ಶಿವಮೊಗ್ಗದ ಕೊಮ್ಮನಾಳ್ ಸುತ್ತಮುತ್ತಲಿನಲ್ಲಿ ಬೃಹತ್ ಮಣ್ಣು ಮಾಫಿಯಾ!* *ಉಂಬಳೇಬೈಲಿನ ದುಃಖತಪ್ತ ಗೌಡರೆಂಬ ರಾಜಕಾರಣಿಯ ಜೊತೆ ಮಣ್ಣು ಲೂಟಿಕೋರರ ಮಹಾ ಲೂಟಿ!!* *ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಶಾಮೀಲು?* *ತೋಟಕ್ಕೆಂದು ನೂರಾರು ಲೋಡ್ ಮಣ್ಣು ಲೂಟಿ ಮಾಡುತ್ತಿರುವ ಆ ರಾಜಕಾರಣಿ ಯಾರು ಗೊತ್ತಾ?* *ಎಲ್ಲಿಗೆ ಹೋಗುತ್ತಿದೆ ಈ ಬೆಲೆಬಾಳುವ ಮಣ್ಣು(ಗ್ರಾವೆಲ್)?* *ಇಲ್ಲಿದೆ ಸಂಪೂರ್ಣ ದಾಖಲೆ ಸಮೇತದ ವಿಶೇಷ ವರದಿ👇*

*ಶಿವಮೊಗ್ಗದ ಕೊಮ್ಮನಾಳ್ ಸುತ್ತಮುತ್ತಲಿನಲ್ಲಿ ಬೃಹತ್ ಮಣ್ಣು ಮಾಫಿಯಾ!*

*ಉಂಬಳೇಬೈಲಿನ ದುಃಖತಪ್ತ ಗೌಡರೆಂಬ ರಾಜಕಾರಣಿಯ ಜೊತೆ ಮಣ್ಣು ಲೂಟಿಕೋರರ ಮಹಾ ಲೂಟಿ!!*

*ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಶಾಮೀಲು?*

*ತೋಟಕ್ಕೆಂದು ನೂರಾರು ಲೋಡ್ ಮಣ್ಣು ಲೂಟಿ ಮಾಡುತ್ತಿರುವ ಆ ರಾಜಕಾರಣಿ ಯಾರು ಗೊತ್ತಾ?*

*ಎಲ್ಲಿಗೆ ಹೋಗುತ್ತಿದೆ ಈ ಬೆಲೆಬಾಳುವ ಮಣ್ಣು(ಗ್ರಾವೆಲ್)?*

*ಇಲ್ಲಿದೆ ಸಂಪೂರ್ಣ ದಾಖಲೆ ಸಮೇತದ ವಿಶೇಷ ವರದಿ👇*

ಶಿವಮೊಗ್ಗದ ಕೊಮ್ಮನಾಳ್ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲೀಗ ಅಕ್ರಮ ಮಣ್ಣು ಸಾಗಾಣಿಕೆ ಮಾಫಿಯಾ ತಲೆ ಎತ್ತಿದೆ. ಈ ಮಾಫಿಯಾಕ್ಕೆ ಕಿಂಗ್ ಪಿನ್ ನಂತೆ ಕೆಲಸ ಮಾಡುತ್ತಿರುವುದು ಮತ್ತು ಅಕ್ರಮ ಮಣ್ಣು ಸಾಗಿಸಲು ವಾಹನಗಳ ಸೇವೆ ನೀಡುತ್ತಿರುವುದು ಉಂಬಳೇಬೈಲಿನ ಪ್ರಮುಖ ಪಕ್ಷವೊಂದರ ರಾಜಕಾರಣಿ ದುಃಖತಪ್ಪ ಗೌಡರು!

ಈ ದುಃಖತಪ್ತ ಗೌಡರು ತಮ್ಮದೇ ಸರ್ಕಾರವಿದ್ದರೂ ಅದರ ತಲೆ ತಗ್ಗಿಸುವಂಥ ಕೆಲಸಕ್ಕೆ ಇಳಿದಿರುವುದು ದುರಂತವೇ ಸೈ.

ಕೊಮ್ಮನಾಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಣ್ಣಿನ ಬಹಳಷ್ಟು ಗುಡ್ಡ ಬೆಟ್ಟಗಳಿವೆ. ಈಗಾಗಲೇ ಇದೆಲ್ಲ ಲೂಟಿಯಾಗಿವೆ. ರಸ್ತೆ ಇತ್ತ ಕಡೆಯಿಂದ ನೋಡಿದರೆ ಇನ್ನೂ ಗುಡ್ಡ ಬೆಟ್ಟಗಳು ಇವೆಯಲ್ಲ ಎನಿಸುವ ಭ್ರಮೆ ಹುಟ್ಟು ಹಾಕಲಾಗಿದೆ. ಅತ್ತ ಕಡೆ ಹೋಗಿ ನೋಡಿದರೆ ಎಲ್ಲ ಮಣ್ಣೂ ಮಂಗ ಮಾಯ.

ಹಗಲು- ರಾತ್ರಿ ಎನ್ನದೇ ಈ ಭಾಗಗಳಲ್ಲಿ ಪ್ರತಿ ದಿನ 150-200 ಲೋಡ್ ಬೆಲೆ ಬಾಳುವ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಸರ್ಕಾರದ ಖಜಾನೆಗೆ ಒಂದೇ ಒಂದು ರೂಪಾಯಿಯೂ ಕೊಡದಂತೆ ಸಾಗಿಸಲಾಗುತ್ತಿರುವ ಈ ಮಣ್ಣು ಬಹಳ ಬೆಲೆಬಾಳುವಂತಹ ಗ್ರಾವೆಲ್ ಮಣ್ಣು. ಒಂದು ಲಾರಿ ಲೋಡಿಗೆ ಇದರ ಬೆಲೆ 50,000₹ ಗಳವರೆಗೆ ಇದೆ. ಇಂಥ ಗುಣಮಟ್ಟದ ಮಣ್ಣನ್ನು ಎಲ್ಲರ ಕಣ್ಣೆದುರೇ ಲೂಟಿ ಮಾಡುತ್ತಿದ್ದಾರೆ ಕಳ್ಳರು. ಈ ಮಣ್ಣು ನನ್ನ ತೋಟಕ್ಕೆ ಸಾಗಿಸ್ತಿದ್ದೇನೆ ಅಂತ ದುಃಖತಪ್ತ ಗೌಡರು ಹೇಳುವುದು ನೋಡಿದರೆ ಈ ಗೌಡರ ತೋಟ ಎಷ್ಟು ಸಾವಿರ ಎಕರೆಯಷ್ಟಿದೆ? ಎಂಬ ಪ್ರಶ್ನೆ ಹುಟ್ಟುತ್ತೆ.

ನಿಜ ಹೇಳಬೇಕೆಂದರೆ, ಗೌಡರ ಲಾರಿಗಳಲ್ಲಿ ಸಾಗುತ್ತಿರುವ ಈ ಅಕ್ರಮ ಮಣ್ಣು ಮಾರಲ್ಪಡುತ್ತಿದೆ. ಲೇಔಟ್ ಗಳಿಗೆ, ರಸ್ತೆ, ರೈಲು ಕಾಮಗಾರಿಗಳಿಗೆ ಮಾರಾಟವಾಗುತ್ತೆ.

ರೈತರ ಜಮೀನು ಮಟ್ಟ ಮಾಡಿಕೊಡುತ್ತೇವೆಂದು ಹೇಳಿಯೂ ಇಡೀ ಜಮೀನನ್ನೇ ಬಗೆದು ಬಳ್ಳಾರಿಯ ನೆನಪು ಮಾಡಿಕೊಡುತ್ತಾರೆ.

ಈ ಸಾವಿರಾರು ಲೋಡು ಮಣ್ಣು ಸಾಗಿಸುತ್ತಿರುವ ಮಣ್ಣು ಕಳ್ಳರ ಜೊತೆ ಉಂಬಳೇಬೈಲಿನ ದುಃಖತಪ್ಪ ಗೌಡರೇನೋ ವಾಹನಗಳನ್ನು ಕೊಟ್ಟು ವ್ಯವಹಾರಕ್ಕಿಳಿದುಬಿಟ್ಟಿದ್ದಾರೆ.

ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಣ್ಣು ತಿನ್ನುತ್ತಿದ್ದಾರಾ? ಯಾವ ಅಧಿಕಾರಿಯೂ ಈ ಬೆಲೆಬಾಳುವ ಮಣ್ಣನ್ನು ಉಳಿಸಿಕೊಳ್ಳಲು ಯಾಕೆ ತೊಡೆ ತಟ್ಟಿ ನಿಂತಿಲ್ಲ?

ಇವರಿಗೂ ಮಣ್ಣು ಮೃಷ್ಟಾನ್ನ ಭೋಜನವಾಗಿ ಹೋಯ್ತಾ?

ದಾಖಲೆಗಳು ಬೇಕಾದರೆ ನೀಡಲು ಸಿದ್ಧ. ಆದರೆ, ಅಂಥ ಪ್ರಾಮಾಣಿಕ ಅಧಿಕಾರಿಗಳು ಬೇಕಲ್ಲ