ಶಿವಮೊಗ್ಗ APMC SCAM-2; *ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯ ಅನಧಿಕೃತ ಅಂಗಡಿಗಳ ಹಣ ಹೋಗುತ್ತಿರೋದೆಲ್ಲಿ?* *ಲೋಕಾಯುಕ್ತ ಟ್ರ್ಯಾಪ್ ಗಿರಾಕು ಸಾಮ್ಯಾನಾಯ್ಕರು ಲೆಕ್ಕಕೊಟ್ಟು ಉತ್ತರಿಸಲು ಸಾಧ್ಯವೇ?!*

*ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯ ಅನಧಿಕೃತ ಅಂಗಡಿಗಳ ಹಣ ಹೋಗುತ್ತಿರೋದೆಲ್ಲಿ?*

*ಲೋಕಾಯುಕ್ತ ಟ್ರ್ಯಾಪ್ ಗಿರಾಕು ಸಾಮ್ಯಾನಾಯ್ಕರು ಲೆಕ್ಕಕೊಟ್ಟು ಉತ್ತರಿಸಲು ಸಾಧ್ಯವೇ?!*

ಶಿವಮೊಗ್ಗ ಎಪಿಎಂಸಿಯ ದುರಂತಗಳ ಪಟ್ಟಿ ಬೆಳೆಯುತ್ತಲೇ ಇದೆ. ಕಳ್ಳರ ಕೈಗೇ ಶಿವಮೊಗ್ಗ ಎಪಿಎಂಸಿ ಕಾರ್ಯದರ್ಶಿ ಸತೀಶ್ ಬೀಗ ಕೊಟ್ಟು ಅದೇನು ಕಿಸಿಯುತ್ತಿದ್ದಾರೋ ಗೊತ್ತಿಲ್ಲ…

ಪ್ರತಿದಿನ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನಿಯಮ ಮೀರಿ ನಡೆಯುತ್ತಿರುವ ವ್ಯವಹಾರಗಳೇ ಬೇರೆ. ಇಲ್ಲಿ ಯಾರೂ ನಿಯಮಗಳ ಪಾಲನೆಯಲ್ಲಿಲ್ಲ…

ಎಕ್ಸ್ಟ್ರಾ( extra) ಅಂಗಡಿ ಸೃಷ್ಟಿಸಿಕೊಂಡು ತರಕಾರಿ ವ್ಯಾಪಾರ ಮಾಡಿದರೆ ಆತನಿಗೆ 1500₹ ಫಿಕ್ಸ್…ಇದು ಎಕ್ಸ್ ಟ್ರಾ ಇನ್ ಕಂ…

ಅಂಗಡಿಗಳ ಲೆಕ್ಕಾಚಾರಕ್ಕೆ ಬಂದರೆ, ಈ ಅಂಗಡಿಗಳೆಲ್ಲ ಎಪಿಎಂಸಿ ಸೂಚಿಸಿರುವ ಅಳತೆಗೋಲಲ್ಲಿ ಇಲ್ಲವೇ ಇಲ್ಲ…ಜನ ಸಂಚಾರ ಮಾಡುವ ಜಾಗದಲ್ಲೇ ಇವರ ವ್ಯವಹಾರಗಳು ನಡೆಯುತ್ತಿದ್ದರೂ ಎಪಿಎಂಸಿಯ ಉಸ್ತುವಾರಿ ವಹಿಸಿಕೊಂಡ ಸಾಮ್ಯಾ ನಾಯಕರು ತುಟಿಕ್ ಪಿಟಿಕ್ ಅನ್ನಲ್ಲ…ಯಾಕೆಂದರೆ…