*ಏಕಾಏಕಿ ಸ್ತಬ್ಧವಾಗಲಿದೆ ಬಸ್ ಸಂಚಾರ!* *ದಿಢೀರ್ ಮುಷ್ಕರಕ್ಕೆ ಸಾರಿಗೆ ನೌಕರರ ಸಿದ್ಧತೆ!!* بس ٹریفک اچانک رک جائے گی!* *ٹرانسپورٹ ملازمین کی اچانک ہڑتال کی تیاری!!!* *Bus traffic will come to a sudden halt!* *Transport employees prepare for sudden strike!!*
*ಏಕಾಏಕಿ ಸ್ತಬ್ಧವಾಗಲಿದೆ ಬಸ್ ಸಂಚಾರ!*
*ದಿಢೀರ್ ಮುಷ್ಕರಕ್ಕೆ ಸಾರಿಗೆ ನೌಕರರ ಸಿದ್ಧತೆ!!*
بس ٹریفک اچانک رک جائے گی!*
*ٹرانسپورٹ ملازمین کی اچانک ہڑتال کی تیاری!!!*
*Bus traffic will come to a sudden halt!*
*Transport employees prepare for sudden strike!!*
ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕು ನಿಗಮಗಳ ನೌಕರರು ಇದೀಗ ಮತ್ತೆ ಸಾರಿಗೆ ಮುಷ್ಕರಕ್ಕೆ (Transport Strike) ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆಗಸ್ಟ್ 5 ರಂದು ನಾಲ್ಕು ನಿಗಮಗಳ ನೌಕರರು ಸಾರಿಗೆ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರವನ್ನು ಕೈಬಿಡಲಾಗಿತ್ತು. ಆದರೆ ಈ ಬಾರಿ ಮುಷ್ಕರದ ದಿನಾಂಕವನ್ನು ಘೋಷಣೆ ಮಾಡದೆ ಹಠಾತ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಇದು ಪ್ರಯಾಣಿಕರನ್ನು, ಸಾರ್ವಜನಿಕರನ್ನು ಹಠಾತ್ ಸಮಸ್ಯೆಗೆ ಈಡುಮಾಡಲಿದೆ.
ಸಾರಿಗೆ ನೌಕರರ ಬೇಡಿಕೆಗಳ ಸಂಬಂಧ ಶನಿವಾರ ಸಾರಿಗೆ ಸಚಿವರ ಜೊತೆಗೆ ಸಭೆ ನಡೆದಿತ್ತು. ಆದರೆ, ಬೇಡಿಕೆಗಳ ಈಡೇರಿಕೆ ಸಂಬಂಧ ಒಮ್ಮತಕ್ಕೆ ಬಾರದ ಹಿನ್ನೆಲೆ, ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗುತ್ತಿದ್ದಾರೆ. ಈಗಾಗಲೇ ಸಿಎಂ ಜೊತೆಗೆ ನಾಲ್ಕು ಸುತ್ತಿನ ಸಭೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆಗೆ ಮೂರು ಸುತ್ತಿನ ಸಭೆ ನಡೆದಿದ್ದರೂ, ಸರ್ಕಾರ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮತ್ತು ವೇತನ ಹಿಂಬಾಕಿ ನೀಡಲು ಮುಂದಾಗುತ್ತಿಲ್ಲ ಎನ್ನಲಾಗಿದೆ.
ಹೀಗಾಗಿ ಇದೀಗ ಸಾರಿಗೆ ನೌಕರರು ಬುಧವಾರದಿಂದ ಮತ್ತೆ ರಾಜ್ಯದ ಎಲ್ಲಾ ಬಸ್ ಡಿಪೋಗಳಿಗೆ ಭೇಟಿ ನೀಡಿ ಮುಷ್ಕರಕ್ಕೆ ಸಿದ್ದರಾಗಲು ಮನವಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿನಾಂಕ ನಿಗದಿ ಮಾಡಿ ಮುಂಚಿತವಾಗಿ ಮಾಹಿತಿ ನೀಡಿದರೆ ಸರ್ಕಾರ ಮತ್ತೆ ಮುಷ್ಕರಕ್ಕೆ ಅಡ್ಡಿ ಮಾಡಬಹುದು ಎಂಬ ಚಿಂತೆ ಸಾರಿಗೆ ನಕರರು, ಮುಖಂಡರದ್ದು. ಹಾಗಾಗಿ ಈ ಬಾರಿ ದಿನಾಂಕ ನಿಗದಿ ಮಾಡದೆ ಸಾರಿಗೆ ನೌಕರರು ಸರ್ಕಾರಕ್ಕೆ ಟಕ್ಕರ್ ಕೊಡಲು ಪ್ಲ್ಯಾನ್ ಮಾಡಿದ್ದಾರೆ. ಕಾರ್ಮಿಕ ಇಲಾಖೆಗೆ ಮುಷ್ಕರದ ನೋಟಿಸ್ ಕೂಡ ನೀಡದೆ ಏಕಾಏಕಿ ಬಸ್ಸುಗಳ ಸಂಚಾರ ನಿಲ್ಲಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರೋರಾತ್ರಿ ಸಾರಿಗೆ ಮುಖಂಡರು ವಾಟ್ಸಾಪ್ ಮೂಲಕ ಸಂದೇಶ ಕಳಿಸಿ ಬಸ್ ಸಂಚಾರ ನಿಲ್ಲಿಸಲಿದ್ದಾರಂತೆ.
38 ತಿಂಗಳ ವೇತನ ಮತ್ತು 2024 ಜನವರಿಯಿಂದ 1.20 ಲಕ್ಷ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡಬೇಕಿತ್ತು. ಆದರೆ 2025 ಡಿಸೆಂಬರ್ ಬಂದರೂ ವೇತನ ಹೆಚ್ಚಳ ಮಾಡಲು ಮುಂದಾಗಿಲ್ಲ. ಒಟ್ಟಿನಲ್ಲಿ ಸಾರಿಗೆ ನೌಕರರಿಗೆ ಸರ್ಕಾರ ನೀಡಬೇಕಿರುವ ಹಿಂಬಾಕಿ ನೀಡಲ್ಲ, ವೇತನ ಹೆಚ್ಚಳ ಮಾಡಲ್ಲ. ನೌಕರರ ಯಾವ ಬೇಡಿಕೆಯನ್ನು ಸರ್ಕಾರ ಈಡೇರಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುವುದಂತೂ ಗ್ಯಾರಂಟಿ.
*بس ٹریفک اچانک رک جائے گی!*
*ٹرانسپورٹ ملازمین کی اچانک ہڑتال کی تیاری!!!*
کے ایس آر ٹی سی اور بی ایم ٹی سی سمیت چار کارپوریشنوں کے ملازمین اب ایک اور ٹرانسپورٹ ہڑتال کی تیاری کر رہے ہیں۔ 5 اگست کو چاروں کارپوریشنوں کے ملازمین نے ٹرانسپورٹ ہڑتال پر جانے کا منصوبہ بنایا تھا۔ تاہم ہائی کورٹ کے حکم کے بعد ہڑتال ختم کر دی گئی۔ لیکن اس بار، انہوں نے ہڑتال کی تاریخ کا اعلان کیے بغیر اچانک خدمات بند کرنے کا فیصلہ کیا ہے۔ جس سے مسافروں اور عوام کو اچانک پریشانی کا سامنا کرنا پڑے گا۔
ہفتہ کو ٹرانسپورٹ ملازمین کے مطالبات کے حوالے سے وزیر ٹرانسپورٹ سے ملاقات ہوئی۔ تاہم مطالبات کی تکمیل کے حوالے سے اتفاق رائے نہ ہونے کی وجہ سے ٹرانسپورٹ ملازمین دوبارہ ہڑتال پر جانے کا سوچ رہے ہیں۔ حالانکہ چیف منسٹر کے ساتھ میٹنگ کے چار دور اور وزیر ٹرانسپورٹ راملنگا ریڈی کے ساتھ میٹنگ کے تین دور ہوچکے ہیں لیکن کہا جاتا ہے کہ حکومت ٹرانسپورٹ ملازمین کی تنخواہوں میں اضافہ اور تنخواہ کے بقایا جات کو لے کر آگے نہیں بڑھ رہی ہے۔
اس لیے ذرائع نے بتایا کہ اب ٹرانسپورٹ ملازمین بدھ سے دوبارہ ریاست کے تمام بس ڈپو کا دورہ کریں گے اور ان سے ہڑتال کے لیے تیار رہنے کی اپیل کریں گے۔
ٹرانسپورٹ ورکرز اور لیڈروں کو خدشہ ہے کہ اگر حکومت تاریخ طے کر کے پہلے سے اطلاع دے دیتی ہے تو وہ دوبارہ ہڑتال میں رکاوٹ بن سکتی ہے۔ اس لیے اس بار ٹرانسپورٹ ملازمین نے تاریخ طے کیے بغیر حکومت سے ٹکرانے کا منصوبہ بنایا ہے۔ وہ محکمہ محنت کو ہڑتال کا نوٹس دیے بغیر اچانک بس ٹریفک کو روکنے کی تیاری کر رہے ہیں۔ لگتا ہے کہ ٹرانسپورٹ قائدین واٹس ایپ کے ذریعے پیغام بھیج کر راتوں رات بسوں کی آمدورفت روک دیں گے۔
38 ماہ کی تنخواہ اور 1.20 لاکھ ٹرانسپورٹ ملازمین کو جنوری 2024 سے تنخواہ میں اضافہ ملنا تھا لیکن دسمبر 2025 کے بعد بھی تنخواہ میں اضافے کے لیے کوئی پیش رفت نہیں ہوئی۔ مجموعی طور پر حکومت ٹرانسپورٹ ملازمین کو وہ بیک پے نہیں دے رہی جو کہ دی جانی چاہیے اور نہ ہی تنخواہوں میں اضافہ کیا جا رہا ہے۔ حکومت ملازمین کے کسی مطالبے کو پورا کرنے کے آثار نظر نہیں آتے۔ اس سے مسافروں کو پریشانی کا سامنا کرنا پڑتا ہے۔
*Bus traffic will come to a sudden halt!*
*Transport employees prepare for sudden strike!!*
Employees of four corporations including KSRTC and BMTC are now preparing for another transport strike. On August 5, employees of the four corporations had planned to go on a transport strike. However, the strike was called off following a High Court order. But this time, they have decided to stop the services suddenly without announcing the date of the strike. This will cause sudden problems for passengers and the public.
A meeting was held with the Transport Minister on Saturday regarding the demands of transport employees. However, due to the lack of consensus regarding the fulfillment of the demands, transport employees are planning to go on strike again. Although four rounds of meetings have already been held with the CM and three rounds of meetings with Transport Minister Ramalinga Reddy, it is said that the government is not moving forward with the salary hike and salary arrears for transport employees.
Therefore, sources said that now the transport employees will visit all the bus depots in the state again from Wednesday and appeal to them to get ready for the strike.
Transport workers and leaders are worried that the government may obstruct the strike again if they fix a date and give information in advance. Therefore, this time the transport employees have planned to hit the government without fixing a date. They are preparing to stop the bus traffic suddenly without even giving a strike notice to the labor department. It seems that the transport leaders will stop the bus traffic overnight by sending a message through WhatsApp.
38 months of salary and 1.20 lakh transport employees were supposed to get a salary increase from January 2024. But even after December 2025, there is no move to increase the salary. Overall, the government is not giving the back pay that should be given to the transport employees, nor is there a salary increase. There is no sign that the government will fulfill any of the demands of the employees. This is guaranteed to cause problems for the passengers.


