*ಎಣ್ಣೆ ಏಟಿನಲ್ಲಿ ಕಿರಿಕ್ಕಿಗೊಳಗಾದ ಸಂಭ್ರಮಾಚರಣೆ!* *ಶಿವಮೊಗ್ಗದ ಅಡಿಕೆ ಮಂಡಿ ಕ್ಲಬ್ಬಲ್ಲಿ ಕುರ್ಚಿ ಹೊಡೆದಾಟ*
*ಎಣ್ಣೆ ಏಟಿನಲ್ಲಿ ಕಿರಿಕ್ಕಿಗೊಳಗಾದ ಸಂಭ್ರಮಾಚರಣೆ!*
*ಶಿವಮೊಗ್ಗದ ಅಡಿಕೆ ಮಂಡಿ ಕ್ಲಬ್ಬಲ್ಲಿ ಕುರ್ಚಿ ಹೊಡೆದಾಟ*

ಹೊಸ ವರ್ಷದ ಸಂಭ್ರಮಾಚರಣೆ ಎಣ್ಣೆ ಏಟಿಗೆ ಒಳಗಾಗಿ ಕಿರಿಕ್ ಪಾರ್ಟಿಯಾಗಿ ಬದಲಾದ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಅಡಿಕೆ ಮಂಡಿ ಮರ್ಚಂಟ್ ಕ್ಲಬ್ಬಿನಲ್ಲಿ ಡಿ.31 ರ ತಡರಾತ್ರಿ ನಡೆದಿದೆ.
ಕುಡಿದ ಮತ್ತಿನಲ್ಲಿ ಚೇರ್ ಚೇರ್ ಗಳಲ್ಲೇ ಸದಸ್ಯರು ಹೊಡೆದಾಡಿಕೊಂಡು ಪೊಲೀಸರು ಮಧ್ಯ ಪ್ರವೇಶಿಸುವಂತಾಯ್ತು.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ತುಂಗಾನಗರ ಪೊಲೀಸರು, ಸ್ಥಳ ಖಾಲಿ ಮಾಡಿಸಿದ್ದಾರೆ. ಅಡಿಷನಲ್ ಎಸ್ ಪಿ ಕಾರ್ಯಪ್ಪ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


