*ಕಾಣೆಯಾದ ಮಿಳಘಟ್ಟದ ಮಹಿಳೆ ಮತ್ತು ಮಗು* *ಪತ್ತೆಗೆ ಸಹಕರಿಸಲು ಮನವಿ*

*ಕಾಣೆಯಾದ ಮಿಳಘಟ್ಟದ ಮಹಿಳೆ ಮತ್ತು ಮಗು*

*ಪತ್ತೆಗೆ ಸಹಕರಿಸಲು ಮನವಿ*

ಶಿವಮೊಗ್ಗ ನಗರದ ಮಿಳಘಟ್ಟದ ಲಕ್ಷ್ಮೀ ಕ್ಯಾಂಟೀನ್ ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಿದ್ದ 26 ವರ್ಷದ ಅಮಿಜ್ ಸೋಹಾನಿ ನದೀಂ ಪಾಷಾ ಎಂಬ ಮಹಿಳೆ ತನ್ನ 3 ವರ್ಷ 9 ತಿಂಗಳ ಮಗಳು ಐಜಾ ಫಾತೀಮಳನ್ನು ಕರೆದುಕೊಂಡು ಏ. 13 ರಿಂದ ಕಾಣೆಯಾಗಿದ್ದಾರೆ.

ಅಮಿಜ್ ಸೋಹಾನಿಯ ಚಹರೆ 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ.
ಐಜಾ ಫಾತಿಮಾಳ ಚಹರೆ 3 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿರುತ್ತಾರೆ.
ಕಾಣೆಯಾದ ತಾಯಿ ಮಗಳ ಬಗ್ಗೆ ಯಾವುದೇ ಸುಳಿವು ಇದ್ದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 7348918569 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.