*ಜನವಾರ್ತೆ ಆಶ್ರಯ ನಾಗರಾಜ್ ಪತ್ನಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ* *ಸಾಕು ನಾಯಿಯೂ ಕೊಳೆತು ನಾರುತ್ತಿತ್ತು!*

*ಜನವಾರ್ತೆ ಆಶ್ರಯ ನಾಗರಾಜ್ ಪತ್ನಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ*

*ಸಾಕು ನಾಯಿಯೂ ಕೊಳೆತು ನಾರುತ್ತಿತ್ತು!*

ಶಿವಮೊಗ್ಗದ ರವೀಂದ್ರ ನಗರದಲ್ಲಿ ಜನವಾರ್ತೆ ಪತ್ರಿಕೆಯ ಸಂಪಾದಕರಾಗಿದ್ದ ಆಶ್ರಯ ನಾಗರಾಜ್ ಅವರ ಪತ್ನಿ ಪ್ರಭಾವತಿ ಮೃತಪಟ್ಟಿದ್ದು, ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತಮ್ಮ ಸ್ವಂತ ಮನೆಯಲ್ಲಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸಾಕು ನಾಯಿ ಕೂಡ ಸತ್ತಿದ್ದು, ಮೃತರ ಮೂವರು ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಇದ್ದಾರೆ ಎನ್ನಲಾಗಿದೆ.

ಮನೆಯಲ್ಲಿ ವೃದ್ಧೆ ಪ್ರಭಾವತಿ ಹೊರತು ಯಾರೂ ಇರಲಿಲ್ಲ. ನೆರೆಹೊರೆಯವರು ದುರ್ವಾಸನೆ ಬರುತ್ತಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಜಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಈ ದೃಶ್ಯ ಕಂಡು ಬಂದಿದೆ.

ಇವರ ಪತಿ ಆಶ್ರಯ ನಾಗರಾಜ್ ರವರು ಕೂಡ ಇತ್ತೀಚೆಗೆ ದುರಾದೃಷ್ಟದ ಸಾವು ಕಂಡಿದ್ದರು.