*ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವನ ಬಂಧನ!* *ಕದ್ದ ಮಹಿಳಾ ಒಳ ಉಡುಪು ಧರಿಸುತ್ತಿದ್ದ ಕಳ್ಳ…* *ರಾಶಿ ರಾಶಿ ಒಳ ಉಡುಪು ಕಂಡು ದಂಗಾದ ಪೊಲೀಸರು!!*
*ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವನ ಬಂಧನ!*
*ಕದ್ದ ಮಹಿಳಾ ಒಳ ಉಡುಪು ಧರಿಸುತ್ತಿದ್ದ ಕಳ್ಳ…*
*ರಾಶಿ ರಾಶಿ ಒಳ ಉಡುಪು ಕಂಡು ದಂಗಾದ ಪೊಲೀಸರು!!*
ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ.
ಬಂಧಿತನನ್ನು ಕೇರಳ ಮೂಲದ 23ರ ಹರೆಯದ ಅಮಲ್ ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಅಮಲ್ ಮಹಿಳೆಯರ ಒಳಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ. ಕದ್ದ ಉಡುಪುಗಳನ್ನು ಅಮಲ್ ಧರಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
*ಪೊಲೀಸರೇ ಶಾಕ್*
ಖಚಿತ ಮಾಹಿತಿಯನ್ನಾಧರಿಸಿ ಆರೋಪಿಯನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ ಆರೋಪಿಯ ಮೊಬೈಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್‌ನಲ್ಲಿ ಮಹಿಳೆಯರ ಒಳುಉಡುಪುಗಳ ಫೋಟೋಗಳಿರೋದನ್ನು ಕಂಡು ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ.
ಆರೋಪಿ ಅಮಲ್ ವಾಸವಾಗಿದ್ದ ಮನೆಯಲ್ಲಿಯೂ ಮಹಿಳೆಯರ ಒಳಉಡುಪುಗಳು ಪತ್ತೆಯಾಗಿವೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.


