*ಶಿವಮೊಗ್ಗದ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ ಅರೆಸ್ಟ್ ಹಿಂದಿನ ಸಂಪೂರ್ಣ ಸ್ಟೋರಿ…* *ಪೊಲೀಸ್ ಇಲಾಖೆಯ 80 ಕೋಟಿ ರೂ., ಮೌಲ್ಯದ ಆಸ್ತಿ ಕಬಳಿಸಲು ಹೋಗಿದ್ದರೇ ಶಿವಮೊಗ್ಗ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ?!* *ಶ್ರೀನಾಥ್ ನಗರಗದ್ದೆ ಬೆನ್ನಹಿಂದೆ ಭೂ ಕಬಳಿಕೆಯ ಮಹಾಜಾಲದ ಶಂಕೆ?* *ಪೊಲೀಸರ ತನಿಖೆಯಲ್ಲಿ ಬಯಲಾಗಲಿದೆಯೇ ಇನ್ನಷ್ಟು ಭೂ ಕಬಳಿಕೆ ಪ್ರಕರಣಗಳು!*
*ಶಿವಮೊಗ್ಗದ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ ಅರೆಸ್ಟ್ ಹಿಂದಿನ ಸಂಪೂರ್ಣ ಸ್ಟೋರಿ…*
*ಪೊಲೀಸ್ ಇಲಾಖೆಯ 80 ಕೋಟಿ ರೂ., ಮೌಲ್ಯದ ಆಸ್ತಿ ಕಬಳಿಸಲು ಹೋಗಿದ್ದರೇ ಶಿವಮೊಗ್ಗ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ?!*
*ಶ್ರೀನಾಥ್ ನಗರಗದ್ದೆ ಬೆನ್ನಹಿಂದೆ ಭೂ ಕಬಳಿಕೆಯ ಮಹಾಜಾಲದ ಶಂಕೆ?*
*ಪೊಲೀಸರ ತನಿಖೆಯಲ್ಲಿ ಬಯಲಾಗಲಿದೆಯೇ ಇನ್ನಷ್ಟು ಭೂ ಕಬಳಿಕೆ ಪ್ರಕರಣಗಳು!*

ಪೊಲೀಸ್ ಇಲಾಖೆಯ 80 ಕೋಟಿ ರೂ., ಮೌಲ್ಯದ ಆಸ್ತಿ ಕಬಳಿಸಲು ಹೋಗಿದ್ದರೇ ಶಿವಮೊಗ್ಗ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ?!
ಹೌದೆನ್ನುತ್ತವೆ ಪೊಲೀಸ್ ಮೂಲಗಳು.
ತುಮಕೂರು ಮೂಲದ ಕೃಷ್ಣಮೂರ್ತಿ, ಶಿವಮೊಗ್ಗದ ಶ್ರೀನಾಥ್ ನಗರಗದ್ದೆ ಮತ್ತು ಕಿಶನ್ ರವರನ್ನು ಬಂಧಿಸಿರುವ ಬೆಂಗಳೂರು ಮಲ್ಲೇಶ್ವರದ ಪೊಲೀಸರು ಕಂಬಿಗಳ ಹಿಂದೆ ಭಾನುವಾರ ಬಿಟ್ಟು ಬಂದಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಲ್ಲೇಶ್ವರದ ಪೊಲೀಸ್ ವಸತಿಗೃಹದ ಜಾಗವನ್ನು ಆರೋಪಿಗಳು ಕಬಳಿಸಲು ಯತ್ನಿಸಿದ್ದಾರೆಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್ಸ್ ಪೆಕ್ಟರ್ ಎಂ.ಕುಮಾರ್ ನೀಡಿದ ದೂರಿನ ಮೇರೆಗೆ ಎಫ್ ಐ ಆರ್ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನು ಈಗಾಗಲೇ 1913ರ ಮಾಪನ ನಕ್ಷೆಯಲ್ಲಿಯೇ ಪೊಲೀಸ್ ವಸತಿಗೃಹವೆಂದು ಗುರುತಿಸಿದ್ದು, ಇದು ಸುಮಾರು 80 ಕೋಟಿ ಮೌಲ್ಯದ ಆಸ್ತಿಯಾಗಿದೆ.
ಈ ಸ್ಥಳದಲ್ಲೀಗ ನಾಲ್ವರು ಇನ್ಸ್ ಪೆಕ್ಟರ್ ಗಳ ಕುಟುಂಬ ಹಾಗೂ ಸಿಬ್ಬಂದಿ ವಾಸಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಅಲ್ಲೇ ವಾಸವಿರುವ ಇನ್ಸ್ ಪೆಕ್ಟರ್ ಕುಮಾರ್ ಮನೆಗೆ ವಿದ್ಯುತ್ ಬಿಲ್ ಬಂದಿದ್ದು, ಅದರಲ್ಲಿ ಮಹಾಲಕ್ಷ್ಮೀ ಎಂಬ ಖಾಸಗಿ ಹೆಸರಿತ್ತು. ಅನುಮಾನಗೊಂಡ ಕುಮಾರ್ ಬೆಸ್ಕಾಂ, ಜಿಬಿಎ, ಉಪ ನೋಂದಣಿ ಕಚೇರಿಗಳಿಗೆ ಭೇಟಿ ನೀಡಿ ವಿಚಾರಣೆ ಆರಂಭಿಸಿದಾಗ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಮಹಾಲಕ್ಷ್ಮೀ ಎಂಬ ಹೆಸರಿಗೆ ವರ್ಗಾವಣೆ ಮಾಡಲಾಗಿರುವುದು ಕಂಡು ಬಂದಿದೆ. ಜೊತೆಗೆ, ಜಿಬಿಎ ಮೂಲಕ ಅಕ್ರಮವಾಗಿ ಇ- ಖಾತಾ ಮಾಡಿಸಿರುವುದು ಹಾಗೂ ಮಾರಾಟ ಮಾಡಲು ಒಪ್ಪಂದ ಪತ್ರ ಕೂಡ ಮಾಡಲಾಗಿತ್ತು.
ಆಸ್ತಿ ವರ್ಗಾವಣೆಗೊಂಡಿರುವ ಮಹಾಲಕ್ಷ್ಮಿ ವಯೋವೃದ್ಧರಾಗಿದ್ದಾರೆ. ಆ ಆಸ್ತಿ ಕಬಳಿಕೆ ವಿಚಾರ ಈ ಮಹಾಲಕ್ಷ್ಮಿಯವರ ಗಮನದಲ್ಲೇ ಇರಲಿಲ್ಲ. ಆದರೆ, ಆರೋಪಿಗಳು ಅಕ್ರಮ ದಾಖಲೆ ಸೃಷ್ಟಿಸಿ ಅವರ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿದ್ದು ತನಿಖೆಯಲ್ಲಿ ತಿಳಿದು ಬಂದಿದೆ.
ಈ ಸಂಬಂಧ ಸ್ಥಳ ಪರಿಶೀಲನೆ ಮಾಡದೇ ನಕಲಿ ದಾಖಲೆಗಳನ್ನೇ ನೋಡಿ ಇ- ಖಾತಾ ಮಾಡಿಕೊಟ್ಟ, ವಿದ್ಯುತ್ ಬಿಲ್ ವರ್ಗಾವಣೆ ಮಾಡಿಕೊಟ್ಟ ಜಿಬಿಎ ಮತ್ತು ಬೆಸ್ಕಾಂ ಅಧಿಕಾರಿಗಳಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ.
ಶ್ರೀನಾಥ್ ನಗರಗದ್ದೆ ಗ್ಯಾಂಗಿನ ಹಿಂದೆ ಬಹುದೊಡ್ಡ ಜಾಲವೇ ಇರುವ ಬಗ್ಗೆ, ಈ ಜಾಲದ ಒಳಗೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಕೈವಾಡದ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಆರೋಪಿಗಳು ಎಲ್ಲೆಲ್ಲಿ ಭೂ ಕಬಳಿಕೆ ಮಾಡಿದ್ದಾರೆಂಬ ಬಗ್ಗೆಯೂ ತನಿಖೆ ನಡೆದಿದೆ.


