*ವೀಡಿಯೋ ವೈರಲ್; ಮನನೊಂದು ವೈದ್ಯ ಆತ್ಮಹತ್ಯೆ!*

*ವೀಡಿಯೋ ವೈರಲ್; ಮನನೊಂದು ವೈದ್ಯ ಆತ್ಮಹತ್ಯೆ!*

ಕೇರಳದಲ್ಲಿ ಒಂದು ವೈರಲ್‌ ವಿಡಿಯೋದಿಂದ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಇದೀಗ ಆ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ಅಂಥಹದ್ದೇ ಘಟನೆ ನಡೆದಿದೆ.

ವೈರಲ್‌ ಆದ ಆ ಒಂದು ವಿಡಿಯೋದಿಂದ ಮನನೊಂದು ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಮನೆಯಲ್ಲೇ ಈ ದುರ್ಘಟನೆ ನಡೆದಿದ್ದು, ವೈದ್ಯ ರಾಜು ಪಿಕ್ಳೆ ಡಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ವೈದ್ಯ ಸಮುದಾಯ ಮತ್ತು ಸಾರ್ವಜನಿಕರಲ್ಲಿ ತೀವ್ರ ಆಘಾತ ಮೂಡಿಸಿದೆ.

ವೈದ್ಯ ರಾಜು ಪಿಕ್ಳೆ ಅವರು ಕಾರವಾರದ ಪೀಕ್ಳೆ ನರ್ಸಿಂಗ್ ಹೋಮ್‌ನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅನುಭವೀ ಮತ್ತು ಪರಿಚಿತ ವೈದ್ಯರಾಗಿದ್ದ ಅವರು, ಸ್ಥಳೀಯ ಜನರಲ್ಲಿ ಉತ್ತಮ ಹೆಸರು ಗಳಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಒಂದು ಘಟನೆ ಅವರ ಜೀವನವನ್ನು ಸಂಪೂರ್ಣವಾಗಿ ತಲ್ಲಣಗೊಳಿಸಿತು ಎಂದು ತಿಳಿದುಬಂದಿದೆ.