ಜಾತಿ- ಜನಗಣತಿ ಸಮೀಕ್ಷೆ ಅತ್ಯಾವಶ್ಯಕ; ಜಾತಿ ಗಣತಿ ಜಾರಿಯಾಗುತ್ತಿರುವುದು ಸಂತೋಷದಿಂದ ಸ್ವಾಗತಿಸುವೆ ಇದು ವೈಜ್ಞಾನಿಕ ಸಮೀಕ್ಷೆ ಎಂಬುದರಲ್ಲಿ ಅನುಮಾನವೇ ಬೇಡ ಜಾತಿ ಎಂಬ ಶತೃವಿನ ಶಕ್ತಿ ತಿಳಿಯಬೇಕಾದರೆ ಜಾತಿ ಸಮೀಕ್ಷೆ ಮುಖ್ಯ- ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್

ಜಾತಿ- ಜನಗಣತಿ ಸಮೀಕ್ಷೆ ಅತ್ಯಾವಶ್ಯಕ;

ಜಾತಿ ಗಣತಿ ಜಾರಿಯಾಗುತ್ತಿರುವುದು ಸಂತೋಷದಿಂದ ಸ್ವಾಗತಿಸುವೆ

ಇದು ವೈಜ್ಞಾನಿಕ ಸಮೀಕ್ಷೆ ಎಂಬುದರಲ್ಲಿ ಅನುಮಾನವೇ ಬೇಡ

ಜಾತಿ ಎಂಬ ಶತೃವಿನ ಶಕ್ತಿ ತಿಳಿಯಬೇಕಾದರೆ ಜಾತಿ ಸಮೀಕ್ಷೆ ಮುಖ್ಯ-

ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್

ಹಿಂದುಳಿದ ವರ್ಗದವರು ಮುಂದುರೆಯುವುದು ಹೇಗೆ? 1931ರ ನಂತರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಈಗ ಜಾರಿಯಾಗುವ ಸಂದರ್ಭ ಬಂದಿದೆ. ಏ.17 ಕ್ಕೆ ತೀರ್ಮಾನದ ಸಂದರ್ಭ ಇದು.

ಜನಗಣತಿ, ಸಮೀಕ್ಷೆ ಅತ್ಯಾವಶ್ಯಕ. 1871 ರಿಂದ ಈ ಪ್ರತೀತಿ ಜಾರಿ ಇದೆ. ಜಾತಿ ವಾಸ್ತವ ಹೋಗಬೇಕಾದ್ರೆ ಸಮಾನತೆ ಬರಬೇಕು. ಅದಕ್ಕಾಗಿ ಕೆಲಸ ನಡೆಯುತ್ತಲೇ ಇದೆ. ಸಂವಿಧಾನ ಕೂಡ ಹೆಚ್ಚಿನ ಒತ್ತನ್ನು ಸಾಮಾಜಿಕ ನ್ಯಾಯಕ್ಕೆ ನೀಡಿದೆ.

ಜಾತಿ ಎಂಬುದು ಕೃತಕ. ಹುಟ್ಟಿನಿಂದ ಸಿಕ್ಕ ಮೊದಲ ಆಸ್ತಿ. ಇದು ಹೋಗಬೇಕು. 54 ಅಂಶಗಳು ಕಾಂತರಾಜ್ ಆಯೋಗದಲ್ಲಿ ತೆಗೆದುಕೊಂಡಿದ್ವಿ. ಅದರಲ್ಲಿ ಜಾತಿ ಕೂಡ ಒಂದು.

ಮಹಾತ್ಮ ಗಾಂಧೀಜಿಯವರು ಕೂಡ ಇಂಥ ಸಮೀಕ್ಷೆಗಳ ಬಗ್ಗೆ ಮಾತಾಡಿದ್ದಾರೆ. ದೇಹದ ವೈದ್ಯಕೀಯ ಪರೀಕ್ಷೆಯಂತೆ ಜಾತಿ ಸಮೀಕ್ಷೆಯೂ ಮುಖ್ಯ ಎಂದಿದ್ದಾರೆ.

ನಿಜವಾದ ಪರಿಸ್ಥಿತಿಯ ದತ್ತಾಂಶ ತನ್ನಿ ಎಂದಿತ್ತು ಸುಪ್ರೀಂ ಕೋರ್ಟ್. ಮಂಡಲ್ ವರದಿ ಈಗ ಜಾರಿಯಲ್ಲಿದೆ. 27% ಗೆ ಲಿಮಿಟ್ ಮಾಡಿ ಸುಪ್ರೀಂ ಕೋರ್ಟ್ ಜಾರಿಗೊಳಿಸಿದೆ.
ಸಂವಿಧಾನದಲ್ಲಿ ಇಷ್ಟೇ ಪರ್ಸೆಂಟ್ ಮೀಸಲಾತಿ ಕೊಡಬೇಕೆಂದು ಎಲ್ಲೂ ಹೇಳಿಲ್ಲ.

ಚುನಾವಣೆ ಪ್ರಜಾಪ್ರಭುತ್ವ ಜೀವಾಳ. ಅಧಿಕಾರವೂ ಬಹಳ ಮುಖ್ಯ. ಎಲ್ಲರಿಗೂ ಅಲ್ಲಿ ಪ್ರಾಶಸ್ತ್ಯ ಬೇಕು. ಈಗ ಹತ್ತು ಜನ ಮಹಿಳೆಯರಷ್ಟೇ ಶಾಸಕರಿದ್ದಾರೆ. ಶೇ.50 ಮಹಿಳಾ ಮೀಸಲಾತಿಯ ಮಾತಾಡುತ್ತೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಸಿಕ್ಕ ಪ್ರಾತಿನಿಧ್ಯ ವಿಧಾನಸಭೆ, ಲೋಕಸಭೆಯಲ್ಲಿ ಸಿಕ್ಕಿಲ್ಲ.್ಮ

ಸಿಎಂ ಸಿದ್ದರಾಮಯ್ಯ ಮಹತ್ವದ ಹೆಜ್ಜೆ ಇಟ್ಟಿದ್ದಾರೆ, ಜಾತಿ ಗಣತಿಯ ಮೂಲಕ. ವಂಚಿತ ಸಮುದಾಯಕ್ಕೆ ಈ ಸಮೀಕ್ಷೆ ಬಲ ತುಂಬಲಿದೆ. ಅದನ್ನು ಸ್ವಾಗತಿಸುತ್ತೇನೆ. ಸಂತೋಷವಾಗಿದೆ. ಅದರ ಅವಶ್ಯಕತೆ ಬಹಳ ಇದೆ. ನಮ್ಮ ಸಮೀಕ್ಷೆಯ ನಂತರ ತೆಲಂಗಾಣ, ಬಿಹಾರ, ಅಸ್ಸಾಮಲ್ಲಿ ಜಾರಿಯಾಗಿದೆ, ಜಾರಿಯಾಗುತ್ತಿದೆ.

ಎಲ್ಲಿಯವರೆಗೆ ಮೀಸಲಾತಿ ಕೊಡಬೇಕು? ಪ್ರಶ್ನೆ ಕೇಳ್ತಾ ಇರ್ತಾರೆ. ಕೇಂದ್ರ ಸರ್ಕಾರದಲ್ಲಿ ಮೀಸಲಾತಿ ಪ್ರಾರಂಭವಾಗಿದ್ದೇ ಮಂಡಲ್ ಆಯೋಗದ ಮೂಲಕ. ಉದ್ಯೋಗಕ್ಕೆ ಮಾತ್ರ. 2008 ರಲ್ಲಿ ಶಿಕ್ಷಣಕ್ಕೆ ಮೀಸಲಾತಿ ಬಂತು. ಶೇ.28 ಪರ್ಸೆಂಟ್ ಈಗಲೂ ಜಾರಿಯಾಗಿಲ್ಲ.
ದೇಶದ ಜನರೆಲ್ಲ ಒಂದೇ ಕುಟುಂಬದವರು. ಈ ಕುಟುಂಬದವರಿಗೆ ದೇಶದ ಆಸ್ತಿ ಸಮಾನ ಹಂಚಿಕೆಯಾಗಬೇಕು. ಅದೇ ಸಮಾನತೆ. ಆಗಿದೆಯಾ?

ವಿಶ್ವವಿದ್ಯಾಲಯಗಳಲ್ಲಿ ಶೇ.15 ಮೀಸಲಾತಿ ಕೂಡ ಸಿಕ್ಕಿಲ್ಲ.

ಜಾತಿ ಸಮೀಕ್ಷೆ ಶಿಸ್ತುಬದ್ಧವಾಗಿ ಆಗಿದೆ. ಕಷ್ಟನಷ್ಟ ಹೇಳಿಕೊಳ್ಳುವ ಪ್ರಯತ್ನ ಆದರೆ ಸಫಲವಾಗುತ್ತೆ. ಸಮೀಕ್ಷೆ ಸಂದರ್ಭದಲ್ಲಿ ಶೇ.100 ರಷ್ಟು ಅಕ್ಯುರೇಟ್ ಎಂಬುದು ಕಷ್ಟ. ಸಿಗದ ಜನರೂ ಇರುತ್ತಾರೆ. ವ್ಯವಸ್ಥೆ ಮೂಲಕವೇ ಸಮೀಕ್ಷೆ ಆಗಿದೆ.
ಇದು ಅವೈಜ್ಞಾನಿಕ ಅಲ್ಲ. ವೈಜ್ಞಾನಿಕ ಸಮೀಕ್ಷೆಯೇ ಆಗಿದೆ. ಅಂಕಿಅಂಶ ಕಳುವಾಗಿದೆ ಎಂಬುದು ಕೂಡ ಸರಿಯಲ್ಲ.