*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?* *ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…* *60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ*
*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?*
*ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…*
*60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ*
ನಾರಿ ಶಕ್ತಿ ವಂದನೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಲೋಕಸಭೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೇಸ್ ತಾನು ಮಹಿಳಾ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರ ಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದ ಕಾಂಗ್ರೇಸ್ ಈಗ ಅದನ್ನು ವಿರೋಧಿಸಿದೆ. ಈ ಹಿಂದೆ ವಾಜಪೇಯಿ ಸರ್ಕಾರವಿದ್ದಾಗ ಹಾಗೂ ಹಿಂದಿನ ಕಾಂಗ್ರೇಸ್ ನೇತೃತ್ವದ ಸರ್ಕಾರದ ಆಡಳಿತದಲ್ಲೂ ಈ ಮಸೂದೆಯನ್ನು ಮಂಡಿಸಲಾಗಿತ್ತು, ಆಗ ಬಿಜೆಪಿ ಸಂಪೂರ್ಣ ಬೆಂಬಲ ನೀಡಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗಿತ್ತು. ಆದರೆ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸದೇ ಆಗಲೂ ಕಾಂಗ್ರೇಸ್ ದೇಶದ ಮಹಿಳೆಯರಿಗೆ ಅನ್ಯಾಯವೆಸಗಿತ್ತು ಎಂದರು.
ಕಾಯ್ದೆಯಲ್ಲಿ ಮುಸ್ಲಿಮ್ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಬೇಕೆಂಬ ಬೇಡಿಕೆ ಸಂಪೂರ್ಣ ಸಂವಿಧಾನ ವಿರೋಧಿ ನಿಲುವಾಗಿದ್ದು, ಬಾಬಾ ಸಾಹೇಬರ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ, ಕಾಂಗ್ರೇಸ್ ಕುಟುಂಬದ ಅಧಿನಾಯಕಿಯರು ಮಾತ್ರ ತಮಗೆ ಅನುಕೂಲವಾದ ಕ್ಷೇತ್ರವನ್ನು ಆಯ್ದುಕೊಂಡು ಚುನಾವಣೆ ಗೆಲ್ಲಬಹುದು. ಆದರೆ, ಸಾಮಾನ್ಯ ಮಹಿಳೆಯರು ಅವಕಾಶಗಳಿಲ್ಲದೆ ಇವರ ಗುಲಾಮರಾಗಿಯೇ ಮುಂದುವರಿಯಬೇಕೆಂಬುದು ‘ಕಾಂಗ್ರೇಸ್ ನಾಯಕರ ನಿಲುವು ಎಂದರು.
ಕ್ಷೇತ್ರ ಮರುವಿಂಗಡಣೆಯ ಮಸೂದೆಯೊಟ್ಟಿಗೆ ಮಹಿಳಾ ಮೀಸಲಾತಿಯನ್ನು ತಳುಕು ಹಾಕಿ ಕಾಂಗ್ರೇಸ್ ಮಸೂದೆಯನ್ನು ಸೋಲಿಸಿತು. ಆದರೆ ಲೋಕಸಭೆಯಲ್ಲಿ ಎರಡೂ ಮಸೂದೆಗಳು ಮಂಡನೆಯಾದರೂ ಮತಕ್ಕೆ ಹಾಕಿದ್ದು ಮಹಿಳಾ ಮೀಸಲಾತಿ ಮಸೂದೆಯನ್ನು ಮಾತ್ರ. ಮಹಿಳೆಯರ ಸಬಲೀಕರಣಕ್ಕಾಗಿ ಈ ಮಸೂದೆಯನ್ನು ಬೆಂಬಲಿಸುವಂತೆ ಲೋಕಸಭೆಯಲ್ಲಿ ಸ್ವತಃ ಪ್ರಧಾನಿಯವರೇ ಕೋರಿಕೊಂಡರೂ ಕಾಂಗ್ರೇಸ್ ಬೆಂಬಲಿಸಿಲ್ಲ. ಮೂರು ದಿನ ನಡೆದ ಚರ್ಚೆಯಲ್ಲಿ ಮಸೂದೆಯ ಪರವಾಗಿರುವುದಾಗಿ ಹೇಳಿದ್ದ ಕಾಂಗ್ರೇಸ್ ನಂತರ ಕಾಯ್ದೆಯನ್ನು ಸೋಲಿಸಿದ್ದನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸಲಾರರು ಎಂದು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಯ ಸೋಲು ಭಾರತೀಯ ಮಹಿಳೆಯರಿಗೆ ಕಾಂಗ್ರೇಸ್ ಮಾಡಿದ ಅವಮಾನ. ಮುಂದಿನ ದಿನಗಳೆಲ್ಲಾದರೂ ಕಾಂಗ್ರೇಸ್ ತನ್ನ ತಪ್ಪನ್ನು ತಿದ್ದಿಕೊಂಡು ಮಸೂದೆಯನ್ನು ಬೆಂಬಲಿಸಬೇಕು. ಪ್ರಧಾನಿಯವರು ಮುಂಬರುವ ಅಧಿವೇಶನದಲ್ಲಿ ಈ ಮಸೂದೆಯನ್ನು ಪುನಃ ಮಂಡಿಸುವುದರ ಮೂಲಕ ದೇಶದ ಮಹಿಳಾ ಶಕ್ತಿಗೆ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿಸುವುದರ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಒಳಗೊಳ್ಳುವಿಕೆಗೆ ಅವಕಾಶ ಮಾಡಿಕೊಡಬೇಕೆಂಬುದು ನಮ್ಮ ಆಶಯ ಎಂದರು.
ಕ್ಷೇತ್ರ ಮರುವಿಂಗಡಣೆಯಾದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಕಾಂಗ್ರೇಸ್ ಮತ್ತೊಂದು ಸುಳ್ಳನ್ನು ಹೇಳುತ್ತಿದೆ. ಯಾವುದೇ ಕಾರಣಕ್ಕೂ ನಮಗೆ ಅನ್ಯಾಯವಾಗುವುದಿಲ್ಲ ಬದಲಾಗಿ ಅನುಕೂಲವಾಗಲಿದೆ ಈಗಿರುವ ಕರ್ನಾಟಕದ 20 ಸಂಸದರ ಸಂಖ್ಯೆ 50% ಹೆಚ್ಚಳವಾಗಿ 42 ಕ್ಕೆ ಏರಿಕೆಯಾಗಲಿದೆ. ಇದರಿಂದ ರಾಜ್ಯದ ಪ್ರಾತಿನಿಧ್ಯ ಮೊದಲಿಗಿಂತಲೂ ಅಧಿಕವಾಗಂದೆ ಜನಸಂಖ್ಯೆಗೆ ಆಧಾರವಾಗಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಜನರ ಪ್ರತಿನಿಧಿತ್ವವನ್ನು ಪಾಲ್ಗೊಳ್ಳುವಂತೆ ಮಾಡುವುದು ಈ ಮಸೂದೆಯ ಆಶಯವಾಗಿದೆ ಎಂದರು.
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆ ಮಸೂದೆಗಳು ಯಾವುದೇ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸರ್ಕಾರ ಮಾಡುತ್ತಿರುವ ಪ್ರಕ್ರಿಯೆಗಳಲ್ಲ, ಬದಲಾಗಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಭಂಗೊಳಿಸಲು ಅಂಗ ಭೇದವಿಲ್ಲದೆ ಸಮಾನವಾಗಿ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದತ್ತ ನಡೆಯುವ ಮಾರ್ಗ ಕಾಂಗ್ರೇಸ ಪಕ್ಷ ಕ್ಷುಲ್ಲಕ ಕಾರಣ ನೀಡಿ ಈ ಐತಿಹಾಸಿಕ ಬದಲಾವಣೆಗೆ ತಡೆಯೊಡ್ಡುತ್ತಿರುವುದು ಅದರ ಪ್ರಜಾಪ್ರಭುತ್ವ ವಿರೋಧಿ ದೋರಣೆಯನ್ನು ತೋರಿಸುತ್ತದೆ ಎಂದರು.
ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ಆರ್ ಎಸ್ ಎಸ್, ಮೋದಿ ಬಗ್ಗೆ ಹದ್ದುಮೀರಿ ಮಾತಾಡಿದ್ದಾರೆ. ಜನಪ್ರಿಯತೆಯಲ್ಲಿ ಮೋದಿ ಪ್ರಥಮ ಸ್ಥಾನದಲ್ಲಿದ್ದಾರೆ. ಖರ್ಗೆ ಹೇಳಿದ ಮೋದಿ ಭಯೋತ್ಪಾದಕ ಹೇಳಿಕೆ ವಾಪಸ್ ತಗೊಂಡರೂ ಕಿಮ್ಮನೆ ಆ ಮಾತನ್ನು ಸ್ವಾಗತಿಸಿದ್ದು ಖಂಡನಾರ್ಹ ಎಂದು ಕಿಡಿಕಾರಿದರು.


