*ಸಾಗರ ನಗರಸಭೆ ಮೇಸ್ತ್ರಿ ವಿರುದ್ಧ ಮಹಿಳಾ ದೌರ್ಜನ್ಯ ದೂರು;* *ನಾಗರಾಜ್ ಮೇಸ್ತ್ರಿ ಹೀನ ಕೃತ್ಯದಿಂದ ನೊಂದಿರುವ ಮಹಿಳಾ ಸಿಬ್ಬಂದಿ*
*ಸಾಗರ ನಗರಸಭೆ ಮೇಸ್ತ್ರಿ ವಿರುದ್ಧ ಮಹಿಳಾ ದೌರ್ಜನ್ಯ ದೂರು;*
*ನಾಗರಾಜ್ ಮೇಸ್ತ್ರಿ ಹೀನ ಕೃತ್ಯದಿಂದ ನೊಂದಿರುವ ಮಹಿಳಾ ಸಿಬ್ಬಂದಿ*
ಸಾಗರ ನಗರಸಭೆಯಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ನಾಗರಾಜ್ ಮೇಸ್ತ್ರಿ ಎಂಬುವವರ ಮೇಲೆ ಮಹಿಳಾ ಪೌರ ಕಾರ್ಮಿಕರೊಬ್ಬರು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ನಗರಸಭೆಯ ಮಹಿಳಾ ಪೌರ ಕಾರ್ಮಿಕರೊಬ್ಬರು ದೂರಿನಲ್ಲಿ ತಾನು ನಗರಸಭೆಯಲ್ಲಿ ಡಿ ದರ್ಜೆ ನೌಕರಳಾಗಿ ಕೆಲಸ ಮಾಡುತ್ತಿದ್ದು, ಮೂರು ವರ್ಷದ ಹಿಂದೆ ಕೆಲಸ ಖಾಯಂ ಆಗಿದೆ. ನಗರಸಭೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ನಾಗರಾಜ ಬಿನ್ ಮಾಣಿಕ್ಯ ಎಂಬಾತ ಮೂರು ವರ್ಷಗಳಿಂದಲೂ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಗಂಡನನ್ನು ಬಿಟ್ಟು ಬಾ ಎಂದು ಹಿಂಸೆ ನೀಡುತ್ತಿದ್ದಾನೆ. ಜೂ. 8ರಂದು ನಗರಸಭೆ ಆವರಣದಲ್ಲಿ ತನ್ನ ಕೈಹಿಡಿದು ಎಳೆದಾಡಿದ್ದಾನೆ. ಇದರಿಂದ ನನಗೆ ನಗರಸಭೆಯಲ್ಲಿ ಕೆಲಸ ಮಾಡಲು ಹೆದರಿಕೆ ಉಂಟಾಗುತ್ತಿದೆ. ತನಗೆ ಸೂಕ್ತ ರಕ್ಷಣೆ ನೀಡಬೇಕು. ನಾಗರಾಜ್ ಮೇಸ್ತ್ರಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತನಿಖೆ : ನಾಗರಾಜ್ ಮೇಸ್ತ್ರಿ ಅವರ ಲೈಂಗಿಕ ದೌರ್ಜನ್ಯದ ಪ್ರಕರಣ ಗಂಭೀರ ಸ್ವರೂಪ ತೆಳೆದಿದ್ದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಹಿಳಾ ಅಧಿಕಾರಿಯೊಬ್ಬರು ಶುಕ್ರವಾರ ಸಾಗರ ನಗರಸಭೆಗೆ ಬಂದು ಮಹಿಳಾ ಪೌರ ಕಾರ್ಮಿಕರಿಂದ ಹೇಳಿಕೆಯನ್ನು ಸಹ ಪಡೆದಿದ್ದಾರೆ.


