ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಸಮಸ್ಯೆಯ
ಅಂತಿಮ ಪರಿಹಾರ
ಕ್ಷಮೆಯೂ…

ಕೇಳಿಬಿಡು
ಇಲ್ಲ
ಕೊಟ್ಟುಬಿಡು!

2.
ಹೃದಯ
ಶಾಂತವಾಗಿದ್ದರೆ
ನಿದ್ದೆಯೂ
ನೆಮ್ಮದಿ ನೀಡುವುದು

ಇಲ್ಲದಿದ್ದರೆ

ಕನಸೂ
ಹೆದರಿಸಿಬಿಡುವುದು!

3.
ಬಹಳ ಗಟ್ಟಿ
ಎಂದವರನ್ನೆಲ್ಲ ಕಂಡಿರುವೆ

ಒಬ್ಬಂಟಿ ಇದ್ದಾಗಲೆಲ್ಲ
ಬಹಳ ಕಣ್ಣೀರು ಸುರಿಸುವರು

4.
ತಪ್ಪು
ಕಹಿ ಬೇವಿನದಲ್ಲ

ನಾಲಿಗೆಗೆ
ಸಿಹಿಯ ಚಟವಿದೆ
ಅಷ್ಟೇ!

– *ಶಿ.ಜು.ಪಾಶ*
8050112067
(19/1/2026)