ಕವಿಸಾಲು

Gm ಶುಭೋದಯ💐💐

*ಕವಿಸಾಲು*


ಭಾಷೆ ಕೊಟ್ಟಿದ್ದನ್ನು ಹೀಗೂ ನಿಭಾಯಿಸಿಬಿಟ್ಟೆ ನಾನು…

ಕಣ್ಣೀರಾಗಲು ಬಯಸಿದ್ದೆ;

ಮುಗುಳ್ನಗುವುದು
ಅನಿವಾರ್ಯವಾಗ್ಹೋಯ್ತು!


ಪ್ರೇಮವೆಂಬುದು
ಬಹುದೊಡ್ಡ ಶಿಕ್ಷೆ…

ಜನ್ಮಗಳು ದಾಟಿದರೂ
ಶಿಕ್ಷೆ ಹಾಗೇ ಉಳಿದಿದೆ!


ಬಾ ಹೊರಟು ಬಿಡೋಣ;

ನಿನ್ನ ದಾರಿ ನನ್ನತ್ತ ಮಾಡಿ
ನನ್ನ ದಾರಿ ನಿನ್ನತ್ತ ಮಾಡಿ


ಬದುಕು ಮೆಲ್ಲ ಮೆಲ್ಲಗೆ ಕಲಿಸುತ್ತಿದೆ;

ಎಷ್ಟು ಪ್ರೀತಿಸುತ್ತೀಯೋ
ಅಷ್ಟು
ಸುಖವಾಗಿರುತ್ತೀ ಎಂದು!

– *ಶಿ.ಜು.ಪಾಶ*
8050112067
(6/5/2026)