*ಅಜ್ಜಿಯನ್ನು ಕೊಂದಿದ್ದ ಮಿಳಘಟ್ಟದ ಗಾಂಜಾ ಗಿರಾಕಿ ಕಿಶೋರ್ ಮೇಲೆ ಪೊಲೀಸ್ ಫೈರಿಂಗ್* *ಎಸ್ ಪಿ ನಿಖಿಲ್ ರವರೇ, ಮಿಳಘಟ್ಟ ಬಡಾವಣೆಯ ಗಾಂಜಾ ಹಾವಳಿಗೆ ಈಗಲಾದರೂ ಫುಲ್ ಸ್ಟಾಪ್ ಬೀಳುತ್ತಾ?!*

*ಅಜ್ಜಿಯನ್ನು ಕೊಂದಿದ್ದ ಮಿಳಘಟ್ಟದ ಗಾಂಜಾ ಗಿರಾಕಿ ಕಿಶೋರ್ ಮೇಲೆ ಪೊಲೀಸ್ ಫೈರಿಂಗ್*

*ಎಸ್ ಪಿ ನಿಖಿಲ್ ರವರೇ, ಮಿಳಘಟ್ಟ ಬಡಾವಣೆಯ ಗಾಂಜಾ ಹಾವಳಿಗೆ ಈಗಲಾದರೂ ಫುಲ್ ಸ್ಟಾಪ್ ಬೀಳುತ್ತಾ?!*

ಶಿವಮೊಗ್ಗದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ಗಾಂಜಾ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೊರಟಿದ್ದ ತನ್ನ ಅಜ್ಜಿಯನ್ನೇ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಂದು ಪರಾರಿಯಾಗಿದ್ದ ಆರೋಪಿ ಕಿಶೋರನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಕೊಲೆ ನಂತರ ನಾಪತ್ತೆಯಾಗಿದ್ದ ಕಿಶೋರನ ಪತ್ತೆಗಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮತ್ತು ತಂಡ ವಾಜಪೇಯಿ ಬಡಾವಣೆಯಲ್ಲಿ ಆರೋಪಿ ಕಿಶೋರ್(26) ನನ್ನು ಪತ್ತೆ ಹಚ್ಚಿದ್ದಾರೆ.

ಬಂಧಿಸಲು ಹೋದಾಗ ಕಿಶೋರ್ ಚಾಕುವಿನಿಂದ ಪೊಲೀಸ್ ಗಣೇಶ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ.ಕೂಡಲೇ ಇನ್ಸ್ ಪೆಕ್ಟರ್ ರಕ್ಷಣೆಗಾಗಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆಗಲೂ ಶರಣಾಗದ ಕಿಶೋರನ ಎಡಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಪೊಲೀಸ್ ಗಣೇಶ್ ಮತ್ತು ಆರೋಪಿ ಕಿಶೋರ್ ನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ.