*ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಒತ್ತಾಯ* *ಶಿವಮೊಗ್ಗ ಉಪವಿಭಾಗದಲ್ಲಿ ಶೇ 60 ರಷ್ಟು ನಕಲಿ ಕಾರ್ಮಿಕ ಕಾರ್ಡ್ ಗಳ ವಿತರಣೆ* *ನಕಲಿ ಕಾರ್ಮಿಕ ಕಾರ್ಡ್ ವಿತರಿಸಿದ ಕಾರ್ಮಿಕ ಅಧಿಕಾರಿಗಳು- ಪಡೆದ ನಕಲಿ ಕಾರ್ಮಿಕರ ವಿರುದ್ಧ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಲಿ*
*ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಒತ್ತಾಯ*
*ಶಿವಮೊಗ್ಗ ಉಪವಿಭಾಗದಲ್ಲಿ ಶೇ 60 ರಷ್ಟು ನಕಲಿ ಕಾರ್ಮಿಕ ಕಾರ್ಡ್ ಗಳ ವಿತರಣೆ*
*ನಕಲಿ ಕಾರ್ಮಿಕ ಕಾರ್ಡ್ ವಿತರಿಸಿದ ಕಾರ್ಮಿಕ ಅಧಿಕಾರಿಗಳು- ಪಡೆದ ನಕಲಿ ಕಾರ್ಮಿಕರ ವಿರುದ್ಧ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಲಿ*

ಶಿವಮೊಗ್ಗ- ಭದ್ರಾವತಿ- ತೀರ್ಥಹಳ್ಳಿ ವ್ಯಾಪ್ತಿಯ ಶಿವಮೊಗ್ಗ ಉಪ ವಿಭಾಗದಲ್ಲಿ 10,444 ಕಾರ್ಮಿಕ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಇದರಲ್ಲಿ ಶೇ.60 ರಷ್ಟು ಕಾರ್ಡ್ ಗಳು ನಕಲಿ. ಈ ಬಗ್ಗೆ ಲೋಕಾಯುಕ್ತರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತಳಮಟ್ಟದ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯರಾದ ಹನುಮಂತಪ್ಪ ಯಡವಾಲ ಒತ್ತಾಯಿಸಿದ್ದಾರೆ.
ವಿತರಿಸಲಾದ ಕಾರ್ಮಿಕ ಕಾರ್ಡ್ ಗಳಲ್ಲಿ ಬಹುತೇಕ ನಕಲಿ ಕಾರ್ಡ್ ಗಳೆಂದು ಮೇಲ್ನೋಟಕ್ಕೆ ಕಂಡುಬರುವಂತಿದೆ. ಸಿಮೆಂಟ್, ಕಬ್ಬಿಣ ಮುಟ್ಟದವರೂ ಕಾರ್ಮಿಕ ಕಾರ್ಡ್ ಪಡೆದುಕೊಂಡು ನಿಜವಾದ ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆದು ವಂಚಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಶಿವಮೊಗ್ಗ ಉಪವಿಭಾಗ ಮಟ್ಟದಲ್ಲಿ ಬಹಳ ಪ್ರಭಾವಿಗಳ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು ನಕಲಿ ಕಾರ್ಮಿಕರಿಗೆ ದೊಡ್ಡಮಟ್ಟದಲ್ಲಿ ಕಾರ್ಡ್ ಗಳನ್ನು ವಿತರಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಹಾಗೂ ತಾವು ಕಾರ್ಮಿಕರೆಂದು ಹೇಳಿ ಕಾರ್ಮಿಕ ಕಾರ್ಡ್ ಗಳನ್ನು ಪಡೆದುಕೊಂಡಿರುವವರ ವಿರುದ್ಧ ಕ್ರಿಮಿನಲ್ ಕೇಸುಗಳನ್ನು ದಾಖಲಿಸಿ ಜೈಲಿಗಟ್ಟಬೇಕೆಂದು ಹನುಮಂತಪ್ಪ ಯಡವಾಲ ಈ ಮೂಲಕ ಒತ್ತಾಯಿಸಿದ್ದಾರೆ.
ಅನರ್ಹ ಕಾರ್ಮಿಕ ಕಾರ್ಡ್ ಗಳನ್ನು ಪತ್ತೆ ಹಚ್ಚಿ ಕೂಡಲೇ ರದ್ದು ಪಡಿಸಬೇಕು. ಕೆಲವು ಸೈಬರ್ ಕೇಂದ್ರಗಳಲ್ಲೂ ನಕಲಿ ಕಾರ್ಮಿಕರ ಕಾರ್ಡ್ ಗಳನ್ನು ಮಾಡಿಕೊಡುತ್ತಿದ್ದಾರೆ. ಸರ್ಕಾರದ ಸೌಲಭ್ಯ ನಿಜವಾದ ಕಾರ್ಮಿಕರಿಗೆ ಸಿಗಬೇಕು. ಕಾರ್ಮಿಕರಿಗೆ ಈಗ ವಂಚನೆಯಾಗುತ್ತಿರುವುದು ಕೂಡಲೇ ತಪ್ಪಬೇಕು.ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ತನಿಖಾ ಸಮಿತಿ ರಚಿಸಿ ನಕಲಿ ಕಾರ್ಡ್ ಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಈಗಾಗಲೇ ನಕಲಿ ಕಾರ್ಮಿಕರು ಲೇಬರ್ ಕಾರ್ಡ್ ಗಳನ್ನು ಬಳಸಿಕೊಂಡು ಕಾರ್ಮಿಕರಿಗೆ ನೀಡುವ ವಿಮಾ ಮೊತ್ತ, ಕಾರ್ಮಿಕರ ಮಕ್ಕಳಿಗೆಂದು ಇರುವ ವಿದ್ಯಾರ್ಥಿ ವೇತನಗಳು ಸೇರಿದಂತೆ ಹಲವು ಸೌಲಭ್ಯಗಳನ್ನೂ ಪಡೆದುಕೊಂಡಿದ್ದು, ಅಂಥವರಿಂದ ಪಡೆದ ಸೌಲಭ್ಯಗಳನ್ನು ಮರಳಿ ವಸೂಲು ಮಾಡಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕೆಂದು ಹನುಮಂತಪ್ಪ ಯಡವಾಲ ಸಚಿವರಿಗೆ ಒತ್ತಾಯಿಸಿದ್ದಾರೆ.


