ಶಿವಮೊಗ್ಗ ಕೋರ್ಟಲ್ಲೊಂದು ವಿಶೇಷ ಘಟನೆ**ಹಣದ ಆಮಿಷಕ್ಕೆ ಬಿದ್ದು ಸುಳ್ಳು ಜಾಮೀನು ನೀಡಿದ್ದ ಗಂಗಮ್ಮ, ಮಾಮೂ ವಿರುದ್ಧ ಎಫ್ ಐ ಆರ್…**ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಈ ನಕಲಿ ಜಾಮೀನು ಪ್ರಕರಣದ ವಿರುದ್ಧ ಕೈಗೊಂಡ ಕಠಿಣ ಕ್ರಮ ನಕಲಿ ಜಾಮೀನು ನೀಡುವವರಿಗೆ ಬುದ್ದಿ ಕಲಿಸುತ್ತಾ?*

*ಶಿವಮೊಗ್ಗ ಕೋರ್ಟಲ್ಲೊಂದು ವಿಶೇಷ ಘಟನೆ*

*ಹಣದ ಆಮಿಷಕ್ಕೆ ಬಿದ್ದು ಸುಳ್ಳು ಜಾಮೀನು ನೀಡಿದ್ದ ಗಂಗಮ್ಮ, ಮಾಮೂ ವಿರುದ್ಧ ಎಫ್ ಐ ಆರ್…*

*ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಈ ನಕಲಿ ಜಾಮೀನು ಪ್ರಕರಣದ ವಿರುದ್ಧ ಕೈಗೊಂಡ ಕಠಿಣ ಕ್ರಮ ನಕಲಿ ಜಾಮೀನು ನೀಡುವವರಿಗೆ ಬುದ್ದಿ ಕಲಿಸುತ್ತಾ?*

ಕೊಲೆ ಆರೋಪಿಯ ಗುರುತು ಪರಿಚಯವಿಲ್ಲದಿದ್ದರೂ ಜಾಮೀನು ನೀಡಲೆಂದು ವ್ಯಕ್ತಿಯೊಬ್ಬ ನೀಡಿದ ಹಣದ ಆಮಿಷಕ್ಕೊಳಗಾಗಿ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬಂದಿದ್ದ ಬೆಂಗಳೂರು ಮೂಲದ ಮಹಿಳೆ ಮತ್ತು ಹಣದ ಆಮಿಷ ನೀಡಿದ್ದ ವ್ಯಕ್ತಿ ಮೇಲೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಾಕಷ್ಟು ಕುತೂಹಲಕಾರಿಯಾಗಿದೆ.

ಈ ನ್ಯಾಯಾಲಯದ ಪ್ರಕರಣ ಸಂಖ್ಯೆ 115/2022 ರ ಆರೋಪಿ ಪರಶುರಾಮನಿಗೆ ಜಾಮೀನು ನೀಡಲೆಂದು ಬಂದ ಮಹಿಳೆ ಗಂಗಮ್ಮ ಈಗ ತಾನೇ ಕೇಸು ಜಡಿಸಿಕೊಂಡಿದ್ದಾಳೆ. ಈಕೆಗೆ 5 ಸಾವಿರ ರೂ., ಕೊಡಿಸುತ್ತೇನೆಂದು ಜಾಮೀನಿಗೆ ಸಿದ್ಧ ಪಡಿಸಿದ್ದ ಮಧ್ಯವರ್ತಿ ಮಾಮು ಎಂಬಾತನ ಮೇಲೂ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಪರಶುರಾಮನ ಸಹೋದರಿ ನಾಗು ಮನೆಯ ಪಕ್ಕದ ಮನೆಯವಳು ಎಂದು ಜಾಮೀನುದಾರೆ ಗಂಗಮ್ಮ ಪರಿಚಯಿಸಿಕೊಳ್ಳುತ್ತಾಳೆ. ವಿಚಾರಣೆಯ ವೇಳೆ ಆರೋಪಿಗೆ ಜಾಮೀನು ನೀಡಲು ಬಂದ ಗಂಗಮ್ಮ ಪರಿಚಯದವಳೆಂದು ಸಾಬೀತಾಗಿ ಹೋಗುತ್ತದೆ. ಅಬ್ಬಯ್ಯ ಎಂಬ ವ್ಯಕ್ತಿ ಗಂಗಮ್ಮನಿಗೆ ಜಾಮೀನು ನೀಡಿದರೆ ಐದು ಸಾವಿರ ರೂ., ಕೊಡಿಸುವುದಾಗಿ ಮಾಹಿತಿ ದೊರೆತಾಗ ಅಬ್ಬಯ್ಯನನ್ನು ಕೋರ್ಟಿಗೆ ಕರೆಸಿ ವಿಚಾರಣೆ ಮಾಡಲಾಗುತ್ತೆ. ತನಗೇನೂ ಗೊತ್ತಿಲ್ಲ ಎಂದಾಗ ಮತ್ತೆ ಗಂಗಮ್ಮರನ್ನು ವಿಚಾರಿಸಿದಾಗ ಮಾಮು ಎಂಬಾತನ ಹೆಸರು ಹೇಳುತ್ತಾಳೆ.

ದುರುದ್ದೇಶದಿಂದ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ, ದಾಖಲೆಗಳನ್ನು ನೀಡಿ, ತನಗೆ ಪರಿಚಯವಿಲ್ಲದೇ ಇರುವ ಆರೋಪಿ/ ಅಪರಾಧಿ ಪರಶುರಾಮನಿಗೆ ಜಾಮೀನು ನೀಡುವುದಾಗಿ ಬಂದಿದ್ದ ಗಂಗಮ್ಮಳದು ಶಿಕ್ಷಾರ್ಹ ಅಪರಾಧವಾಗಿದೆ. ಪ್ರಮಾಣ ಪತ್ರದಲ್ಲಿ ಆರೋಪಿ ತನಗೆ ಪರಿಚಯ ಇರುವುದಾಗಿ ಸುಳ್ಳು ಹೇಳಿದ್ದಾಳೆ.

ಗಂಗಮ್ಮ ಜಾಮೀನು ನೀಡಲು ಬಂದಿದ್ದ ವ್ಯಕ್ತಿ ಪರಶುರಾಮ ಐ ಪಿ ಸಿ ಕಲಂ 302 ರಂತೆ ಅಪರಾಧಿಯಾಗಿದ್ದು, ಈ ತೀರ್ಪಿನ ಬಗ್ಗೆ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ. ಉಚ್ಛ ನ್ಯಾಯಾಲಯದ ಅಪೀಲು ಸಂಖ್ಯೆ 990/2024 ರಂತೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶವಿತ್ತು. ಜಾಮೀನುದಾರರು ತೃಪ್ತಿಕರವಾಗಿದ್ದಲ್ಲಿ ಮಾತ್ರ ಜಾಮೀನು ಸ್ವೀಕರಿಸಬೇಕೆಂದು ಉಚ್ಛ ನ್ಯಾಯಾಲಯವು ನಿರ್ದಿಷ್ಟವಾಗಿ ಆದೇಶಿಸಿತ್ತು.

ಆರೋಪಿ/ ಅಪರಾಧಿಗೆ ಜಾಮೀನು ನೀಡಲು ಬಂದಂತಹ ಗಂಗಮ್ಮ ದುರುದ್ದೇಶದಿಂದ, ದುರ್ಲಾಭ ಪಡೆದು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಲು ಸುಳ್ಳು ದಾಖಲೆಗಳನ್ನು ನೀಡಿದ್ದಳು.
ಗಂಗಮ್ಮ ಮತ್ತು ಜಾಮೀನು ನೀಡಲು ಆಮಿಷವೊಡ್ಡಿ ಕರೆಸಿಕೊಂಡಿದ್ದ ಮಾಮೂ ವಿರುದ್ಧ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆದೇಶ ನೀಡಿದ್ದರ ಮೇರೆಗೆ ಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023 ರ ಯು/ಎಸ್- 229(1),336(2),336(3),3(5) ರಂತೆ ಪ್ರಕರಣ ದಾಖಲಾಗಿದೆ.