ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ*

*ಉಗ್ರಂ ವೀರಂ ಫೈಟರ್ಸ್ ಕ್ಲಬ್ ನಿಂದ ಇಂದು ಮಧ್ಯಾಹ್ನ ನಿರ್ಮಾಣವಾಗಲಿದೆ ಇತಿಹಾಸ*

8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಇವತ್ತು ಮಧ್ಯಾಹ್ನ
ಇಂದು ಶಿವಮೊಗ್ಗ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂ. ಶ್ರೀಕಾಂತ್ ಇವರ ಆಶ್ರಯದಲ್ಲಿ ಅದ್ಧೂರಿಯಾಗಿ ರಾಜ್ಯ ಮಟ್ಟದ 8 ಹಲ್ಲಿನ ಜಿದ್ದಾಜಿದ್ದಿ ಟಗರಿನ ಕಾಳಗ ಹಾಗೂ ಶಿವಮೊಗ್ಗ 2025ರ ಕೇಸರಿ ಪಟ್ಟ ಶಬರಿ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷರಾದಂತಹ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದಂತಹ ಸುನಿಲ್ ಎ. ಹೆಚ್, ವಿನಯ್ ತಾಂದಲೆ, ಪ್ರಭಾಕರ್ ಗೌಡ, ಚಂದ್ರಶೇಖರ್, ಅಶೋಕ, ಮುಪಣ್ಣ ಹಾಗೂ ಹಲವರು ಭಾಗವಹಿಸಲಿದ್ದಾರೆ.

ಏಪ್ರಿಲ್ 13ರ ಭಾನುವಾರವಾದ ಇಂದು ಮಧ್ಯಾಹ್ನ 1 ಗಂಟೆಯಿಂದ
ಸೈನ್ಸ್ ಮೈದಾನ, ಬಿ.ಹೆಚ್ ರಸ್ತೆ ಶಿವಮೊಗ್ಗದಲ್ಲಿ ಈ ಟಗರು ಕಾಳಗ ನಡೆಯಲಿದೆ.

ಟಗರು ಕಾಳಗಕ್ಕೆ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.