*ಪರೇಶಾನ್ ಪಾಲಿಕೆಯಲ್ಲಿ ನೆಮ್ಮದಿ ಕಾಣುತ್ತಿರುವ ಮ್ಯಾಪಿಂಗ್ ಮತದಾರರು!* *ಅನುಶ್ರೀಯವರಿಗೆ ಜನಾಭಿನಂದನೆ*

*ಪರೇಶಾನ್ ಪಾಲಿಕೆಯಲ್ಲಿ ನೆಮ್ಮದಿ ಕಾಣುತ್ತಿರುವ ಮ್ಯಾಪಿಂಗ್ ಮತದಾರರು!*

*ಅನುಶ್ರೀಯವರಿಗೆ ಜನಾಭಿನಂದನೆ*

ಎಲ್ಲಾ ಕಡೆ ಇರುವಂತೆಯೇ ಶಿವಮೊಗ್ಗದ ವಿವಿಧ ವಾರ್ಡ್ ಗಳಲ್ಲಿಯೂ 2002 ಮತದಾರರು 2025 ರಲ್ಲಿ ಮ್ಯಾಪಿಂಗ್ ಮಾಡಿಸಿಕೊಳ್ಳುವ ಗೊಂದಲ ಮುಂದುವರೆದಿದೆ. ಬಹಳಷ್ಟು ಬಿಎಲ್ ಓಗಳು ಮತದಾರರಿಗೆ ಸ್ಪಂದಿಸಬೇಕಾದ ರೀತಿಯಲ್ಲಿ ಸ್ಪಂದಿಸದ ಕಾರಣದಿಂದ ಮತದಾರರು ಗೊಂದಲ ನಿವಾರಣೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣಾ ಶಾಖೆ‌ ಮೇಲೆ ಮುಗಿ ಬೀಳುತ್ತಿದ್ದಾರೆ.

ದಿನಕಳೆದಂತೆಲ್ಲ ಪಾಲಿಕೆಯ ಚುನಾವಣಾ ಶಾಖೆ ಮತದಾರರ ಸಮಸ್ಯೆ ನಿವಾರಿಸುವ ಶಾಖೆಯಾಗಿ ಪರಿವರ್ತನೆಯಾಗುತ್ತಿದೆ. ಜಗಳ, ಗೊಂದಲದ ಕೇಂದ್ರಬಿಂದುವಾಗಲಿದ್ದ ಚುನಾವಣಾ ಶಾಖೆ ಅಲ್ಲಿರುವ ಸಿಬ್ಬಂದಿಗಳ ತಾಳ್ಮೆ ಮತ್ತು ಕೆಲಸದ ವೈಖರಿಯ ಕಾರಣದಿಂದ ಸಮಸ್ಯೆ ಪರಿಹಾರದ ಕೇಂದ್ರವಾಗಿ ರೂಪುಗೊಂಡಿರುವುದು ಸಂತೋಷದ ಮತ್ತು ಸಮಾಧಾನದ ವಿಷಯ.

ಚುನಾವಣಾ ಶಾಖೆಯಲ್ಲಿರುವ ಅನುಶ್ರೀಯವರಂಥ ಡಾಟಾ ಆಪರೇಟರ್ ಗಳು ಮತದಾರರ ಸಮಸ್ಯೆ ಅರ್ಥ ಮಾಡಿಕೊಂಡು ಪರಿಹರಿಸುತ್ತಿರುವುದು ಸಾರ್ವಜನಿಕರ ದೃಷ್ಟಿಯಲ್ಲೂ ಅಭಿನಂದನಾರ್ಹವಾಗುತ್ತಿದ್ದಾರೆ.

ಪಾಲಿಕೆ ಎಂದರೆ ಅಲೆದಾಡಿಸುವ ರಾಜಧಾನಿ ಎಂದೇ ಕರೆಯಲಾಗುತ್ತದೆ. ಪದೇ ಪದೇ ಅಲೆದಾಡಿದರೂ ಪರಿಹಾರ ಸಿಗದೇ ಪರೇಶಾನ್ ಆಗುವ ಜನರೇ ಹಿಡಿಶಾಪ ಹಾಕುತ್ತಾ ಕೂರುವ ದೃಶ್ಯಗಳು ಇಲ್ಲಿ ಸರ್ವೇ ಸಾಮಾನ್ಯ. ಇಂಥ ದೃಶ್ಯಾವಳಿಗಳ ಸಂತೆಯಲ್ಲಿ ಮತದಾರರು ಮ್ಯಾಪಿಂಗ್ ವಿಚಾರದಲ್ಲಿ ನೆಮ್ಮದಿ ಕಾಣುತ್ತಿರುವುದು ಸಣ್ಣ ಸಂಗತಿಯಲ್ಲ.

ಪಾಲಿಕೆಯಲ್ಲಿ ಅನುಶ್ರೀಯವರಂಥ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಲಿ… ಆಯುಕ್ತರಾದ ಮಾಯಣ್ಣ ಗೌಡರ ಕ್ರಿಯಾಶೀಲ ಮಾಯೆ ಇನ್ನಷ್ಟು ಪಸರಿಸಲಿ…