ದಾವಣಗೆರೆಯಲ್ಲಿ ಜ. 4 ರಂದು “ಕಲ್ಟ್” ಚಿತ್ರದ ಹಾಡು ಬಿಡುಗಡೆ
ದಾವಣಗೆರೆಯಲ್ಲಿ ಜ. 4 ರಂದು
“ಕಲ್ಟ್” ಚಿತ್ರದ ಹಾಡು ಬಿಡುಗಡೆ

‘ಬನಾರಸ್’ ಖ್ಯಾತಿಯ ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ, ಅನಿಲ್ ಕುಮಾರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ
ಕಲ್ಟ್ ಚಿತ್ರವು ಗಣರಾಜ್ಯೋತ್ಸವದ ಅಂಗವಾಗಿ ಜ.23 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಅದಕ್ಕೂ ಮುನ್ನ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳಿ ಚಿತ್ರತಂಡ ಫ್ರಚಾರ ನಡೆಸುತ್ತಿದ್ದು, ‘ಕರ್ನಾಟಕ ಕಲ್ಟ್ ಪ್ರವಾಸ’ ಎಂಬ ಮನರಂಜನಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಅದರಂಗವಾಗಿ ಜನವರಿ 4ರಂದು ದಾವಣಗೆರೆಯ ಹೈಸ್ಕೂಲ್ ಮೈದಾನದ ಆವರಣದಲ್ಲಿ ನಾಯಕ ಝೈದ್ ಖಾನ್, ರಚಿತಾ ರಾಮ್ ಅಭಿನಯದ ಮೆಲೋಡಿ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಅದೇ ವೇದಿಕೆಯಲ್ಲಿ ಕಲ್ಟ್ ರಸಮಂಜರಿ ಕಾರ್ಯಕ್ರಮ ಜರುಗಲಿದ್ದು,
ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಆಲೋಕ್ ಅವರಿಂದ ಕಲ್ಟ್ ಸಂಗೀತ ರಸಸಂಜೆ ಮನರಂಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವೇದಿಕೆಯಲ್ಲಿ ಸಚಿವ ಜಮೀರ್ ಅಹ್ಮದ್ ಪುತ್ರ ಹಾಗೂ ಚಿತ್ರದ ನಾಯಕನಟ ಝೈದ್ ಖಾನ್, ಬೆಡಗಿಯರಾದ ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ , ನಿರ್ದೇಶಕ ಅನಿಲ್ ಕುಮಾರ್ ಮತ್ತು ಚಿತ್ರತಂಡ ಹಾಜರಿರುತ್ತಾರೆ.
ಈಗಾಗಲೇ ಕಲ್ಟ್ ಚಿತ್ರದ ಅಯ್ಯೋ ಶಿವನೇ, ಬ್ಲಡಿ ಲವ್ ಹಾಗೂ ನಿನ್ನಲ್ಲೇ ನಾನಿರೇ… ಎಂಬ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಈ ಚಿತ್ರದ ಮತ್ತೊಂದು ಹಾಡು ಜನವರಿ 4ರಂದು ದಾವಣಗೆರೆಯಲ್ಲಿ ರಿಲೀಸಾಗಲಿದೆ.
ಲೋಕಿ ಸಿನಿಮಾಸ್ ಲಾಂಛನದಲ್ಲಿ
ಕಲ್ಟ್ ಸಿನಿಮಾ ನಿರ್ಮಾಣವಾಗುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಕಲ್ಟ್ ಚಿತ್ರವನ್ನು ಅರ್ಪಿಸುತ್ತಿದೆ. ಆನಂದ್ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಕಲ್ಟ್ ಚಿತ್ರದ ಆಡಿಯೋ ಹಕ್ಕುಗಳನ್ನು ತನ್ನದಾಗಿಸಿಕೊಂಡಿತ್ತು.
ಕಲ್ಟ್ ಚಿತ್ರವನ್ನು ಜ. 23ರಂದು ಅದ್ದೂರಿಯಾಗಿ ತೆರೆ ಕಾಣಿಸಲು ಚಿತ್ರತಂಡ ಸಜ್ಜಾಗಿದೆ.


