಗ ಹೊಸಮನೆಯ ಟಿ.ಅನಂತರನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.

*ಏನಿದು ಪ್ರಕರಣ? ಪೊಲೀಸ್ ಪ್ರಕಟಣೆಯಲ್ಲೇನಿದೆ?*

09-02-2026 ರಂದು *ಫಿರ್ಯಾದುದಾರರಾದ ವಿಲ್ಸನ್‌ ವಿ ತಂದೆ ವಿನೋದ್‌ಕುಮಾರ್‌* ಎಂಬುವವರು ನೀಡಿದ ದೂರಿನ ಸಾರಾಂಶವೇನೆಂದರೆ *ಆರೋಪಿತನಾದ ಜಗದೀಶ ಇತನು ಬ್ಯಾಂಕ್‌ ಖಾತೆಗಳನ್ನು ಓಪನ್‌ ಮಾಡಿ ಕೊಟ್ಟಲ್ಲಿ ಕಮಿಷನ್ ನೀಡುವುದಾಗಿ* ನಂಬಿಸಿ, ವಿಲ್ಸನ್‌ ರವರ ಖಾತೆಯನ್ನು ಪಡೆದುಕೊಂಡು, ವಿಲ್ಸನ್‌ ರಂತೆ *ನಟಿಸಿ ವಂಚನೆಯ ಲಕ್ಷಾಂತರ ರೂ ಹಣವನ್ನು ವರ್ಗಾವಣೆ ಮಾಡಲು ದುರುಪಯೋಗ ಪಡಿಸಿಕೊಂಡಿದ್ದು* ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ *ಸೈಬರ್‌ ಕ್ರೈಂ ಪೊಲೀಸ್ ಠಾಣೆ ಗುನ್ನೆ ನಂ 21/2026 ಕಲಂ 66(D) IT ಆಕ್ಟ್ & 318(4), 319(2) BNS ರೀತ್ಯಾ ಪ್ರಕರಣ ದಾಖಲಿಸಿ ತನಿಖೆ* ಕೈಗೊಂಡಿರುತ್ತದೆ.

ಪ್ರಕರಣದಲ್ಲಿ ಆರೋಪಿ ಪತ್ತೆ ಬಗ್ಗೆ *ಶ್ರೀ ನಿಖೀಲ್ ಬಿ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಮತ್ತು *ಶ್ರೀ ಕಾರಿಯಪ್ಪ ಎ ಜಿ,* ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಹಾಗೂ *ಶ್ರೀ ರಮೇಶ್ ಕುಮಾರ್* ಹೆಚ್ಚುವರಿ ಪೊಲೀಸ್ ಅಧಿಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, *ಶ್ರೀ ಮಂಜುನಾಥ್ ಪೊಲೀಸ್ ನಿರೀಕ್ಷಕರು ಸೈಬರ್ ಕ್ರೈಂ ಪೊಲೀಸ್ ಠಾಣೆ* ರವರ ನೇತೃತ್ವದ ಸಿಬ್ಬಂಧಿಗಳಾದ *ಶೇಖರ ಎನ್, ಎಎಸ್ಐ, ಕಿರಣ್‌ ಕುಮಾರ್‌, ಚಂದ್ರಶೇಖರ ಸಿಹೆಚ್‌ಸಿ, ಗಿರೀಶ ಸ್ವಾಮಿ, ಆಂಡ್ರ್ಯೂಸ್‌ , ಮತ್ತು ಗೌತಮ್‌ ಜಿ ಎನ್ ಸಿಪಿಸಿ* ರವರುಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿಗಳಾದ
*ಎ1. ಜಗದೀಶ್ ಆರ್. ಸಿ ತಂದೆ ಚಾಮಯ್ಯ, 43 ವರ್ಷ, ಎಲೆಕ್ಟ್ರಾನಿಕ್ಸ್ ವ್ಯಾಪಾರ ಕೆಲಸ, ವಾಸ ಶಾರದಮ್ಮ ಕಾಂಪೌಂಡ್, ಶರಾವತಿ ನಗರ, ಶಿವಮೊಗ್ಗ.*
*ಎ2. ಅರ್ಷಾದ್ ತಂದೆ ಅಮೀರ್, 39 ವರ್ಷ, ಮೀನು ವ್ಯಾಪಾರಿ, ವಾಸ ಶಂಕರಪುರ,3 ನೇ ಕ್ರಾಸ್, ಚಿಕ್ಕಮಗಳೂರು.*
*ಎ3. ಅನಂತ. ಟಿ ತಂದೆ ತಿಪ್ಪೇಶ, 34 ವರ್ಷ , ಮಾರ್ಕೆಟಿಂಗ್ ನೆಟ್ ವರ್ಕ್ ಕೆಲಸ , 6 ನೇ ಮೈನ್ ರಸ್ತೆ, ವಜ್ರೇಶ್ವರಿ ದೇವಸ್ಥಾನದ ಹತ್ತಿರ, ಹೊಸಮನೆ ಶಿವಮೊಗ್ಗ,* ರವರನ್ನು ದಸ್ತಗಿರಿ ಮಾಡಿರುತ್ತದೆ.

ಸದರಿ ಆರೋಪಿತರ ಬಳಿ ವಿವಿಧ ಹೆಸರಿನಲ್ಲಿರುವ *15 Mule accounts* ಪತ್ತೆಯಾಗಿರುತ್ತವೆ. ಈ ಖಾತೆಗಳ ಮೇಲೆ ದೇಶಾದ್ಯಂತ ಒಟ್ಟು *352 ಕ್ಕೂ* ಹೆಚ್ಚು ಪ್ರಕರಣಗಳಿದ್ದು, ಅವುಗಳಲ್ಲಿ ಸುಮಾರು *82,00,15,712/- ರೂ* ಗೂ ಹೆಚ್ಚು ಹಣ ವಂಚನೆಯಾಗಿರುತ್ತದೆ.

ಸದರಿ ಆರೋಪಿತರು ವಂಚನೆಗೆ ಬಳಿಸಿದ *15 Mule accounts* ಗಳಲ್ಲಿ ಒಟ್ಟು *14,71,91,174/- ರೂ* ಗೂ ಹೆಚ್ಚು ಹಣ ವರ್ಗಾವಣೆಯಾಗಿರುತ್ತದೆ.

ಅಲ್ಲದೆ ಸದರಿ *ಆರೋಪಿಗಳಿಂದ* ಒಟ್ಟು *ಕೃತ್ಯಕ್ಕೆ ಬಳಸಿದ*
1) 02 Mobiles
2) 11 ATM card
3) 09 QR Code Scanner
4) 15 Airtel SIM cards
5) 15 Mule Bank Accounts *ವಶಪಡಿಸಿಕೊಳ್ಳಲಾಗಿರುತ್ತದೆ.*

ನಂತರ *ಸದರಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ* ನೀಡಿರುತ್ತೆ.

ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿತರ ಪತ್ತೆ ಕ್ರಮಕೈಗೊಂಡಿದ್ದು, ತನಿಖೆ ಮುಂದುವರಿದಿದೆ.