ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪತ್ರಿಕಾಗೋಷ್ಠಿ* *ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್ ವಿರುದ್ಧ ಕಿಡಿಕಾರಿದ ಈಶ್ವರಪ್ಪ*
*ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪತ್ರಿಕಾಗೋಷ್ಠಿ*
*ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್ ವಿರುದ್ಧ ಕಿಡಿಕಾರಿದ ಈಶ್ವರಪ್ಪ*

ಆರ್.ಎಸ್.ಎಸ್. ನೂರನೇ ವರ್ಷಾಚರಣೆ ಆಚರಿಸುತ್ತಿದೆ
ಆರ್.ಎಸ್.ಎಸ್. ರಾಷ್ಟ್ರಭಕ್ತಿಬಗ್ಗೆ ವಿದೇಶದಲ್ಲೂ ಸಾಕಷ್ಟು ಪ್ರಶಂಸೆ
ಆದರೆ, ಪುಡಿ ರಾಜಕಾರಣಿಗಳು, ಚಿಲ್ಲರೆ ರಾಜಕಾರಣಿಗಳು ಮಾತನಾಡುತ್ತಿದ್ದಾರೆ
ಪ್ರಿಯಾಂಕ್ ಖರ್ಗೆ ಮತ್ತು ಹರಿಪ್ರಸಾದ್ ನಂತವರು ಹುಚ್ಚು ಹೇಳಿಕೆ ನೀಡಿ ಪತ್ರ ಬರೆದಿದ್ದಾರೆ
ಮುಖ್ಯಮಂತ್ರಿಗಳಾದರೂ ಆ ಪತ್ರ ಹರಿದು ಬಿಸಾಕಬೇಕಿತ್ತು
ಆದರೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಕಳಿಸಿದ್ದಾರೆ
ಇವನ್ಯಾವನ್ರೀ ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್ ?
ಆನೆ ನಡೆದುಕೊಂಡು ಹೋಗುವಾಗ ನಾಯಿಗಳು ಬೊಗಳುವುದು ಸಹಜ
ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಮುಖ್ಯತೆಯನ್ನು ಅರಿಯದೆ ಕೆಲವು ಕಾಂಗ್ರೇಸ್‌ನವರು ಅದನ್ನು ನಿಷೇಧಿಸುವ ಮಾತನಾಡುತ್ತಿದ್ದಾರೆ
ಸೇವೆಗಳನ್ನು ಮಾಡುತ್ತಿರುವ ಸ್ವಯಂಸೇವಕರಿಗೆ ಅವರಲ್ಲಿ ರಕ್ತಗತವಾದ ರಾಷ್ಟ್ರಪ್ರೇಮವೇ ಕಾರಣ
ಈ ಬಗ್ಗೆ ಏನೂ ಕಲ್ಪನೆ ಇಲ್ಲದ ವ್ಯಕ್ತಿ ಪ್ರಿಯಾಂಕ್ ಖರ್ಗೆ ಸಂಘವನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ
ಆರ್.ಎಸ್.ಎಸ್. ನೂರು ವರ್ಷಗಳನ್ನು ಪೂರೈಸಿರುವದನ್ನು ಸಹಿಸಲಾಗದ ಹತಾಷೆ ಮನೋಭಾವ ತೋರಿಸುತ್ತದೆ
ಪ್ರಿಯಾಂಕ್ ಖರ್ಗೆಯವರನ್ನು ಕರೆದು ಬುದ್ದಿ ಹೇಳುವುದನ್ನು ಬಿಟ್ಟು ಮುಖ್ಯಮಂತ್ರಿಗಳು ಅವರ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿದ್ದಾರೆ
ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದು ಸಿದ್ದರಾಮಯ್ಯನವರ ಬುದ್ದಿಗೇಡಿತನವನ್ನು ತೋರಿಸುತ್ತದೆ
ಹಿಂದುತ್ವದ ಕುರಿತಾದ ಸುಪ್ರೀಂ ಕೋರ್ಟ್ ಯಾವ ನಿಲುವನ್ನು ತನ್ನ ಹಲವು ತೀರ್ಪುಗಳಲ್ಲಿ ಪ್ರಕಟಿಸಿದೆಯೋ ಅದೇ ನಿಟ್ಟಿನಲ್ಲಿ ಸಂಘವು ಸಹಾ ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಿದೆ
ದೇಶದಲ್ಲಿ ಆರ್.ಎಸ್.ಎಸ್. ಸಕ್ರಿಯವಾಗಿರುವುದರಿಂದಲೇ ಇಂದು ಸನಾತನ ಹಿಂದೂ ಸಂಸ್ಕೃತಿಯ ರಕ್ಷಣೆ ಆಗುತ್ತಿದೆ
ನಿಜವಾಗಿಯೂ ಕಾಂಗ್ರೇಸಿಗರಿಗೆ ದೇಶದ್ರೋಹಿ ಸಂಘಟನೆಗಳನ್ನು ನಿಯಂತ್ರಿಸಬೇಕೆಂದಿದ್ದರೆ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವ ಎಸ್.ಡಿ.ಪಿ.ಐ. ಬೆಂಬಲಿಸುತ್ತಾರೆ
ನಿಷೇಧಿಸಿದ್ದರೂ ನಿಗೂಢವಾಗಿ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿರುವ ಪಿ.ಎಫ್.ಐ.ನಂತಹ ಭಯೋತ್ಪಾದನಾ ಸಂಘಟನೆಗಳನ್ನು ನಿಷೇಧಿಸಬೇಕು
ಸಿದ್ಧರಾಮಯ್ಯನವರ ಮುಖ್ಯಮಂತ್ರಿ ಸ್ಥಾನ ತೆಗೆಸಲೇ ಈ ರೀತಿ ಪತ್ರಬರೆಯಲಾಗಿದೆ
ಸಿದ್ಧರಾಮಯ್ಯನವರೇ ನಿಮಗೆ ಮುಖ್ಯಮಂತ್ರಿ ಸ್ಥಾನ ಬೇಡವಾದರೆ ಆರ್.ಎಸ್.ಎಸ್. ಸುದ್ಧಿಗೆ ಬನ್ನಿ
ಇಲ್ಲವಾದರೆ ನೀವು ಸುಮ್ಮನಿರಿ ಎಂದ ಈಶ್ವರಪ್ಪ
ಡಿಸಿಎಂ ಡಿ.ಕೆ. ಶಿವಕುಮಾರ್ ಏ ಕರಿ ಟೋಪಿ ಬಾ ಇಲ್ಲಿ ಎಂದು ಕರೆದು ನಿನ್ನೆ ಉದ್ಧಟತನ ತೋರಿದ್ದಾರೆ
ಡಿ.ಕೆ. ಶಿವಕುಮಾರ್ ಮೊದಲು ಉಪಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ನೀಡಲಿ
ಅವರು ಹಿಂದಿನಂತೆಯೇ ವರ್ತನೆ ತೋರಿಸುವುದನ್ನು ಬಿಟ್ಟು ಡಿಸಿಎಂ ಸ್ಥಾನಕ್ಕೆ ಗೌರವ ನೀಡಲಿ
ನಿಮಗೆ ತಾಕತ್ತಿದ್ದರೆ ಆರ್.ಎಸ್.ಎಸ್. ಚಟುವಟಿಕೆ ನಿಲ್ಲಿಸಲಿ ನೋಡೋಣ
ಕಾಂಗ್ರೆಸ್ ಗೆ ಸವಾಲು ಹಾಕಿದ ಮಾಜಿ ಡಿಸಿಎಂ ಈಶ್ವರಪ್ಪ
ನವೆಂಬರ್ ಕ್ರಾಂತಿ ಹುಟ್ಟು ಹಾಕಿದ್ದೆ ರಾಜಣ್ಣ
ಕಾಂಗ್ರೆಸ್ ನಲ್ಲಿ ಸಿಎಂ, ಡಿಸಿಎಂ ಬೇರೆ ಬೇರೆ ರೀತಿಯ ಹೇಳಿಕೆ ನೀಡುತ್ತಿದ್ದಾರೆ
ಸಚಿವ ಸಂಪುಟ ಬದಲಾವಣೆಯಾಗುತ್ತೆ ಅಂತಾ ಸಿಎಂ ಹೇಳ್ತಾರೆ
ಸಚಿವ ಸಂಪುಟ ಬದಲಾವಣೆ ಆಗುತ್ತೆ ಅಂತಾ ಡಿಸಿಎಂ ಹೇಳ್ತಾರೆ
ಇವರಿಬ್ಬರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ