Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

Warning: ftp_mkdir() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 642

Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

*ಲೇಸ‌ರ್ ಆಂಜಿಯೋಪ್ಲಾಸ್ಟಿ:* *ಬೈಪಾಸ್ ಸರ್ಜರಿಗಿಂತ ಸುರಕ್ಷಿತ ಮತ್ತು ಬೇಗ ಗುಣವಾಗುವ ಪರ್ಯಾಯ ಚಿಕಿತ್ಸಾ ವಿಧಾನ ಇದೀಗ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಲಭ್ಯ*

*ಲೇಸ‌ರ್ ಆಂಜಿಯೋಪ್ಲಾಸ್ಟಿ:*

*ಬೈಪಾಸ್ ಸರ್ಜರಿಗಿಂತ ಸುರಕ್ಷಿತ ಮತ್ತು ಬೇಗ ಗುಣವಾಗುವ ಪರ್ಯಾಯ ಚಿಕಿತ್ಸಾ ವಿಧಾನ ಇದೀಗ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಲಭ್ಯ*

ಕರ್ನಾಟಕದಲ್ಲಿ ಈ ವರ್ಷ 608 ಹೃದಯ ಸಂಬಂಧಿ ಸಾವುಗಳು ಸಂಭವಿಸಿದ್ದು, ಸಂಕೀರ್ಣ ಹೃದಯ ಕಾಯಿಲೆಗಳನ್ನು ನಿರ್ವಹಿಸಲು ಆಸ್ಪತ್ರೆಗಳು ಅತ್ಯಾಧುನಿಕ ಪರಿಹಾರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ.

ಶಿವಮೊಗ್ಗ

ಮಣಿಪಾಲ್ ಆಸ್ಪತ್ರೆ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೊಸದಾಗಿ ಲೇಸರ್ ಆಂಜಿಯೋಪ್ಲಾಸ್ಪಿ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಗಟ್ಟಿಯಾದ, ಕ್ಯಾಲ್ಸಿಯಂ ಶೇಖರಣೆಗೊಂಡ ಅಥವಾ ಹಿಂದೆ ಚಿಕಿತ್ಸೆ ನೀಡಲು ಕಷ್ಟಕರವಾಗಿದ್ದ ರಕ್ತನಾಳದ ಅಡೆತಡೆಗಳನ್ನು ಹೊಂದಿರುವ ರೋಗಿಗಳು ಈಗ ಬೈಪಾಸ್‌ನಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಬದಲಿಗೆ ಕನಿಷ್ಠ ಆಕ್ರಮಣಕಾರಿ/ಮಿನಿಮಲಿ ಇನ್ನೇಸಿವ್ (Minimally Invasive) ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಆತಂಕ ಹುಟ್ಟಿಸುವಷ್ಟು ಹೆಚ್ಚುತ್ತಿವೆ. 2024-25ರಲ್ಲಿ ಸುಮಾರು 608 ಹೃದಯ ಸಂಬಂಧಿ ಸಾವುಗಳು ವರದಿಯಾಗಿವೆ.

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಸಲಹೆಗಾರರಾದ ಡಾ. ಅನುಷಾ ಎ ರಾವ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸುತ್ತಾ, ”ಈ ಲೇಸರ್ ತಂತ್ರಜ್ಞಾನವು ಎದೆಯನ್ನು ಕತ್ತರಿಸದೇ ಬಹು ಸ್ಪಂಟ್‌ಗಳು, ತೀವ್ರವಾದ ಅಪಧಮನಿ ಕಾಠಿಣ್ಯ/ಅಥೆರೋಸ್ಟೆ ರೋಸಿಸ್ (Atheroscಕಾಠಿಣ್ಯ) ಮತ್ತು ಸಂಕೀರ್ಣ ಅಪಧಮನಿಯ ಕಿರಿದಾಗುವಿಕೆಗೆ/ಇಂಟ್ರಿಕೇಟ್ ಆರ್ಟೀರಿಯಲ್ ಚಿಕಿತ್ಸೆ ನೀಡುವ ಮಾರ್ಗವನ್ನು ಒದಗಿಸುತ್ತದೆ. ಇದು ಒಂದು ಕಾಲದಲ್ಲಿ ಸಾಂಪ್ರದಾಯಿಕ ಅಂಜಿಯೋಪ್ಲಾಸ್ಸಿಗೆ ಸೂಕ್ತವಲ್ಲ ಎಂದು ಪರಿಗಣಿಸಲ್ಪಟ್ಟ ರೋಗಿಗಳಿಗೆ ಭರವಸೆಯನ್ನು ನೀಡುತ್ತದೆ” ಎಂದು ಹೇಳಿದರು.

ಲೇಸ‌ರ್ ಆಂಜಿಯೋಪ್ಲಾಸ್ಸಿ ಹೇಗೆ ಕೆಲಸ ಮಾಡುತ್ತದೆ?

ಲೇಸ‌ರ್ ಆಂಜಿಯೋಪ್ಲಾಸ್ಟಿಯಲ್ಲಿ ನಿಯಂತ್ರಿತ ಬೆಳಕಿನ ಶಕ್ತಿಯನ್ನು ಬಳಸಿ, ಕ್ಯಾಲ್ಸಿಯಂ ಶೇಖರಣೆಗೊಂಡಿರುವ ಅಥವಾ ಗಟ್ಟಿಯಾದ ಪದರಗಳನ್ನು ನಿಖರವಾಗಿ ಕರಗಿಸಲಾಗುತ್ತದೆ. ಇದುರಕ್ತನಾಳಗಳ ಗೋಡೆಗಳ ಮೇಲೆ ಕನಿಷ್ಠ ಒತ್ತಡವನ್ನು ಬೀರುತ್ತದೆ. ಈ ವಿಧಾನವು ರಕ್ತದ ಹರಿವನ್ನು ಸುಗಮಗೊಳಿಸಲು, ಅಪಾಯವನ್ನು ಕಡಿಮೆ ಮಾಡಲು ಮತ್ತು ಹೃದಯ ರೋಗಿಗಳಿಗೆ ಚೇತರಿಕೆಯ ಸಮಯ ಹಾಗೂ ಆಸ್ಪತ್ರೆಯಲ್ಲಿ ಉಳಿಯು ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಯಾರಿಗೆ ಇದರ ಪ್ರಯೋಜನ ಹೆಚ್ಚು?

ಮಣಿಪಾಲ್ ಆಸ್ಪತ್ರೆ, ಹಳೆ ವಿಮಾನ ನಿಲ್ದಾಣ ರಸ್ತೆಯ ಇಂಟರ್‌ವೆನ್ನನಲ್ ಕಾರ್ಡಿಯಾಲಜಿ ಸಾಮರ್ಥ್ಯಗಳಿಗೆ ಸೇರ್ಪಡೆಯಾದ ಈ ಹೊಸ ತಂತ್ರಜ್ಞಾನವು ವಿಶೇಷವಾಗಿ ಈ ಕೆಳಗಿನ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ:

* ಹಳೆಯ, ದೀರ್ಘಕಾಲದ, ಶೇ. 100 ರಷ್ಟು ನಿರ್ಬಂಧಿತ ಆರ್ಟರೀಸ್ ಹೊಂದಿರುವ ಸಂಕೀರ್ಣ ಹೃದಯ ಕಾಯಿಲೆಯ ರೋಗಿಗಳು.

* ಹಳೆಯ ಸ್ಟೆಂಟ್‌ಗಳು ಮರು-ಕಿರಿದಾಗುವಿಕೆ (Re-narrowing) ಅನುಭವಿಸುವ ರೋಗಿಗಳು.

* ವಿಸ್ತರಿಸಿದ ಸ್ಪಂಟ್‌ಗಳು, ಗಟ್ಟಿಯಾದ ಕ್ಯಾಲ್ಸಿಯಂ ಬ್ಲಾಕ್‌ಗಳು ಅಥವಾ ಕೊರೊನರಿ ಆರ್ಟರೀಸ್‌ನಲ್ಲಿನ

ಕ್ಲಾಟ್ ಬರ್ಡನ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಒಟ್ಟಾರೆ ಲೇಸರ್ ಅಂಜಿಯೋಪ್ಲಾಸ್ಪಿಯು ಉತ್ತಮ ಫಲಿತಾಂಶ, ಬಹುಬೇಗ ಚೇತರಿಕೆಗೆ ಸಹಾಯ ಮಾಡುವ ಸುಧಾರಿತ ವೈದ್ಯಕೀಯ ಕೊಡುಗೆಯಾಗಿದೆ.

ಲೇಸರ್‌ ಅಂಜಿಯೋಪ್ಲಾಸ್ಟಿಯಂತಹ ಮುಂದಿನ ಪೀಳಿಗೆಯ ಹೃದಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು, ದೀರ್ಘಾವಧಿಯ ಹೃದಯ ಆರೋಗ್ಯಕ್ಕಾಗಿ ಸುರಕ್ಷಿತ, ಪರಿಣಾಮಕಾರಿ ಮತ್ತು ರೋಗಿಗಳಿಗೆ ಸ್ನೇಹದಾಯಕ ಚಿಕಿತ್ಸಾ ಆಯ್ಕೆಗಳನ್ನು ವಿಸ್ತರಿಸಲು ತನ್ನ ಬದ್ಧತೆಯನ್ನು ಬಲಪಡಿಸುತ್ತದೆ.