ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯೂ ನಗರ ಪಾಲಿಕೆ ಮಾಜಿ ಸದಸ್ಯರೂ ಆದ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ದ್ವೇಷ ಭಾಷಣ ವಿರೋಧಿ ವಿಧೇಯಕ ವಿರೋಧಿಸುವವರೇ ಅಭಿವೃದ್ಧಿ ರಾಜಕಾರಕ್ಕೆ ಈಗಲಾದರೂ ಮುಂದಾಗಿ… ಮೊದಲು ಜೈಲಿಗೆ ಹೋಗೋದೇ ಈಶ್ವರಪ್ಪ- ಚನ್ನಿ

ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯೂ ನಗರ ಪಾಲಿಕೆ ಮಾಜಿ ಸದಸ್ಯರೂ ಆದ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ

ದ್ವೇಷ ಭಾಷಣ ವಿರೋಧಿ ವಿಧೇಯಕ ವಿರೋಧಿಸುವವರೇ ಅಭಿವೃದ್ಧಿ ರಾಜಕಾರಕ್ಕೆ ಈಗಲಾದರೂ ಮುಂದಾಗಿ…

ಮೊದಲು ಜೈಲಿಗೆ ಹೋಗೋದೇ ಈಶ್ವರಪ್ಪ- ಚನ್ನಿ

ದ್ವೇಷ ಭಾಷಣ ವಿರೋಧಿ ವಿಧೇಯಕವನ್ನು ಕಾಂಗ್ರೆಸ್ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಪಾಸ್ ಮಾಡಿದೆ. ದ್ವೇಷ ಮಾಡುವವರ ಪಾಲಿಗೆ ಇದು ಅಪಥ್ಯ. ಕಾನೂನು ಸುವ್ಯವಸ್ಥೆ ದೃಷ್ಟಿಯಲ್ಲಿ ಈ ವಿಧೇಯಕ ಮಂಡನೆ ಮಾಡಲಾಗಿದೆ. ದ್ವೇಷದ ಬೀಜ ಬಿತ್ತುವವರಿಗೆ ಆತಂಕ ಶುರುವಾಗಿದೆ

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪ್ರತಿಭಟನೆ ಮಾಡಿ ದ್ವೇಷ ಭಾಷಣ ಮಾಡಿದ್ದಾರೆ. 2014-15 ರಲ್ಲಿ ಶಾಸಕ ಚನ್ನಬಸಪ್ಪ ದ್ವೇಷ ಭಾಷಣ ಮಾಡಿದಾಗ ವಿಶ್ವನಾಥ ಕಾಶಿ ಎಫ್ ಐ ಆರ್ ದಾಖಲಿಸಿದ್ದರು. ಕೆ.ಎಸ್.ಈಶ್ವರಪ್ಪ, ಚನ್ನಿಯವರಿಗೆ ದ್ವೇಷ ಭಾಷಣ ಬಿಟ್ಟು ಮತ್ತೇನೂ ಗೊತ್ತಿಲ್ಲ.

ಹಿಂದೂ ಮುಸ್ಲೀಮರಿಗೆ ಅನ್ವಯಿಸುವ ಕಾನೂನು ಎಲ್ಲರಿಗೂ ಸಂಬಂಧಿಸಿದ್ದು. ವಿಧೇಯಕಕ್ಕೆ ರಾಜ್ಯಪಾಲರು ಸಹಿಹಾಕಬೇಡಿ ಎಂದು ಬಿಜೆಪಿ ಒತ್ತಡ ಹೇರುತ್ತಿರುವುದು ನಾಚಿಕೆಗೇಡು. ಶಾಂತರೀತಿಯ ಶಿವಮೊಗ್ಗದಲ್ಲಿ ಬಂಡವಾಳ ಹೂಡಲು ಹೆದರುವ ಪರಿಸ್ಥಿತಿ ಇದೆ.

ದ್ವೇಷ ಭಾಷಣ ಮಾಡಿದವರಲ್ಲ ನಾವು. ದ್ವೇಷದ ಭಾಷಣ ಮಾಡುವುದರಿಂದಲೇ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ದ್ವೇಷ ಭಾಷಣ ವಿರೋಧಿ ಕಾನೂನು ಜಾರಿಗೆ ಬಂದರೆ ಬಹಳಷ್ಟು ಜನರಿಗೆ ದೊಡ್ಡ ಜೈಲುಗಳ ಅವಶ್ಯಕತೆ ಬೀಳಬಹುದು. ಬಿಲದಿಂದ ಜನ ಹೊರಕ್ಕೆ ಬಂದು ಮಾತಾಡುತ್ತಿದ್ದಾರೆ.

ಬೆಂಕಿ ಹಚ್ಚಲು ಹಲವು ಪ್ರಯತ್ನಗಳನ್ನು ಕೆಲವರು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಕೆಲಸಗಳನ್ನು ಪ್ರಚಾರ ಮಾಡುವ ಕೆಲಸ ಮಾಡಿ. ಬೆಂಕಿ ಹಚ್ಚುವ ಕೆಲಸ ಮಾಡಬೇಡಿ.

ನಮ್ಮದು ಅಭಿವೃದ್ಧಿಯ ರಾಜಕಾರಣ. ಬಿಜೆಪಿ ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಲಿ. ಕಾಯ್ದೆ ಜಾರಿಗೆ ಬಂದರೆ ಮೊದಲು ಜೈಲಿಗೆ ಹೋಗುವುದೇ ಕೆ.ಎಸ್.ಈಶ್ವರಪ್ಪ, ಶಾಸಕ ಚನ್ನಿ.