*ಶಿವಮೊಗ್ಗದ ಟ್ರಾಫಿಕ್ ಸರ್ಕಲ್ ಇನ್ಸ್ ಪೆಕ್ಟರ್ ದೇವರಾಜ್ ಮತ್ತು ಬಂಗಾರಪ್ಪ ರಸ್ತೆಯ ಕುರುಕಲು ತಿಂಡಿ ಗಾಡಿಗಳು ಹಾಗೂ ಕುಡುಕರು!?*
*ಶಿವಮೊಗ್ಗದ ಟ್ರಾಫಿಕ್ ಸರ್ಕಲ್ ಇನ್ಸ್ ಪೆಕ್ಟರ್ ದೇವರಾಜ್ ಮತ್ತು ಬಂಗಾರಪ್ಪ ರಸ್ತೆಯ ಕುರುಕಲು ತಿಂಡಿ ಗಾಡಿಗಳು ಹಾಗೂ ಕುಡುಕರು!?*

ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ನಿಜಕ್ಕೂ ಡೈನಮಿಕ್. ಅವರಿಗೆ ಸಾರ್ವಜನಿಕರು ಸಮಸ್ಯೆ ಅನುಭವಿಸುವುದು ಇಷ್ಟವಿಲ್ಲ. ಹಾಗಾಗಿ, ಸಾರ್ವಜನಿಕರ ಪರವಾಗಿ(ಕೆಲವೊಮ್ಮೆ ಸಾರ್ವಜನಿಕರ ಸಹಕಾರವಿಲ್ಲದಿದ್ದರೂ…) ಮೈಮೇಲೆ ಸಮಸ್ಯೆಗಳನ್ನೆಳೆದುಕೊಂಡೇ ತಮ್ಮ ವೃತ್ತಿಧರ್ಮ ಪಾಲಿಸುತ್ತಿರುತ್ತಾರೆ.
ಏ.29ರಂದು ಸಂಜೆ ಶಿವಮೊಗ್ಗದ ಆಲ್ಕೊಳ ಸರ್ಕಲ್ಲಿನಿಂದ ಫುಟ್ ಪಾತ್ ಗಾಡಿಗಳ ತೆರವು ಕಾರ್ಯಾಚರಣೆ ನಡೆಸಿ, ನಗರಪಾಲಿಕೆ ಅವರಿಗೆ ಅವಕಾಶ ಮಾಡಿಕೊಟ್ಟ ಜಾಗಕ್ಕೆ ಕಳಿಸಿದ್ದಾರೆ.
ಈ ಜಾಗದಲ್ಲಿದ್ದ ಹಣ್ಣಿನ ಅಂಗಡಿಗಳನ್ನೂ ಅವರು ಎತ್ತಂಗಡಿ ಮಾಡಿದ್ದಾರೆ. ಈ ಬಗ್ಗೆ ಬಹಳ ಜನ ದೂರು ನೀಡಿದ್ದರು.
ಆಲ್ಕೊಳ ಸರ್ಕಲ್ಲಿನಿಂದ ಎಸ್. ಬಂಗಾರಪ್ಪ ರಸ್ತೆಯಲ್ಲೇ ಬರುವ ಡಿವಿಜಿ ಸರ್ಕಲ್ ವರೆಗೆ ಅಂದರೆ, ಗೋಪಾಲಗೌಡ ಬಡಾವಣೆಯಲ್ಲೀಗ ಸಮಸ್ಯೆ ಇಲ್ಲದಂತೆಯೇ ಜನ ಸಂಚಾರದ ದೃಶ್ಯ ಕಾಣಬಹುದು…
ದಿನಾ ರಾತ್ರಿ ಈಗ ಕುಡುಕರ ಕಾಟ ತಪ್ಪಿದಂತಾಗಿ ಸಾರ್ವಜನಿಕರು ನಿಟ್ಟುಸಿರು ಬಿಡಬಹುದೇನೋ…


