*ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಸುದ್ದಿಗೋಷ್ಠಿ* *ನಾಳೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 165 ಕೋಟಿ ರೂ., ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ*
*ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಸುದ್ದಿಗೋಷ್ಠಿ*
*ನಾಳೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 165 ಕೋಟಿ ರೂ., ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ*
ಶಿವಮೊಗ್ಗ : ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಶಿವಮೊಗ್ಗದ ಹಲವು ವಾರ್ಡ್‌ಗಳಲ್ಲಿ ರಸ್ತೆ, ಯುಜಿಡಿ ಸೇರಿದಂತೆ ೧೬೫ ಕೋಟಿ ರೂ. ಇತರೇ ಕಾಮಗಾರಿಗಳು ನಡೆಯಬೇಕಾಗಿದ್ದು, ಇದರಲ್ಲಿ ಈಗ ೧೨೫ ಕೋಟಿ ರೂ. ಬಿಡುಗಡೆಯಾಗಿದೆ. ಈ ಕಾಮಗಾರಿಗಳಿಗೆ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಬೊಮ್ಮನಕಟ್ಟೆಯಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಇಲಾಖೆ ಸಚಿವರಾದ ಬಿ.ಎಸ್.ಸುರೇಶ್ ಚಾನೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೀಶ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಡಿ ೧೧ ವಾರ್ಡ್‌ಗಳಲ್ಲಿ ಮುಖ್ಯ ರಸ್ತೆಗಳು ಮಾತ್ರ ಅಭಿವೃದ್ಧಿಯಾಗಿದ್ದು ಒಳರಸ್ತೆಗಳು ಇನ್ನೂ ಹಾಗೆಯೇ ಇವೆ. ಇದನ್ನು ಮನಗಂಡು ಸಚಿವರ ಗಮನಕ್ಕೆ ತಂದಾಗ ಬಿಡುಗಡೆಯಾಗುವ ಹಣದಲ್ಲಿ ಶೇ.೨೦ರಷ್ಟು ಒಳರಸ್ತೆಗಳ ಅಭಿವೃದ್ಧಿಯಾಗಬೇಕು ಎಂದು ಸೂಚನೆ ನೀಡಿದ್ದಾರೆ. ೧೬೫ ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾಮಗಾರಿಗಳನ್ನು ಮುಂಬರುವ ೫ ವರ್ಷಗಳಲ್ಲಿ ಹಂತಹಂತವಾಗಿ ಕೈಗೊಳ್ಳಲಾಗುವುದು ಎಂದರು.
ಎನ್‌ಜಿಡಿ ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಬಿ-ಬ್ಲಾಕ್‌ಗೆ ದಿ.ಶ್ರೀ ಎಸ್.ಬಂಗಾರಪ್ಪ ಬಡಾವಣೆ ನಾಮಕರಣ ಸಮಾರಂಭವೂ ಸಹ ನಡೆಯಲಿದ್ದು, ಯುಜಿಡಿಗಾಗಿ ಎನ್‌ಜಿಟಿ ಅನುದಾನದಲ್ಲಿ ೪೦ ಕೋಟಿ ರೂ. ಬಿಡುಗಡೆಯಾಗಿದ್ದು, ಸುಮಾರು ೩೫ ಕಿ.ಮೀ. ಉದ್ದದ ಈ ಯುಜಿಡಿ ಕಾಮಗಾರಿಗೂ ಚಾಲನೆ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ಕೆ.ಸಂಗೇಶ್ವರ್, ಬಿ.ಕೆ.ಗೋಪಾಲಕೃಷ್ಣ ಬೇಳೂರು, ವಿವಿಧ ನಿಗಮಗಳ ಅಧ್ಯಕ್ಷರಾದ ಪಲ್ಲವಿ ಜಿ., ಚೇತನ್ ಕೆ., ಎಂಎಡಿಬಿ ಅಧ್ಯಕ್ಷ ಮಂಜುನಾಥಗೌಡ, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳು ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲೀಂ ಪಾಷ, ಶಿವಕುಮಾರ್, ಬಿ.ಎ.ರಮೇಶ್ ಹೆಗಡೆ, ವಿಶ್ವನಾಥ ಕಾಶಿ, ನಾಗರಾಜ್ ಕಂಕಾರಿ, ಗಂಗಾಧರ್, ಅಸೀಫ್, ಎಸ್.ಟಿ.ಚಂದ್ರಶೇಖರ್, ರಾಜು, ಪವನ್‌ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.


