*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…* *ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್*
*ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಮಾಲೀಕ- ಕೆಲಸದವರು…*
*ಪ್ರಾಮಾಣಿಕರಿಗೆ ಸನ್ಮಾನಿಸಿ ಬೆನ್ನು ತಟ್ಟಿದ ಜಯನಗರ ಇನ್ಸ್ ಪೆಕ್ಟರ್ ರವಿ ಪಾಟೀಲ್*

ಗ್ರಾಹಕ ಮಹಿಳೆ ಮರೆತು ಹೋಗಿದ್ದ ಲಕ್ಷಾಂತರ ರೂ.,ಮೌಲ್ಯದ ವಸ್ತುಗಳಿದ್ದ ವ್ಯಾನಿಟಿ ಬ್ಯಾಗನ್ನು ಶಿವಮೊಗ್ಗದ ದುರ್ಗಿಗುಡಿ ನ್ಯೂ ಇತಿಹಾಸ ಕಲೆಕ್ಷನ್ ಬಟ್ಟೆ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಯಥಾಸ್ಥಿತಿಯಲ್ಲಿ ಮರಳಿಸಿದ್ದು, ಈ ಪ್ರಾಮಾಣಿಕರನ್ನು ಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವಿ ಪಾಟೀಲ ಅಭಿನಂದಿಸಿದ್ದಾರೆ.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಕು.ಸ್ವಾತಿ ಮತ್ತು ಕು.ಸಂಗೀತಾ ಹಾಗೂ ಅಂಗಡಿ ಮಾಲೀಕ ಮಾರ್ತಾಂಡ ಅಭಿನಂದನೆಗೊಳಗಾದವರು.
ಬಿಟ್ಟು ಹೋಗಿ ಈಗ ಮರಳಿ ಪಡೆದ ವ್ಯಾನಿಟಿ ಬ್ಯಾಗಲ್ಲಿ 5ಲಕ್ಷ ರೂ.,ಗಳ ಮೌಲ್ಯದ ಬೆಲೆ ಬಾಳುವ ಬಂಗಾರ, ಇನ್ನಿತರೆ ವಸ್ತುಗಳಿದ್ದವೆಂದು ಆ ವ್ಯಾನಿಟಿ ಬ್ಯಾಗಿನ ಮಾಲೀಕೆ ಗಾಯತ್ರಿ ವಿವರಿಸಿದ್ದಾರೆ.


