*ಮಲೆನಾಡು ತಮಿಳ್ ಯುವ ಸಂಘಂ ಸಂಘಟನಾ ಕಾರ್ಯದರ್ಶಿ ಕುಮರೇಶ್ ಸುದ್ದಿಗೋಷ್ಠಿ* *ಜ.10ಕ್ಕೆ ಪೊಂಗಲ್- ಸಂಕ್ರಾಂತಿ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ*
*ಮಲೆನಾಡು ತಮಿಳ್ ಯುವ ಸಂಘಂ ಸಂಘಟನಾ ಕಾರ್ಯದರ್ಶಿ ಕುಮರೇಶ್ ಸುದ್ದಿಗೋಷ್ಠಿ*
*ಜ.10ಕ್ಕೆ ಪೊಂಗಲ್- ಸಂಕ್ರಾಂತಿ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ*
ಶಿವಮೊಗ್ಗ: ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಲೆನಾಡು ತಮಿಳ್ ಯುವ ಸಂಘಂ ವತಿಯಿಂದ ಜ.10 ಮತ್ತ 11 ರಂದು ಆಲ್ಕೊಳ ಸರ್ಕಲ್‌ನಲ್ಲಿರುವ ಶ್ರೀ ಅಗಮುಡಿ ಸಮುದಾಯ ಭವನದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿಯಾದ ಕುಮರೇಶ್ ಎಸ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಶಬರೀಶ್ ರೋಜ ಷಣ್ಮುಗಂ ಗುರೂಜಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮಲೆನಾಡು ತಮಿಳ್ ಸಂಘಂನ ಅಧ್ಯಕ್ಷ ಸಂದೀಪ್ ಸುಂದರ್‌ರಾಜ್ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ, ಮಾಜಿಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪಆಗಮಿಸಲಿದ್ದಾರೆ ಎಂದರು.
ಜ.10 ಬೆಳಿಗ್ಗೆ 7 ಗಂಟೆಗೆ ಎನ್‌ಇಎಸ್ ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಜ.11 ರಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪೊಂಗಲ್ ಕಾರ್ಯಕ್ರಮ, ಬೆಳಿಗ್ಗೆ 9 ಗಂಟೆಗೆ ರಂಗೋಲಿ ಸ್ಪರ್ಧೆ, ಬೆಳಿಗ್ಗೆ 10 ಗಂಟೆಗೆ ಮಕ್ಕಳಿಗೆ ಆಟದ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 5 ಗಂಟೆಗೆ ಸಾಂಸ್ಕೃತಿಕಾರ್ಯಕ್ರಮ ಆರಂಭವಾಲಿದ್ದು, ಮಕ್ಕಳ ನೃತ್ಯ ಪ್ರದರ್ಶನ, 5.30 ಕ್ಕೆ ನಾದಸಿರಿ ವಿದುಷಿ ಬಿ.ಕೆ. ವಿಜಯಲಕ್ಷ್ಮಿ ವೃದದವರಿಂದ ಹಾಗೂ ಪಂಚವೀಣಾ ವಾದನ ದವರಿಂದ ವೀಣೆ ನುಡಿಸುವ ಕಾರ್ಯಕ್ರಮ, ಸಂಜೆ 7.30 ಕ್ಕೆ ನಟಣಂ ಬಾಲ ನಾಟ್ಯ ಕೇಂದ್ರದಿಂದ ನಾಟ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಧ್ಯಕ್ಷ ಮನೋಹರ್, ಎಸ್.ಕೃಷ್ಣಮೂರ್ತಿ, ಅಧ್ಯಕ್ಷ ಸಂದೀಪ್ ಎಸ್. ಆರ್, ಉಪಾಧ್ಯಕ್ಷ ಆರ್.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ರಮೇಶ್ ಇತತರು ಇದ್ದರು.


