ದಾವಣಗೆರೆ;ಪದವಿ ಪೂರ್ವ ಶಿಕ್ಷಣ ಮುಕ್ತ ಸಮಾವೇಶ – 2025″ದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ
ದಾವಣಗೆರೆ;ಪದವಿ ಪೂರ್ವ ಶಿಕ್ಷಣ ಮುಕ್ತ ಸಮಾವೇಶ – 2025″ದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ (ಕುಪ್ಮಾ) ಆಶ್ರಯದಲ್ಲಿ ದಾವಣಗೆರೆ ನಗರದ ಬಿ.ಐ.ಇ.ಟಿ ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ “ಪದವಿ ಪೂರ್ವ ಶಿಕ್ಷಣ ಮುಕ್ತ ಸಮಾವೇಶ – 2025” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷಾತಾ ಇಲಾಖೆ ಸಚಿವರು ಸಚಿವರಾದ ಮಧು ಬಂಗಾರಪ್ಪನವರು ಭಾಗವಹಿಸಿದ್ದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಹಲವು ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ನಮ್ಮ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಮುಂದಿನ ದಿನಗಳಲ್ಲಿ ನಿಮ್ಮ ಅಗತ್ಯ ಬೇಡಿಕೆಗಳನ್ನು ಕಾನೂನಿನ ಮಿತಿಯಲ್ಲಿ ಬಗೆಹರಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಸಂಸದೆ ಶ್ರೀಮತಿ ಡಾII ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಸವಂತಪ್ಪ, ಕುಪ್ಮಾ ಅಧ್ಯಕ್ಷರಾದ ಶ್ರೀ ಡಾ.ಎಂ.ಮೋಹನ್ ಆಳ್ವ, ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್.ನಾಯಕ್ ಸೇರಿದಂತೆ ಕುಪ್ಮಾ ಆಡಳಿತ ಮಂಡಳಿಗಳ ಅಧ್ಯಕ್ಷರು, ಸಂಚಾಲಕರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಹಾಜರಿದ್ದರು.