ನಮ್ಮ ಮನೆಯಂತೆ ಪರಿಸರವನ್ನೂ ಸ್ವಚ್ಛವಿಡೋಣ; ಡಾ.ಚಂದ್ರಶೇಖರ್

ನಮ್ಮ ಮನೆಯಂತೆ ಪರಿಸರವನ್ನೂ ಸ್ವಚ್ಛವಿಡೋಣ; ಡಾ.ಚಂದ್ರಶೇಖರ್

ನಾವು ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೆವೆಯೋ ಅದೇರೀತಿ ಹೊರಗಿನ ಪ್ರಕೃತಿ ಪರಿಸರವನ್ನು ಕೂಡ ಅಷ್ಟೇ ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕೆಂದು ಖ್ಯಾತ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಜ್ಞರಾದ ಡಾ. ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಆವರಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ವಾಹಿನಿ ಸಂಸ್ಥೆ ವಿಜಯನಗರ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ಮಾರುತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವೆಲ್ಲರೂ ಉತ್ತಮ ಆರೋಗ್ಯ ಹೊಂದಬೇಕೆಂದರೆ, ನಾವುಗಳು ನೆಲೆಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಮ್ಮ ಪರಿಸರ ಸ್ವಚ್ಛವಾಗಿದ್ದರೆ, ಇಡೀ ದೇಶ ಸ್ವಚ್ಛವಾಗಿರುತ್ತದೆ. ಪ್ರಪಂಚ ಚೆನ್ನಾಗಿರುತ್ತದೆ. ಬೇರೆ ದೇಶಗಳಿಗೆ ನಮ್ಮ ದೇಶ ಮಾದರಿಯಾಗಬೇಕಿನಿಸುವ ನಿಟ್ಟಿನಲ್ಲಿ ನಾವು, ನೀವೆಲ್ಲರೂ ಸ್ವಚ್ಚತಾ ಅಭಿಯಾನ ನಡೆಸಬೇಕಿದೆ ಎಂದರು.

ಆರೋಗ್ಯದ ದೃಷ್ಟಿಯಿಂದಲೂ ನಾವೆಲ್ಲರೂ ಜಾಗೃತರಾಗಬೇಕಿದ್ದು, ಈಗಾಗಲೇ ಹಲವಾರು ವೈರಸ್ ಖಾಯಿಲೆಗಳು ಹೊಸದಾಗಿ ನಮ್ಮಲ್ಲಿ ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲೂ ಸ್ವಚ್ಚತೆ ಎಂಬುದು ಬಹಳ ಮುಖ್ಯವಾಗಿದೆ ಎಂದರು. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತಗೊಂಡು ನಮ್ಮ ಆರೋಗ್ಯ, ನಾವೇ ಕಾಪಾಡಿಕೊಳ್ಳಬೇಕು. ಜೊತೆಗೆ ಪರಿಸರವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ, ಪಾಲಿಕೆ ಎಇ ಪುಷ್ಪಾವತಿ, ಪಾಲಿಕೆ ಪರಿಸರ ವಿಭಾಗದ ಅಭಿಯಂತರರಾದ ಗಾಯತ್ರಿ ಉಪಸ್ಥಿತರಿದ್ದರು.