ನಾಳೆ ಭಾರತ- ಪಾಕಿಸ್ತಾನ ಮ್ಯಾಚ್* *ಸಿಂಧೂರ ಕಳೆದುಕೊಂಡವರ ಶಾಪ ತಟ್ಟುವುದು ಖಚಿತ* *ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಮ್ಯಾಚ್ ಆಡುತ್ತಿರುವುದು ಖಂಡನೀಯ* *ತೀವ್ರವಾಗಿ ಟೀಕಿಸಿದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಹೆಚ್ ಸಿ ಯೋಗೇಶ್*
*ನಾಳೆ ಭಾರತ- ಪಾಕಿಸ್ತಾನ ಮ್ಯಾಚ್*
*ಸಿಂಧೂರ ಕಳೆದುಕೊಂಡವರ ಶಾಪ ತಟ್ಟುವುದು ಖಚಿತ*
*ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಮ್ಯಾಚ್ ಆಡುತ್ತಿರುವುದು ಖಂಡನೀಯ*
*ತೀವ್ರವಾಗಿ ಟೀಕಿಸಿದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಹೆಚ್ ಸಿ ಯೋಗೇಶ್*
ಏಪ್ರಿಲ್ 22ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಉಗ್ರಗಾಮಿ ಗಳಿಂದ ನಮ್ಮ ದೇಶದ ಸುಮಾರು 26 ಪ್ರಜೆಗಳ ಹತ್ಯೆ ನಡೆದಿತ್ತು, ಇಂದು ಆ 26 ಜನ ಕುಟುಂಬದವರು ಸಹ ದುಃಖದಲ್ಲಿದ್ದು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದು ಪಾಕಿಸ್ತಾನದ ಉಗ್ರಗಾಮಿಗಳು. ಈ ಘಟನೆಗೆ ಸಂಬಂಧಿಸಿದಂತೆ ಆ ಸಂದರ್ಭದಲ್ಲಿ ರಾಜಕೀಯ ಮುಖಂಡರು, ಗಣ್ಯರು ನೆರೆ ರಾಷ್ಟ್ರದವರು ಸಹ ಸಂತಾಪ ವ್ಯಕ್ತಪಡಿಸಿದ್ದರು.
ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನವನ್ನು ಎಲ್ಲಾ ವಿಚಾರಗಳಲ್ಲೂ ದೂರ ಇಡಬೇಕೆಂಬುದು ಪ್ರಮುಖವಾಗಿ ಕೇಳಿಬಂದಿತ್ತು. ಅದರಂತೆ ಸಿಂಧೂ ನದಿಯ ನೀರನ್ನು ಸಹ ಪಾಕಿಸ್ತಾನಕ್ಕೆ ಹರಿಯದಂತೆ ತಡೆಹಿಡಿಯಬೇಕೆಂಬುದು ಕೇಂದ್ರ ಸರ್ಕಾರದ ತೀರ್ಮಾನವು ಸಹ ಆಗಿತ್ತು. ಈ ಹಿಂದೆ ಪಾಕಿಸ್ತಾನಕ್ಕೆ ಹೋಗುತ್ತಿದ್ದ ರೈಲುಗಳನ್ನು ಹಾಗೂ ಬಸ್ ಗಳನ್ನು ಸಹ ತಡೆಹಿಡಿಯಲಾಯಿತು.
ಆದರೆ ಕ್ರಿಕೆಟ್ ವಿಚಾರದಲ್ಲಿ ಮಾತ್ರ ತದ್ವಿರುದ್ಧ. ಪಾಕಿಸ್ತಾನದ ವಿರುದ್ಧವಾಗಿ ಭಾರತ ತಂಡ ಕ್ರಿಕೆಟ್ ಆಡಲೇಬೇಕೆಂಬುದು ಯಾಕೆ?
ಏಷ್ಯಾಕಪ್ ನಲ್ಲಿ ಪಾಕಿಸ್ತಾನದ ವಿರುದ್ಧವಾಗಿ ಭಾರತ ತಂಡ ಕ್ರಿಕೆಟ್ ಆಡಿದ್ದು, ಇತ್ತೀಚೆಗೆ ನಡೆದ ಭಾರತ ತಂಡದ ಕ್ರಿಕೆಟ್ ದಿಗ್ಗಜರ ನಡೆ ಪಾಕಿಸ್ತಾನದ ವಿರುದ್ಧವಾಗಿ ಕ್ರಿಕೆಟ್ ಆಡುವುದಿಲ್ಲ ಎಂದು ಹಿಂದೆ ಸರಿದ ಪರಿಣಾಮ ಪಾಕಿಸ್ತಾನ ತಂಡವು ಫೈನಲ್ ಪಂದ್ಯಾವಳಿಗೆ ಆಯ್ಕೆಯಾಗಿ ಫೈನಲ್ ಪಂದ್ಯದಲ್ಲಿ ಸೋತಿತು.
ಪುಲ್ವಾಮಾ ದಾಳಿಯಲ್ಲಿ ಶಿವಮೊಗ್ಗ ನಗರದ ಮಂಜುನಾಥ್ ರವರು ವಿಧಿವಶರಾದ ಸಂದರ್ಭದಲ್ಲಿ ಮಾಧ್ಯಮದವರಿಗೆ ನಾವು ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ, ಮುಂದಿನ ದಿನಗಳಲ್ಲಿ ಮತ್ತೆ ಯಥಾ ಸ್ಥಿತಿಯಂತೆ ಹೋಟೆಲ್ ಗಳು ರೆಸಾರ್ಟ್ ಗಳು ಎಲ್ಲವೂ ಸಹ ಎಂದಿನಂತೆ ನಡೆದುಕೊಂಡು ಹೋಗುತ್ತವೆ.ಬಹಳ ಪ್ರಮುಖವಾಗಿ ಕ್ರಿಕೆಟ್ ವಿಚಾರಕ್ಕೆ ಬಂದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಾವಳಿಗೆ 500 ರಿಂದ 5,000 ದ ತನಕ ಟಿಕೆಟ್ ಘೋಷಣೆ ಮಾಡಿದರೂ ಸಹ ಕಾಳ ಸಂತೇಲಿ 15ರಿಂದ 20 ಸಾವಿರ ರೂಪಾಯಿಗೆ ಟಿಕೆಟ್ ಪಡೆದು ಕ್ರಿಕೆಟ್ ಮ್ಯಾಚ್ ನೋಡಲು ಹೋಗುವುದು ನಮ್ಮವರ ಸಂಪ್ರದಾಯವಾಗಿದೆ.
ಕೇಂದ್ರ ಸರ್ಕಾರಕ್ಕೆ ಈ ವಿಚಾರವಾಗಿ ಐಸಿಸಿ ಮುಖ್ಯಸ್ಥರಾದ ಜೈ ಷಾ ರವರು ಇದಕ್ಕೆ ನೇರವಾಗಿ ಕಾರಣಕರ್ತರಾಗಿರುತ್ತಾರೆ ಎಂದು ಯೋಗೇಶ್ ಟೀಕಿಸಿದ್ದಾರೆ.
ಜೈ ಷಾ ಏಷ್ಯಾ ಕಪ್ ನ ವಿಚಾರವಾಗಿ ಯೋಚಿಸಿದಾಗ ಏಷ್ಯಾ ಕಪ್ ನಡೆಯದೇ ಇರುವ ರೀತಿಯಲ್ಲಿ ನೋಡಿಕೊಳ್ಳಬಹುದಾಗಿತ್ತು, ಇದೆಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಭಾನುವಾರ 14ನೇ ತಾರೀಕಿನಂದು ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧವಾಗಿ ಕ್ರಿಕೆಟ್ ಮ್ಯಾಚ್ ಆಡಿಸುತ್ತಿರುವುದು ಖಂಡನೀಯ. ಇದಕ್ಕೆ ನೇರವಾಗಿ ಕೇಂದ್ರ ಸರ್ಕಾರವೇ ಕಾರಣವಾಗಿದ್ದು, ದ್ವಂದ ರೀತಿಯಲ್ಲಿ ಕೇಂದ್ರ ಸರ್ಕಾರವಿದೆ.
ಒಂದು ಕಡೆ ಆಪರೇಷನ್ ಸಿಂಧೂರ ಎಂದು ಹೇಳಿಕೊಳ್ಳುವವರು ಇನ್ನೊಂದು ಕಡೆ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಮ್ಯಾಚ್ ಆಡಲು ಬಿಟ್ಟಿರುವುದು ಖಂಡನೀಯ. ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಮ್ಯಾಚ್ ಆಡದಿದ್ದರೂ ಸಹ ನಮ್ಮ ದೇಶದವರಿಗೆ ಏನು ತೊಂದರೆ ಆಗುತ್ತಿರಲಿಲ್ಲ. ಕ್ರಿಕೆಟ್ ನಲ್ಲಿ ನಮ್ಮ ದೇಶದ ಬಗ್ಗೆ ಎಲ್ಲರಿಗೂ ತಿಳಿದಿದೆ. ಗಲ್ಲಿ ಗಲ್ಲಿಯಲ್ಲೂ ಸಹ ಕ್ರಿಕೆಟ್ ಆಡಿದವರು ಇಂದು ರಾಷ್ಟ್ರಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಪುಲ್ವಾಮ ದಾಳಿಯಲ್ಲಿ ಸಿಂಧೂರವನ್ನು ಕಳೆದುಕೊಂಡ 26 ಜನ ಹೆಣ್ಣು ಮಕ್ಕಳಿಗೆ ಇಂದು ಪಾಕಿಸ್ತಾನದ ಜೊತೆಯಾಗಿ ಕ್ರಿಕೆಟ್ ಮ್ಯಾಚ್ ಆಡಲು ಅವಕಾಶ ಮಾಡಿಕೊಟ್ಟು ಅವಮಾನ ಮಾಡಿದ್ದಾರೆ.
ಕ್ರಿಕೆಟ್ ವಿಚಾರಕ್ಕೆ ರಾಜಕೀಯವನ್ನು ತರವಾರದೆಂದು ಬಹಳಷ್ಟು ಜನ ಹೇಳಬಹುದು ಅಥವಾ ನಮ್ಮ ಪ್ರತಿಕ್ರಿಯೆಯನ್ನು ಸಣ್ಣ ಪ್ರತಿಕ್ರಿಯೆ ಎಂದು ಕ್ರಿಕೆಟ್ ಪ್ರೇಮಿಗಳು ತಿಳಿದುಕೊಳ್ಳಬಹುದು. ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆದ ಸಂದರ್ಭದಲ್ಲಿ ಶಿವಮೊಗ್ಗ ನಗರದಲ್ಲಿ ಅತ್ಯಂತ ಎತ್ತರದ ಕ್ರಿಕೆಟ್ ಬ್ಯಾಟ್ ನಿರ್ಮಾಣ ಮಾಡಿ ಸಹಿ ಸಂಗ್ರಹ ಮಾಡಿಸಿದಂತಹ ಉದಾಹರಣೆಗಳು, ಕ್ರಿಕೆಟ್ ಪಂದ್ಯಾವಳಿಗಳನ್ನು ಗೆದ್ದ ಸಂದರ್ಭದಲ್ಲಿ ಬೈಕ್ ಮೆರವಣಿಗೆ ಮಾಡಿ ಸಂಭ್ರಮ ವ್ಯಕ್ತಪಡಿಸಿರುವುದು, ಶಿವಮೊಗ್ಗ ನಗರದಲ್ಲಿ ಅನೇಕ ಬಾಕ್ಸ್ ಕ್ರಿಕೆಟ್ ಗಳು ವಿವಿಧ ರೀತಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ನಮ್ಮ ಸಂಸ್ಥೆ ವತಿಯಿಂದ ನಡೆಸಿದ್ದೇವೆ. ಕ್ರಿಕೆಟ್ ಗೆ ಸಂಬಂಧಿಸಿದಂತೆ ನಮ್ಮ ಬೆಂಬಲ ಹೆಚ್ಚಾಗಿರುವುದು ಅನೇಕರಿಗೆ ತಿಳಿದಿರುವ ವಿಚಾರವಾಗಿದೆ.
ಆದರೆ, ಈ ಬಾರಿಯ ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯಾವಳಿಗೆ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಪುಲ್ವಾಮಾ ದಾಳಿಯಲ್ಲಿ ಸಿಂಧೂರವನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ ಇಂದು ಕೇಂದ್ರ ಸರ್ಕಾರ ಹಾಗೂ ಐಸಿಸಿ ಮುಖ್ಯಸ್ಥ ಜೈ ಷಾ ರವರಿಗೆ ನಮ್ಮ ಕಾಂಗ್ರೆಸ್ ಪಕ್ಷದ ವಿರೋಧವಿದ್ದು, ಆ ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಶಾಪವೂ ಸಹ ಕೇಂದ್ರ ಸರ್ಕಾರಕ್ಕೆ ತಟ್ಟುತ್ತದೆ. ಪಾಕಿಸ್ತಾನವು ಎಂದಿದ್ದರೂ ನಮಗೆ ವಿರೋಧಿಗಳಾಗಿರುತ್ತಾರೆ. ಆದ್ದರಿಂದ, ಈ ಒಂದು ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸದಿರುವುದೇ ಒಳ್ಳೆಯದಾಗಿತ್ತು ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹೆಚ್ ಸಿ ಯೋಗೇಶ್ ರವರು ಪ್ರತಿಕ್ರಿಯೆ ನೀಡಿದ್ದಾರೆ.


