*ದರೋಡೆಕೋರರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ* *ಯಾರು ದರೋಡೆಕೋರರು? ಇಲ್ಲಿದೆ ಸಂಪೂರ್ಣ ಮಾಹಿತಿ…* *ಟಿಪ್ಪುನಗರದ ಇಮ್ರಾನ್ ಷರೀಫ್, ಕಡೇಕಲ್ಲಿನ ಅಬೀದ್ ಖಾನ್, ಮುಜಾಹಿದ್, ಟಿಪ್ಪುನಗರದ ಹನೀಫುಲ್ಲಾ, ಕಡೇಕಲ್ಲಿನ ನಸ್ರುಲ್ಲಾ ಶಿಕ್ಷೆಗೆ ಒಳಗಾದವರು*

*ದರೋಡೆಕೋರರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ*

*ಯಾರು ದರೋಡೆಕೋರರು? ಇಲ್ಲಿದೆ ಸಂಪೂರ್ಣ ಮಾಹಿತಿ…*

*ಟಿಪ್ಪುನಗರದ ಇಮ್ರಾನ್ ಷರೀಫ್, ಕಡೇಕಲ್ಲಿನ ಅಬೀದ್ ಖಾನ್, ಮುಜಾಹಿದ್, ಟಿಪ್ಪುನಗರದ ಹನೀಫುಲ್ಲಾ, ಕಡೇಕಲ್ಲಿನ ನಸ್ರುಲ್ಲಾ ಶಿಕ್ಷೆಗೆ ಒಳಗಾದವರು*

ದರೋಡೆ ಮಾಡುತ್ತಿದ್ದ ನಾಲ್ವರ ವಿರುದ್ಧ ಶಿವಮೊಗ್ಗದ ನ್ಯಾಯಾಲಯ ತೀರ್ಪು ನೀಡಿದ್ದು, 10 ವರ್ಷ ಕಠಿಣ ಸಜೆ, 50ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ.

ಫೆಬ್ರವರಿ 2 ರಂದು ರಾತ್ರಿ ಸಮಯದಲ್ಲಿ ಗೋಂದಿ ಕೈಮರದ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಿದಾಗ,5 ಜನ ಆರೋಪಿತರು ಮರದದೊಣ್ಣೆ, ಕಬ್ಬಿಣದ ಚಾಕು, ಖಾರದ ಪುಡಿ ಮತ್ತು ಸ್ಟೀಲ್ ರಾಡುಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗಿ ಬರುತ್ತಿದ್ದ ವಾಹನಗಳನ್ನು ಅಡ್ಡಹಾಕಲು ಪ್ರಯತ್ನಿಸುತ್ತಿದ್ದು,* ನಂತರ ಅವರನ್ನು ಹಿಡಿದುಕೊಳ್ಳಲು ದಾಳಿ ಮಾಡಿದ್ದು, ಅದರಲ್ಲಿ ಒಬ್ಬ ಓಡಿ ಹೋಗಿದ್ದು,ಉಳಿದ ಆರೋಪಿತರನ್ನು ಹಿಡಿದುಕೊಂಡು ವಿಚಾರಿಸಲಾಗಿ ದರೊಡೆ ಮಾಡಲು ಹೊಂಚು ಹಾಕುತ್ತಿರುವುದಾಗಿ ತಿಳಿಸಿದ್ದು, ಸದರಿಯವರಿಂದ ದೊಣ್ಣೆ, ಬಿಳಿ ಪೊಟ್ಟಣ ಕಟ್ಟಿ ಇಟ್ಟುಕೊಂಡಿದ್ದ ಕಾರದ ಪುಡಿ, ಕಬ್ಬಿಣದ ಚಾಕು, ಸ್ಟೀಲ್ ರಾಡ್, ಮರದ ದೊಣ್ಣೆಯನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ 31/2019 ಕಲಂ 399, 402 ಐಪಿಸಿ* ಕಾಯಿದೆ ರೀತ್ಯಾ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಹುಚ್ಚಪ್ಪ ಎಎಸ್ಐ ರವರು ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. (ಸರ್ಕಾರಿ ಅಭಿಯೋಜಕರವರು) ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಜ.1ರಂದು ಆರೋಪಿತರಾದ ಎ1) ಇಮ್ರಾನ್ ಷರೀಫ್ (33 ವರ್ಷ, ವಾಸ 1 ನೇ ತಿರುವು ಟಿಪ್ಪು ನಗರ ಶಿವಮೊಗ್ಗ) ಎ2) ಅಬೀದ್ ಖಾನ್ (35 ವರ್ಷ, ವಾಸ ಕಡೇಕಲ್, ಶಿವಮೊಗ್ಗ) ಎ3) ಮುಜಾಹಿದ್ (40 ವರ್ಷ, ವಾಸ ಕಡೇಕಲ್ಲು ಶಿವಮೊಗ್ಗ) ಎ4) ಹನೀಫುಲ್ಲಾ ಖಾನ್ (22 ವರ್ಷ, ವಾಸ 2 ನೇ ತಿರುವು, ಟಿಪ್ಪು ನಗರ ಶಿವಮೊಗ್ಗ) ಎ5) ನಸ್ರುಲ್ಲಾ (29 ವರ್ಷ , ವಾಸ ಕಡೇಕಲ್ಲು ಶಿವಮೊಗ್ಗ) ರವರಿಗೆ ಕಲಂ 399 ಐಪಿಸಿ ಕಾಯಿದೆಗೆ 10 ವರ್ಷ ಕಠಿಣ ಸಜೆ ಮತ್ತು ತಲಾ 50,000 ರೂ ದಂಡ ತಪ್ಪಿದ್ದಲ್ಲಿ 5 ತಿಂಗಳು ಸಾದಾ ಸೆರೆವಾಸ, ಕಲಂ 402 ಐಪಿಸಿ ಕಾಯಿದೆಗೆ 7 ವರ್ಷ ಕಠಿಣ ಸಜೆ ಮತ್ತು ತಲಾ 30,000/- ರೂ ದಂಡವನ್ನು ಪಾವತಿಸಬೇಕು ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸಜೆಯನ್ನು ಅನುಭವಿಸತಕ್ಕದ್ದು ಎಂದು ಆದೇಶಿಸಿದೆ.