*ಅಧಿಕಾರಿಗಳಿಗೆ ಸಚಿವರ ಕಟ್ಟುನಿಟ್ಟಿನ ಆದೇಶ ಕ್ರಮದ ಎಚ್ಚರಿಕೆ; ಸಂತ್ರಸ್ತ ವೃದ್ಧನಿಗೆ ವೃದ್ಧಪ್ಯ ವೇತನ ಮಂಜೂರು*
*ಅಧಿಕಾರಿಗಳಿಗೆ ಸಚಿವರ ಕಟ್ಟುನಿಟ್ಟಿನ ಆದೇಶ ಕ್ರಮದ ಎಚ್ಚರಿಕೆ; ಸಂತ್ರಸ್ತ ವೃದ್ಧನಿಗೆ ವೃದ್ಧಪ್ಯ ವೇತನ ಮಂಜೂರು*
ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿಯ ವಡ್ಡರಹಟ್ಟಿ ನಿವಾಸಿ *ಹನುಮಂತಪ್ಪ* ಎಂಬುವವರು ಕಳೆದ ಎರಡು ವರ್ಷಗಳಿಂದ ಸರ್ಕಾರದ ಸೌಲಭ್ಯ ಸಿಗದೆ ಪರದಾಡುತ್ತಿದ್ದರು. ಇವರ ಹೆಸರಿನಲ್ಲೇ ಮತ್ತೊಬ್ಬರು ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ತಾಂತ್ರಿಕ ದೋಷದಿಂದಾಗಿ ಇವರ ವೃದ್ಧಾಪ್ಯ ವೇತನ ಸ್ಥಗಿತಗೊಂಡಿತ್ತು. ಈ ಬಗ್ಗೆ ಹನುಮಂತಪ್ಪನವರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಮಧು ಬಂಗಾರಪ್ಪ ಅವರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಮಳೆ ಹಾನಿ ಪ್ರದೇಶಗಳ ಭೇಟಿಯ ಸಂದರ್ಭದಲ್ಲಿ ಈ ವಿಷಯ ಬಂದಾಗ, ಸ್ಥಳದಲ್ಲೇ ಇದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಿ ನಾಳೆ ಬೆಳಿಗ್ಗೆಯೊಳಗೆ ನನಗೆ ವರದಿ ನೀಡಬೇಕು” ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರು.
ಸಚಿವರ ಸೂಚನೆಯ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು, ಹನುಮಂತಪ್ಪನವರ ದಾಖಲೆಗಳನ್ನು ಪರಿಶೀಲಿಸಿ ದಿನಾಂಕ *02/05/2026* ರಂದು ತಾಂತ್ರಿಕ ದೋಷವನ್ನು ಸರಿಪಡಿಸಿ ಹನುಮಂತಪ್ಪನವರಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನವನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಹೊಳೆಹೊನ್ನೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಡ್ಡರಹಟ್ಟಿ ಗ್ರಾಮದ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರಿಗೆ ಧನ್ಯವಾದಗಳು ತಿಳಿಸಿದ್ದಾರೆ.



