ಡಾ. ಅಯ್. ಎಫ್. ಮಾಳಗಿ REPORT-ಮದುವೆಯ ಮುಂಚೆಯೇ ಸಾವಿನಲ್ಲಿ ಒಂದಾದ ಸಂಗಾತಿಗಳು

ಮದುವೆಯ ಮುಂಚೆಯೇ ಸಾವಿನಲ್ಲಿ ಒಂದಾದ ಸಂಗಾತಿಗಳು.

ಶಿಕಾರಿಪುರ : ಜೀವನದ ಉದ್ದಕ್ಕೂ ಇನ್ನೂ ಬದುಕಿ ಬಾಳಬೇಕಾದವರು, ಹೊಸ ಆಸೆ ಕನಸುಗಳನ್ನು ಕಂಡವರು, ಇತರರಂತೆ ಬಾಳಿ ಬದುಕಬೇಕೆಂದವರು, ಕಂಡ ಕನಸು ನನಸಾಗದೆ ಮದುವೆಯ ಮುಂಚೆಯೇ ವಿಧಿಯ ಆಟಕ್ಕೆ ಬಲಿಯಾದ ದುರ್ದೈವಿಗಳು.
ಶಿಕಾರಿಪುರ ತಾಲೂಕಿನ ಮತ್ತಿ ಕೋಟಿ ಗ್ರಾಮದ ಮುದಿಗೌಡರ ಬಸವರಾಜಪ್ಪನ ಮಗಳು ರೇಖಾ ( 22 ) ಇದೆ ತಾಲೂಕಿನ ತೊಗರ್ಸಿ ಸಮೀಪ ಗಂಗೊಳ್ಳಿ ಗ್ರಾಮದ ಬಸವನಗೌಡ (24) ಎಕೋ ಮತ್ತು ಬೈಕ್ ಅಪಘಾತದಲ್ಲಿ ಶಿಕಾರಿಪುರ ಹೊರವಲಯ ಶಿರಾಳ ಕೊಪ್ಪ ರಸ್ತೆ ಕಿತ್ತೂರ ಚನ್ನಮ್ಮ ವಸತಿ ಶಾಲೆ ಹತ್ತಿರ ಪ್ರಾಣ ಕಳೆದುಕೊಂಡ ದುರ್ದೈವಿಗಳು.

ಕಳೆದ ತಿಂಗಳು ಶ್ರಾವಣ ಮಾಸದಲ್ಲಿ ಸಂಗಾತಿಗಳಾಗಲು ನಿಶ್ಚಯವಾಗಿತ್ತು. ಮದುವೆಯು ಸಹ ಮುಂದಿನ ತಿಂಗಳು ನಿರ್ಧಾರ ವಾಗಿತ್ತು ಇನ್ನು ಕೆಲವೇ ದಿನಗಳಲ್ಲಿ ಹಸಿ ಮಣಿ ಏರುವ ಉತ್ಸಾಹದಲ್ಲಿ ಇದ್ದ ಜೋಡಿ ಜೀವಗಳು..
ಮಾವನ ಮನೆಗೆ ಬಂದ ಅಳಿಯ ಬಸವನಗೌಡ,ದೇವರ ದರ್ಶನಕೆಂದು ದೇವಸ್ಥಾನಕ್ಕೆ ಹೊರಟವರು..! ಮಾವ ಬಸವರಾಜಪ್ಪ ಬೈಕ್ ಬಿಟ್ಟು ಬಸ್ಸಿಗೆ ಹೋಗಿ ಎಂದುಎಷ್ಟೋ ಸಲ ಹೇಳಿದರೂ ಹಿರಿಯರ ಮಾತು ಕೇಳದೆ ಬೈಕ್ ಮೇಲೆ ಹೊರಟ ಈ ಜೋಡಿ.. ಮದುವೆಯ ಮುಂಚೆ ಮಸಣ ಸೇರಿದ್ದು ವಿಪರ್ಯಾಸದ ಸಂಗತಿ.

ಹಿರಿಯರ ಮಾತು ಕೇಳಿದ್ದರೆ ಬದುಕಿ ಬಾಳತಿದ್ರೋ ಏನೋ..! ಆದರೆ ಜವುರಾಯ ಅಲ್ಲಿ ಅವರಿಗಾಗಿ ಕಾದು ಕುಳಿತಿದ್ದ, ಖುಷಿ ಖುಷಿಯಲ್ಲಿಯೇ ದೇವರ ದರುಶನ ಪಡೆಯಲು ಹೊರಟ ಈ ಜೋಡಿಗಳು ಕೂಡಿ ಬಾಳ ಬೇಕಾದ ಈ ನವ ಸಂಗಾತಿಗಳು ,ಸಾವಿನಲ್ಲೂ ಒಂದಾಗಿ ಸಾವು ಕಂಡ ಈ ಘಟನೆ ಹೆತ್ತವರ, ಬಂದು ಬಳಗದ,ಕಣ್ಣೀರಿನ ರೋಧನೆ ಪ್ರತಿಯೊಬ್ಬರ ಮನ ಮಿಡಿಯುವಂತಿತ್ತು. ಹೆತ್ತವರ ಮಾತು ಕೇಳಿದ್ರೆ .. ಈ ಘಟನೆ ನಡೆಯುತ್ತಿರಲಿಲ್ಲ.. ಜೀವನದಲ್ಲಿ ಒಂದಾಗಿ ಸಾಯುಬೇಕೆನ್ನುವ ಹಣೆ ಬರಹ ಹೀಗೆಯೇ ಸಾಯಬೇಕೆಂದು ಬರೆದಿದ್ದಾನೆ.. ವಿಧಿಯ ಕೈವಾಡದ ಮುಂದೆ ಯಾರು ದೊಡ್ಡವರಲ್ಲ.

ಡಾ. ಅಯ್. ಎಫ್. ಮಾಳಗಿ ಶಿಕಾರಿಪುರ.