ಟ್ರಾಫಿಕ್ ಪೊಲೀಸರ ಇ-ಚಲನ್ ಹೆಸರಲ್ಲಿ ಲೂಟಿ!* *ಶಿವಮೊಗ್ಗವೂ ಸೇರಿದಂತೆ ರಾಜ್ಯದಲ್ಲಿ ಲಕ್ಷಾಂತರ ರೂ. ದೋಚಿದ್ದಾರೆ ದುಷ್ಕರ್ಮಿಗಳು!* *ಟ್ರಾಫಿಕ್ ಪೊಲೀಸರಂತೆ ಸಂದೇಶ ಕಳುಹಿಸಿ ವಂಚನೆ*
*ಟ್ರಾಫಿಕ್ ಪೊಲೀಸರ ಇ-ಚಲನ್ ಹೆಸರಲ್ಲಿ ಲೂಟಿ!*
*ಶಿವಮೊಗ್ಗವೂ ಸೇರಿದಂತೆ ರಾಜ್ಯದಲ್ಲಿ ಲಕ್ಷಾಂತರ ರೂ. ದೋಚಿದ್ದಾರೆ ದುಷ್ಕರ್ಮಿಗಳು!*
*ಟ್ರಾಫಿಕ್ ಪೊಲೀಸರಂತೆ ಸಂದೇಶ ಕಳುಹಿಸಿ ವಂಚನೆ*
ಕರ್ನಾಟಕದೆಲ್ಲೆಡೆ ಸೈಬರ್ ವಂಚನೆಯ (Cyber Fraud) ಜಾಲ ಹೆಚ್ಚುತ್ತಿದೆ. ನಾನಾ ವಿಧದಲ್ಲಿ ಜನರನ್ನು ಮೂರ್ಖರನ್ನಾಗಿಸುವ ಈ ವಂಚಕರು, ಕೋಟಿಗಟ್ಟಲೆ ಹಣ ದೋಚುತ್ತಿದ್ದಾರೆ.
ಕೇವಲ ಶ್ರೀಮಂತ ವ್ಯಕ್ತಿಗಳಿಗೆ ಮೋಸ ಮಾಡುತ್ತಿದ್ದವರು ಈಗ ಜನ ಸಾಮಾನ್ಯರನ್ನೂ ಬಿಡುತ್ತಿಲ್ಲ. ಈ ನಡುವೆ ರಾಜ್ಯದ ಹಲವೆಡೆ ಈಗ ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ಇ-ಚಲನ್ ಕಳುಹಿಸಿ ವಂಚಿಸುವ ಜಾಲ ತಲೆಯೆತ್ತಿದೆ.
ಬೆಳಗಾವಿಯಲ್ಲಿ ವಾಹನ ಚಾಲಕರೊಬ್ಬರು 40,000 ರೂ.ಗಳನ್ನು ಕಳೆದುಕೊಂಡಿದ್ದಾರೆ.
*ಟ್ರಾಫಿಕ್ ಪೊಲೀಸರಂತೆ ಸಂದೇಶ ಕಳುಹಿಸಿ ವಂಚನೆ*
ಸೈಬರ್ ವಂಚಕರು ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ಮೊದಲಿಗೆ ಮೊಬೈಲ್ ಫೋನ್ಗಳಿಗೆ APK ಫೈಲ್ವೊಂದನ್ನು ಕಳುಹಿಸುತ್ತಾರೆ. ಸಾಮಾನ್ಯವಾಗಿ ಅಧಿಕೃತವೋ ಅನಧಿಕೃತವೋ ಎಂದು ತಿಳಿಯದೆ ಲಿಂಕ್ ಮೇಲೆ ಒತ್ತಿದಾಗ ನಿಮ್ಮ ಫೋನ್ನ ಪೂರ್ತಿ ಡಾಟಾ ವಂಚಕರ ಕೈಗೆ ಸೇರುತ್ತದೆ. ಬ್ಯಾಂಕ್ ಖಾತೆಯ ವಿವರವೂ ಅವರ ಕೈಸೇರುವುದರಿಂದ ಖಾತೆಯಲ್ಲಿರುವಷ್ಟು ಹಣವನ್ನೂ ದೋಚುತ್ತಾರೆ.
ಬೆಳಗಾವಿಯಲ್ಲೂ ಹಲವು ಬಾರಿ ಚಾಲಕರಿಗೆ ಇಂತಹ ಸಂದೇಶಗಳು ಬಂದಿದ್ದು, ಟ್ರಾಫಿಕ್ ಪೊಲೀಸರೆಂದು ಹೇಳಿಕೊಂಡು ಮೋಸ ಮಾಡಲಾಗಿತ್ತು. ನೀವು ಇನ್ನೂ ಬಾಕಿಯಿರುವ ಟ್ರಾಫಿಕ್ ದಂಡವನ್ನು ಪಾವತಿಸಿಲ್ಲ, ಅದನ್ನು ಪಾವತಿಸಬೇಕಾದಲ್ಲಿ ಒಂದು ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ ಎಂದು APK ಪೈಲ್ ಒಂದನ್ನು ಕಳುಹಿಸುತ್ತಾರೆ. ಅದನ್ನು ಡೌನ್ಲೋಡ್ ಮಾಡಿಕೊಂಡವರ ಪೂರ್ತಿ ಡಾಟಾ ವಂಚಕರ ಕೈ ಸೇರುತ್ತದೆ. ಹೀಗೆ ಬೆಳಗಾವಿಯ ವಾಹನ ಚಾಲಕರೊಬ್ಬರು 40,000 ರೂ.ಗಳನ್ನು ಕಳೆದುಕೊಂಡಿದ್ದಾರೆ.
ಶಿವಮೊಗ್ಗದಲ್ಲಿಯೂ ಇಂಥದ್ದೇ ಪ್ರಕರಣಗಳು ನಡೆದಿದ್ದು, ನಿವಾಸಿಯೊಬ್ಬರು ಇತ್ತೀಚೆಗೆ ಸಂಚಾರ ದಂಡವನ್ನು ಪರಿಶೀಲಿಸಲು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಎರಡು ಬ್ಯಾಂಕ್ ಖಾತೆಗಳಿಂದ 1.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
*ಈ ವಂಚನೆಯ ಜಾಲದಿಂದ ಬಚಾವಾಗುವುದು ಹೇಗೆ?*
APK ಫಲ್ ಕಳುಹಿಸುವವರನ್ನು ಪರಿಶೀಲಿಸಿ :ನಿಜವಾದ ಇ-ಚಲನ್ SMS ಸಂದೇಶಗಳು ವೈಯಕ್ತಿಕ ಫೋನ್ ಸಂಖ್ಯೆಯಿಂದಲ್ಲ, ಅಧಿಕೃತ ಸರ್ಕಾರಿ ಕಳುಹಿಸುವವರ ಐಡಿಗಳಿಂದ (ಉದಾ. VK-VAAHAN) ಬರುತ್ತವೆ.
ಲಿಂಕ್ ಅನ್ನು ಎಚ್ಚರಿಕೆಯಿಂದ ಪರೀಕ್ಷಿಸಿ: ಅಧಿಕೃತ ಲಿಂಕ್‌ಗಳು ಯಾವಾಗಲೂ .gov.in ನೊಂದಿಗೆ ಕೊನೆಗೊಳ್ಳುತ್ತವೆ. ವಂಚಕರು ಸಾಮಾನ್ಯವಾಗಿ ಒಂದೇ ರೀತಿಯ ಡೊಮೇನ್‌ಗಳನ್ನು (ಉದಾ. echallanparivahan.in) ಬಳಸುತ್ತಾರೆ.
ಬೆದರಿಕೆಗಳು ಮತ್ತು ತುರ್ತುಸ್ಥಿತಿಯ ಬಗ್ಗೆ ಎಚ್ಚರದಿಂದಿರಿ: ತಕ್ಷಣ ದಂಡ ಪಾವತಿಸದಿದ್ದರೆ ಕಾನೂನು ಕ್ರಮ ಅಥವಾ ಬಂಧನದ ಬೆದರಿಕೆ ಹಾಕುವ ಮೂಲಕ ಭಯವನ್ನು ಉಂಟುಮಾಡುತ್ತಾರೆ. ನಿಜವಾದ ಚಲನ್‌ಗಳಿಗೆ ಪಾವತಿ ಗಡುವು ಇರುತ್ತದೆ.
ವಿವರಗಳನ್ನು ಪರಿಶೀಲಿಸಿ: ನಕಲಿ ಸಂದೇಶಗಳು ಸಾಮಾನ್ಯವಾಗಿ ನಿಮ್ಮ ವಾಹನದ ಬಗ್ಗೆ ನಿರ್ದಿಷ್ಟ ವಿವರಗಳನ್ನು ಹೊಂದಿರುವುದಿಲ್ಲ. ಅಧಿಕೃತ ಸೂಚನೆಗಳು ಸಮಗ್ರ ಮಾಹಿತಿಯನ್ನು ಒಳಗೊಂಡಿರುತ್ತವೆ.
ಅಸಾಮಾನ್ಯ ಪಾವತಿ ವಿಧಾನಗಳನ್ನು ತಿರಸ್ಕರಿಸಿ: ನಿಜವಾದ ಚಲನ್‌ಗಳು ಸುರಕ್ಷಿತ, ಅಧಿಕೃತ ಗೇಟ್‌ವೇಗಳ ಮೂಲಕ ಮಾತ್ರ ಪಾವತಿಯನ್ನು ಬಯಸುತ್ತವೆ. ವಂಚಕರು ವೈಯಕ್ತಿಕ ಖಾತೆಗಳಿಗೆ ಅಥವಾ QR ಕೋಡ್‌ಗಳಿಗೆ ನೇರ ಬ್ಯಾಂಕ್ ವರ್ಗಾವಣೆಗಳಂತಹ ವಿಧಾನಗಳ ಮೂಲಕ ಪಾವತಿಗೆ ಬೇಡಿಕೆ ಇಡಬಹುದು.
ಅನುಮಾನಾಸ್ಪದ ಅಪ್ಲಿಕೇಶನ್‌ಗಳನ್ನು ನಿರಾಕರಿಸಿ: SMS ಮೂಲಕ ಕಳುಹಿಸಲಾದ ಲಿಂಕ್‌ನಿಂದ ಅಪ್ಲಿಕೇಶನ್ ಅನ್ನು ಎಂದಿಗೂ ಡೌನ್‌ಲೋಡ್ ಮಾಡಬೇಡಿ