*ಡಿ 28, 29 ಮತ್ತು 30ರಂದು ಯಾದಗಿರಿಯಲ್ಲಿ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ* *ಸಾಹಿತ್ಯ ಕ್ಷೇತ್ರಕ್ಕೆ ವಿ.ಟಿ.ಸ್ವಾಮಿ ಸಾಗರ ಇವರಿಗೆ ವಿಶೇಷ ಸಾಹಿತ್ಯ ಸೇವಾ ರತ್ನ” ರಾಜ್ಯ ಮಟ್ಟದ ಪ್ರಶಸ್ತಿ* *ಹೆಚ್.ಎನ್.ಪ್ರಶಸ್ತಿ ವಿರೂಪಾಕ್ಷ ಎಸ್.ಡಿ.* *ಚೈತನ್ಯಶ್ರೀ ಪ್ರಶಸ್ತಿ ಸೊರಬದ ಪವಿತ್ರರಿಗೆ*
*ಡಿ 28, 29 ಮತ್ತು 30ರಂದು ಯಾದಗಿರಿಯಲ್ಲಿ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ*
*ಸಾಹಿತ್ಯ ಕ್ಷೇತ್ರಕ್ಕೆ ವಿ.ಟಿ.ಸ್ವಾಮಿ ಸಾಗರ ಇವರಿಗೆ ವಿಶೇಷ ಸಾಹಿತ್ಯ ಸೇವಾ ರತ್ನ” ರಾಜ್ಯ ಮಟ್ಟದ ಪ್ರಶಸ್ತಿ*
*ಹೆಚ್.ಎನ್.ಪ್ರಶಸ್ತಿ ವಿರೂಪಾಕ್ಷ ಎಸ್.ಡಿ.*
*ಚೈತನ್ಯಶ್ರೀ ಪ್ರಶಸ್ತಿ ಸೊರಬದ ಪವಿತ್ರರಿಗೆ*
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ವತಿಯಿಂದ 2025 ಡಿಸೆಂಬರ್ 28, 29 ಮತ್ತು 30 ರಂದು ಮೂರುದಿನಗಳ ಕಾಲ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನವನ್ನು ಯಾದಗಿರಿಯ ಜಿಲ್ಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಡಿ.ರವಿಕುಮಾರ್ ಹೇಳಿದರು.
ಅವರು ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಾ.ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹೆಸರಾಂತ ವಿಜ್ಞಾನಿ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ.ಎ.ಎಸ್.ಕಿರಣ್ ಕುಮಾರ್ ಹಾಗೂ ಜಸ್ಟೀಸ್ ನಾಗಮೋಹನ್ ದಾಸ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪರಿಷತ್ತು ಆರಂಭವಾಗಿ ಐದು ವರ್ಷಗಳು ತುಂಬಿದ್ದು ಈಗಾಗಲೇ ರಾಜ್ಯದ ಉದ್ದಗಲಕ್ಕೂ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಶಾಖೆಗಳನ್ನು ಆರಂಭಿಸಿ ಈ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಈಗಾಗಲೇ ಐವತ್ತು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿರುವ ಸಂಸ್ಥೆ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸತ್ತ ಬಂದಿದೆ. ನಾಯಕತ್ವ ಕಾರ್ಯಾಗಾರ, ನಾನೂ ವಿಜ್ಞಾನಿ ಶಿಬಿರ, ವೃತ್ತಿ ನಿರತ ನೌಕರರಿಗೆ ವೃತ್ತಿ ಮಾರ್ಗದರ್ಶನ, ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಶ್ರಮಿಕ ವರ್ಗದವರಿಗೆ ಮೇ 1 ರಂದು ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪ್ರತಿ ವರ್ಷ ಡಿಸೆಂಬರ್ ನಲ್ಲಿ ಬರುವ ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸಾಧಕರಿಗೆ ಹೆಚ್.ಎನ್.ಪ್ರಶಸ್ತಿ, ಮಹಿಳೆಯರಿಗೆ ಚೈತನ್ಯಶ್ರೀ ಪ್ರಶಸ್ತಿಯನ್ನು ವಿಶೇಷ ಸಾಧಕ ಸೇವಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಇಸೊ, ಡಿ.ಆರ್.ಡಿ.ಓ, ನೆಹರೂ ತಾರಾಲಯ ಹಾಗೂ ವಿವಿಧ ವಿಜ್ಞಾನ ಸಂಸ್ಥೆಗಳು ವಿಜ್ಞಾನ ವಸ್ತು ಪ್ರದರ್ಶನ, ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿಗಳು, ಸಾಂಸ್ಕೃತಿಕ ವೈವಿಧ್ಯ, ನಾಟಕ ಪ್ರದರ್ಶನ ಆಯೋಜಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಸಾರ್ವಜನಿಕರು ಭಾಗವಹಿಸುವ ಈ ಸಮ್ಮೇಳನದಲ್ಲಿ ಅನೇಕ ಸಚಿವರು, ಶಾಸಕರು, ವಿಜ್ಞಾನಿಗಳು ಅನೇಕ ಗಣ್ಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಮೊದಲ ವೈಜ್ಞಾನಿಕ ಸಮ್ಮೇಳನವು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ವಿಜ್ಞಾನಿ ಡಾ.ಎ.ಎಸ್.ಕಿರಣ್ ಕುಮಾರ್ ಅವರ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ನಂತರ ವಿವಿಧ ಜಿಲ್ಲೆಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸಲಾಗುತ್ತ ಬರಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕುಪ್ಪಳ್ಳಿಯಲ್ಲಿ ರಾಜ್ಯ ಮಟ್ಟದ ನಾನೂ ನಾಯಕಿ ಶಿಬಿರವನ್ನು ಮಹಿಳೆಯರಿಗಾಗಿ ಆಯೋಜನೆ ಮಾಡಲಾಗುತ್ತಿದೆ ಹೀಗೆ ಪರಿಷತ್ತು ನಿರಂತರವಾಗಿ ತೊಡಗಿಸಿಕೊಂಡು ಬಂದಿದೆ.
ಈ ಬಾರಿ ಪ್ರಗತಿಪರ ಚಿಂತಕ ಹಿರಿಯ ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ವೈಜ್ಞಾನಿಕ ಸಮ್ಮೇಳನಕ್ಕೆ ರಾಜ್ಯದ ಉದ್ದಗಲಕ್ಕೂ ಸಹಸ್ರಾರು ಸಂಖ್ಯೆಲ್ಲಿ ಜನರು ಭಾಗವಹಿಸಲಿದ್ದಾರೆ. ಎಂದು ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಮೂರ್ತಿ ಸಿ ಮಾತನಾಡಿಈ ಸಮ್ಮೇಳನದಲ್ಲಿ ಅನೇಕ ಸಾಧಕರಿಗೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ವಿಶೇಷ “ಸಾಹಿತ್ಯ ಸೇವಾ ರತ್ನ” ಪ್ರಶಸ್ತಿಯನ್ನು ವಿ.ಟಿ.ಸ್ವಾಮಿ ಸಾಗರ ಇವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಶಿವಮೊಗ್ಗದ ವಿರೂಪಾಕ್ಷ ಎಸ್.ಡಿ ಹೆಚ್.ಎನ್.ಪ್ರಶಸ್ತಿ, ಹಾಗೂ ಮಹಿಳಾ ಕ್ಷೇತ್ರದಿಂದ ಸೊರಬದ ಪವಿತ್ರ ಎ.ವಿ ಇವರಿಗೆ ಚೈತನ್ಯಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಸಮ್ಮೇಳನಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನಕ್ಕೆ ಭಾಗವಹಿಸುವಂತೆ ಪತ್ರಿಕಾ ಗೋಷ್ಠಿಯಲ್ಲಿ ಕೋರಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾದ ಜಯಪ್ಪ ಸಿ ಹೆಬ್ಬಳಗೆರೆ ಉಪಾಧ್ಯಕ್ಷೆ ಸೀಮಾ ಸೆರಾವ್, ಸಾದಿಕ ಬಾನು, ಬಸವರಾಜ್ ಹಿರೆಮಠ, ಪ್ರಸನ್ನ ಟಿ. ಪ್ರಧಾನ ಕಾರ್ಯದರ್ಶಿ ಮೂರ್ತಿ ಸಿ, ಕಾರ್ಯದರ್ಶಿ ನಾಗೇಶ್ ಪಿ ರೇವಣಕರ್, ಕೋಶಾಧ್ಯಕ್ಷ ಎಸ್.ಡಿ.ಮೋಹನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಚಂದ್ರನಾಯ್, ಜಿಲ್ಲಾ ಸಂಚಾಲಕ ವಿರೂಪಾಕ್ಷ ಎಸ್ ಡಿ. ನಿರ್ದೇಶಕರಾದ ಮಮತಾ ಶೇಟ್, ವೆಂಕಟೇಶ್ ಚಂದಳ್ಳಿ, ನಂಜನಾಯಕ್, ಪರಮೇಶ್ ಎಚ್.ಎಂ. ದೇವೇಂದ್ರಪ್ಪ ತಾಲ್ಲೂಕು ಅಧ್ಯಕ್ಷರಾದ ನಾರಾಯಣ ಎಸ್. ಶಿವಮೊಗ್ಗ, ಬಿ ವರಲಕ್ಷ್ಮಿ.ಲೋಕೇಶ್ ಸಾಗರು ಪವಿತ್ರ ಸೊರಬ, ಎಂ.ಈಶ್ವರಪ್ಪ ಭದ್ರಾವತಿ, ಮೊದಲಾದವರು ಉಪಸ್ಥಿತರಿದ್ದರು.
*ಸಾಹಿತ್ಯ ಕ್ಷೇತ್ರದಲ್ಲಿ “ವಿಶೇಷ ಸೇವಾ ರತ್ನ ಪ್ರಶಸ್ತಿ” ವಿ.ಟಿ.ಸ್ವಾಮಿ ಸಾಗರ:*
ಕಳೆದ ಮೂರುವರೆ ದಶಕಗಳಿಂದ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಪತ್ರಿಕೋದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವ ಇವರು, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದು ಈಗಾಗಲೇ ಮೂವತ್ತೈದಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಆರ್ಪಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪಡೆದಿರುವ ಇವರು ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಆನೇಕ ಪತ್ರಿಕೆಗಳಲ್ಲಿ ವಿವಿಧ ವಿಷಯಗಳ ಕುರಿತು ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಕವಿಗೋಷ್ಠಿ, ವಿವಿಧ ವಿಚಾರಗೋಷ್ಠಿ, ಸಮ್ಮೇಳನಗಳಲ್ಲಿ ವಿದ್ವತ್ ಪೂರ್ಣ ವಿಷಯಗಳನ್ನು ಮಂಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಕಷ್ಟು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ ಸೆಳೆದಿದ್ದಾರೆ. ಹಲವಾರು ಸಮ್ಮೇಳನಗಳನ್ನು ಹಾಗೂ ಉತ್ಸವಗಳನ್ನು ಆಯೋಜಿಸಿದ ಕೀರ್ತಿ ಇವರಿಗಿದೆ. ಶಿಕ್ಷಣ ಸಾಹಿತ್ಯ ಶಿಬಿರ, ಕಾರ್ಯಾಗಾರಗಳನ್ನು ಆಯೋಜನೆ ಮಾಡಿ ಮಾರ್ಗದರ್ಶನ ನೀಡುವ ಕೆಲಸವನ್ನು ಮಾಡುತ್ತ ಬಂದಿದ್ದಾರೆ.
*ಹೆಚ್.ಎನ್.ಪ್ರಶಸ್ತಿ ಪುರಸ್ಕೃತ ವಿರೂಪಾಕ್ಷಪ್ಪ ಎಸ್.ಡಿ :*
ಶಿವಮೊಗ್ಗದ ನಿವಾಸಿಯಾದ ಎಸ್ ಡಿ ವಿರೂಪಾಕ್ಷಪ್ಪ ನವರು ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಬರುತ್ತಿದ್ದು ಜೊತೆಗೆ ಪರೋಪಕಾರಂ ತಂಡದಿಂದ ಸಾಮಾಜಿಕ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾರ್ಯ, ಅನಾಥ ಮಕ್ಕಳಿಗೆ ಸಹಾಯ.ಯೋಗ, ಮೂಢನಂಬಿಕೆ ಹಾಗೂ ವಿಜ್ಞಾನದ ಅರಿವಿನ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಹೀಗೆ ಅನೇಕ ಸಾರ್ವಜನಿಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿದ್ದು ನಂದಿ ಸಿಂಗರ್ಸ್ ಕಲಾ ವೇದಿಕೆ ಯಿಂದ ಸುಮಾರ್ ಇನ್ನೂರಕ್ಕೂ ಹೆಚ್ಚಿನ ಕಲಾವಿದರಿಗೆ ವೇದಿಕೆಗೆ ಅವಕಾಶವನ್ನು ಕಲ್ಪಿಸಿದ್ದಾರೆ.
*ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತ ಪವಿತ್ರ ಏ.ವಿ:*
ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಪವಿತ್ರ ಅವರು ಉನ್ನತ ಶಿಕ್ಷಣವನ್ನು ಪಡೆದು ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಬಂದಿದ್ದು ನಿರೂಪಣೆ, ಹಿನ್ನೆಲೆ ಧ್ವನಿ, ಗಾಯನ ವಿವಿಧ ವಿಷಯಗಳ ಮಂಡನೆ, ಸಂಘಟನೆಯನ್ನು ಮಾಡುತ್ತಿದ್ದು ಆನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಉದಯ ಟಿವಿಯ ಅಕ್ಷರ ಮಾಲೆ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. ಹೀಗೆ ಇವರಿಗೆ ಆನೇಕ ಪ್ರಶಸ್ತಿ ಪುರಸ್ಕಾರಗಳು ಲಬಿಸಿವೆ.


