ಗ್ಯಾಸ್ ಸ್ಫೋಟದಿಂದ ಹಾನಿಗೊಳಗಾದ ಕುಟುಂಬಗಳಿಗೆ ಶಾಸಕರ ಸಹಾಯ ಹಸ್ತ
ಗ್ಯಾಸ್ ಸ್ಫೋಟದಿಂದ ಹಾನಿಗೊಳಗಾದ ಕುಟುಂಬಗಳಿಗೆ ಶಾಸಕರ ಸಹಾಯ ಹಸ್ತ
ಇತ್ತೀಚೆಗೆ ಶಿವಮೊಗ್ಗ ನಗರದ ಸಿದ್ದೇಶ್ವರ ನಗರದಲ್ಲಿ ಸಂಭವಿಸಿದ ಗ್ಯಾಸ್ ಸ್ಫೋಟದಿಂದ ಹಾನಿಗೊಳಗಾದ ಕುಟುಂಬಗಳಿಗೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ವಿಷ್ಣು ಸಮಾಜ, ವಿಕಾಸ್ ಟ್ರಸ್ಟ್ ಹಾಗೂ ಬಟ್ಟೆ ವರ್ತಕರ ಸಂಘದ ಸದಸ್ಯರೊಂದಿಗೆ ಭೇಟಿ ಮಾಡಿ, ಅವರ ಸಹಕಾರದೊಂದಿಗೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳು, ಬಟ್ಟೆಗಳು, ಬೆಡ್‌ಶೀಟ್‌ಗಳು ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ವಿಕಾಸ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಬಿ.ಎ. ರಂಗನಾಥ್, ವಿಷ್ಣು ಸಮಾಜದ ಪ್ರಮುಖರಾದ ಶ್ರೀ ಜೆಟು ಸಿಂಗ್, ಬಟ್ಟೆ ವರ್ತಕರ ಸಂಘದ ಪ್ರಮುಖರಾದ ಶ್ರೀ ಕುಮಾರ್, ಆರ್‌ಎಸ್‌ಎಸ್ ಪ್ರಮುಖರಾದ ಶ್ರೀ ಗಿರೀಶ್ ಕಾರಂತ್ ಹಾಗೂ ಶ್ರೀ ಸಚ್ಚಿದಾನಂದ, ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಸಮಾಜದ ಪ್ರಮುಖರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.


