*ಶಿವಮೊಗ್ಗದಲ್ಲಿ ನಡೆಯಲಿದೆ ಜ.24-25ರಂದು 24 ಗಂಟೆಗಳ ಗಮಕ ವಾಚನ ಮಾಡುವ ಮೂಲಕ ವಿಶ್ವದಾಖಲೆ ಕಾರ್ಯಕ್ರಮ* *ಏಷ್ಯನ್ ಬುಕ್ ಆಫ್ ರೆಕಾರ್ಡ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗಾಗಿ ಈ ದಾಖಲೆಯ ಕಾರ್ಯಕ್ರಮ*
*ಶಿವಮೊಗ್ಗದಲ್ಲಿ ನಡೆಯಲಿದೆ ಜ.24-25ರಂದು 24 ಗಂಟೆಗಳ ಗಮಕ ವಾಚನ ಮಾಡುವ ಮೂಲಕ ವಿಶ್ವದಾಖಲೆ ಕಾರ್ಯಕ್ರಮ*
*ಏಷ್ಯನ್ ಬುಕ್ ಆಫ್ ರೆಕಾರ್ಡ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗಾಗಿ ಈ ದಾಖಲೆಯ ಕಾರ್ಯಕ್ರಮ*
24 ಗಂಟೆಗಳ ಗಮಕ ವಾಚನ ಮಾಡುವ ಮೂಲಕ ವಿಶ್ವ ದಾಖಲೆ ಮಾಡುವ ಅಹೋರಾತ್ರಿ ಗಮಕ ವಾಚನ ಕಾರ್ಯಕ್ರಮ ಜ.24 ಮತ್ತು 25 ರಂದು ರವೀಂದ್ರ ನಗರದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೊಸಹಳ್ಳಿಯ ಪ್ರಸಾದ್ ಭಾರದ್ವಾಜ್ ಗಮಕ ವಾಚನ ಮಾಡಲಿದ್ದು, ಜ.24ರ ಸಂಜೆ 5 ರಿಂದ ಕಾರ್ಯಕ್ರಮ ನಡೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟನೆ ಮಾಡಲಿದ್ದಾರೆ.
ಕುಮಾರವ್ಯಾಸ ಪ್ರಶಸ್ತಿ ವಿಜೇತರಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಆಗಮಿಸಲಿದ್ದು, ಗಮಕ ಕಲಾ ಪರಿಷತ್ ನ ಅಧ್ಯಕ್ಷ ಹೆಚ್.ಎಸ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರೋಪವು ಜ.25 ರ ರಾತ್ರಿ 7.30ಕ್ಕೆ ನಡೆಯಲಿದ್ದು, ಸುಬ್ರಮಣ್ಯಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ.ಶಾಸಕ ಚನ್ನಬಸಪ್ಪ, ಹೆಚ್.ಎಸ್.ಗೋಪಾಲ ಅತಿಥಿಯಾಗಿ ಆಗಮಿಸಲಿದ್ದಾರೆ.
ಏಷ್ಯನ್ ಬುಕ್ ಆಫ್ ರೆಕಾರ್ಡ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗಾಗಿ ಈ ದಾಖಲೆಯ ಕಾರ್ಯಕ್ರಮ ಮಾಡಲಾಗುತ್ತಿದೆ.


