ಯದುವೀರ್ ವೀಣಾವಾದವೂ- 301 ವೀಣೆಗಳ ವೀಣಾ ನಾದ ಝೇಂಕಾರವೂ…
ಯದುವೀರ್ ವೀಣಾವಾದವೂ- 301 ವೀಣೆಗಳ ವೀಣಾ ನಾದ ಝೇಂಕಾರವೂ…

ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ, ಸುಶ್ರಾವ್ಯ ಸಂಗೀತ ವಿದ್ಯಾಲಯ ಹಾಗೂ ಶ್ರೀ ಸಾಯಿಶಕ್ತಿ ಸಂಗೀತ ವಿದ್ಯಾಲಯಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ವೀಣಾ ತ್ರಿಶತೋತ್ಸವ’ ಕಾರ್ಯಕ್ರಮವನ್ನು ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿ ತಾವೂ ವೀಣೆ ನುಡಿಸಿದರು.
ಒಂದೇ ವೇದಿಕೆಯಲ್ಲಿ ‘301 ವೀಣಾ ನಾದ ಝೇಂಕಾರ’ (301 Veena Nada Jhankara) ಮೊಳಗಿದ್ದು ರೋಮಾಂಚನಕಾರಿ ಮತ್ತು ಕಿವಿಗೆ ಇಂಪಾದ ಅನುಭವವಾಗಿತ್ತು. ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ ಈ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಬಿ.ವೈ.ರಾಘವೇಂದ್ರ, ಡಿ. ಎಸ್. ಅರುಣ್ (ವಿಧಾನ ಪರಿಷತ್ ಸದಸ್ಯರು), ಡಾ. ಧನಂಜಯ್ ಸರ್ಜಿ (ವಿಧಾನ ಪರಿಷತ್ ಸದಸ್ಯರು), ಶಿವಮೊಗ್ಗ ನಗರದ ಶಾಸಕರಾದ ಎಸ್. ಏನ್ ಚೆನ್ನಬಸಪ್ಪ, ಕೆ. ಬಿ. ಪ್ರಸನ್ನ ಕುಮಾರ್ (ಮಾಜಿ ಶಾಸಕರು), ಶ್ರೀಮತಿ ರೇವತಿ ಕಾಮತ್, ಉಮೇಶ್ ಹಾಲಾಡಿ ಸೇರಿದಂತೆ ವೇದಿಕೆ ಮೇಲೆ ಗಣ್ಯರು ಉಪಸ್ಥಿತರಿದ್ದರು.


