*ಶಾಮನೂರು ಶಿವಶಂಕರಪ್ಪ ನಿಧನ; ಸಂತಾಪ ಸೂಚಿಸಿ ಕಣ್ಣೀರು ಹಾಕಿದ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ* *شمانور شیواشنکرپا کا انتقال وزیر تعلیم ایس مدھو بنگارپا نے تعزیت میں آنسو بہائے* *Shamanur Shivashankarappa passes away; Education Minister S. Madhu Bangarappa sheds tears in condolence*
*ಶಾಮನೂರು ಶಿವಶಂಕರಪ್ಪ ನಿಧನ; ಸಂತಾಪ ಸೂಚಿಸಿ ಕಣ್ಣೀರು ಹಾಕಿದ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ*
*شمانور شیواشنکرپا کا انتقال وزیر تعلیم ایس مدھو بنگارپا نے تعزیت میں آنسو بہائے*
*Shamanur Shivashankarappa passes away; Education Minister S. Madhu Bangarappa sheds tears in condolence*
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷರು, ಹಿರಿಯ ನಾಯಕರು ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಇಂದು ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಯಿತು ಎಂದು ಜಿಲ್ಲಾ ಉಸ್ತುವಾರಿ, ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಸಂತಾಪ ಸೂಚಿಸಿದರು.
ನಮ್ಮ ತಂದೆ ಶ್ರೀ ಬಂಗಾರಪ್ಪಾಜಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆತ್ಮೀಯ ಒಡನಾಡಿಗಳಾಗಿ, ರಾಜ್ಯಮಟ್ಟದಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿ ಹೊಂದಿದ್ದಾರೆ. ನಮ್ಮನ್ನು ಸಹ ಅತ್ಯಂತ ಆತ್ಮೀಯವಾಗಿ , ಪ್ರೀತಿ–ವಿಶ್ವಾಸದಿಂದ ಮಾತನಾಡಿಸಿ ಮಾರ್ಗದರ್ಶನ ನೀಡುತ್ತಿದ್ದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರನ್ನು ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅವರ ನೆನಪುಗಳು ಮತ್ತು ಮಾರ್ಗದರ್ಶನ ಸದಾ ನಮ್ಮೊಂದಿಗೇ ಶಾಶ್ವತವಾಗಿ ಉಳಿಯುತ್ತವೆ ಎಂದರು.
ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಮಾಜದ ಏಳಿಗೆಗೆ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಸಚಿವ ಸಂಪುಟದ ಸಹೋದ್ಯೋಗಿ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಕುಟುಂಬ ವರ್ಗದವರಿಗೆ, ಬಂಧು ಮಿತ್ರರಿಗೆ ಹಾಗೂ ಅವರ ಅಭಿಮಾನಿಗಳಿಗೆ ದುಖಃ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಸಂತಾಪ ಪತ್ರದಲ್ಲಿ ಕಣ್ಣೀರು ಹಾಕಿ, ಧೈರ್ಯ ತುಂಬಿದ್ದಾರೆ.
* شمانور شیواشنکرپا کا انتقال وزیر تعلیم ایس مدھو بنگارپا نے تعزیت میں آنسو بہائے*
ضلع انچارج وزیر تعلیم ایس مادھو بنگارپا نے کہا کہ شمانور شیواشنکرپا کے انتقال کے بارے میں جان کر بہت دکھ ہوا، آل انڈیا ویر شیوا لنگایت مہاسبھا کے اعزازی صدر، سینئر لیڈر اور ایم ایل اے، آج
ہمارے والد، شری بنگارپا، وزیر اعلی کے طور پر اپنے دور میں ایک قریبی کامریڈ تھے اور ریاستی سطح پر بہت سے عوامی کام کرنے کے لیے مشہور ہیں۔ ہم شمانور شیواشنکرپا کو نہیں بھول سکتے، وہ بزرگ جو ہم سے بہت گہرے، پیار اور بھروسے کے ساتھ بات کرتے تھے اور ہماری رہنمائی کرتے تھے۔ انہوں نے کہا کہ ان کی یادیں اور رہنمائی ہمیشہ ہمارے ساتھ رہے گی۔
انہوں نے کہا کہ انہوں نے وسطی کرناٹک کے داونگیرے میں تعلیمی ادارے قائم کرکے اور لاکھوں طلباء کو اعلیٰ تعلیم فراہم کرکے معاشرے کی ترقی میں منفرد کردار ادا کیا ہے۔
مرحوم کی روح کی ابدی سکون کے لیے دعا کرتے ہوئے، انھوں نے اپنے تعزیتی خط میں اپنے کابینہ کے ساتھی ایس ایس ملیکارجن، ان کے خاندان، دوستوں اور مداحوں کے غم کو برداشت کرنے کی طاقت کے لیے دعا کی۔
*Shamanur Shivashankarappa passes away; Education Minister S. Madhu Bangarappa sheds tears in condolence*
It was very sad to learn about the passing away of Shamanur Shivashankarappa, honorary president of the All India Veerashaiva Lingayat Mahasabha, senior leader and MLA, today, said District In-charge, Education Minister S. Madhu Bangarappa.
Our father, Shri Bangarappa, was a close comrade during his tenure as Chief Minister and is renowned for doing many public works at the state level. We cannot forget Shamanur Shivashankarappa, the elder who used to speak to us very intimately, with love and trust, and guide us. His memories and guidance will always remain with us forever, he said.
He said that he has made a unique contribution to the progress of society by establishing educational institutions in Davangere, Central Karnataka, and providing higher education to lakhs of students.
Praying for the eternal peace of the departed soul, he prayed for the strength to bear the grief of his cabinet colleague S.S. Mallikarjuna, his family, friends and fans, through tears and courage, in his condolence letter.


