ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್

ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ;

ಅತ್ಯಂತ ಯಶಸ್ವಿ ಜಾತಿಗಣತಿ- ಸೋತ ಬಿಜೆಪಿ

ಗಣತಿಯಲ್ಲಿ ಸಾಧನೆ ಮಾಡಿದ 25 ಜನ ಶಿಕ್ಷಕರಿಗೆ ಅಭಿನಂದಿಸಿ ಸನ್ಮಾನಿಸಿದ ಸಚಿವರು

ಜಾತಿಗಣತಿ ವಿರೋಧಿಸಿದ ವಿಜಯೇಂದ್ರ- ಅಶೋಕ್ ಶೇಮ್ ಶೇಮ್

ಗಣತಿ ವಿರೋಧಿಸಿದ ಶೇಮ್ ಆನ್ ವಿಜಯೇಂದ್ರ, ಆರ್. ಅಶೋಕ

ನಿಮಗೆ ನಾಚಿಕೆ ಆಗ್ಬೇಕು. ಸಿದ್ರಾಮಯ್ಯ ಮಾಡಿದ್ರೆ ಸಿದ್ರಾಮಯ್ಯ ಸಮೀಕ್ಷೆ ಅಂತೀರಲ್ಲ ಅಶ್ವತ್ಥ ನಾರಾಯಣರೇ ನಿಮಗೆ ನಾಚಿಕೆ ಆಗ್ಬೇಕು

ತುಳಿಯೋದಕ್ಕೆ ಈ ರೀತಿಯ ವಿರೋಧ ಮಾಡ್ತಿದೀರಿ. ಶಿಕ್ಷಕರು ಅಂಬೇಡ್ಕರ್ ಸ್ಥಾನದಲ್ಲಿದಾರೆ. ಶೇ. 56 ಗಣತಿ ಮುಗಿದಿದೆ. ಸಾಧನೆ‌ ಮಾಡಿದ ಈ ಶಿಕ್ಷಕರು ಧರ್ಮ ಮೀರಿ ಕೆಲಸ ಮಾಡಿದವರು. ಇವರಿಗೆ ಸನ್ಮಾನ ಎಂದರೆ ಅಂಬೇಡ್ಕರ್ ಗೆ ಸನ್ಮಾನ ಮಾಡಿದಂತೆ.

ತಾಂತ್ರಿಕ ಸಮಸ್ಯೆಗಳು ಸಣ್ಣಪುಟ್ಟದ್ದಿವೆ. ರಾಘವೇಂದ್ರ, ವಿಜಯೇಂದ್ರರವರೇ, ನಿಮ್ಮ ಮನೆಗೆ ಕೂಲಿ ಮಾಡ್ತಾರಲ್ಲ ಅವರಿಗೆ ಬೇಕಿರೋದು ಈ ಸಮೀಕ್ಷೆ.

ದೇಶದ್ರೋಹಿಗಳೆಂದರೆ ಬಿಜೆಪಿಯವರು. ಇಂಥ ಸಮೀಕ್ಷೆಯನ್ನು ವಿರೋಧಿಸೋ ಬಿಜೆಪಿಯವರು.ಸಂವಿಧಾನ ಬಿಟ್ಟಿ ಸಿಕ್ಕಿಲ್ಲ.
ಬಿಜೆಪಿಯವರಿಗೆ ಅಂಬಾನಿ, ಅದಾನಿ ಅನ್ನೋ ಪ್ರಣಾಳಿಕೆ ಮಾತ್ರ ಕಾಣೋದು.

ದೇಶ- ವಿದೇಶದಲ್ಲಿ ಎಲ್ಲೂ ಆಗದ ಸಮೀಕ್ಷೆ ಕರ್ನಾಟಕದಲ್ಲಿ ಸಿದ್ದರಾಮಯ್ಯರ ನೇತೃತ್ವದಲ್ಲಿ ನಡೆದಿದೆ. ಇದನ್ನೇ ಮೋದಿ ಕಾಪಿ ಮಾಡೋ ಸಾಧ್ಯತೆ ಇದೆ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಯಾವ ಪಟ್ಟ ಕಟ್ತಿದೀರಿ ಬಿಜೆಪಿಯವರೇ ನೀವು.

ಶಿಕಾರಿಪುರದಲ್ಲೇ ,ಶೇ.70 ಸರ್ವೇ ಆಗಿದೆ. ರಾಘವೇಂದ್ರರವರೇ ನಿಮ್ಮನ್ನು ಇಲ್ಲಿ ಸೋಲಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಕಡೆ ಒಳ್ಳೆ ಫಲಿತಾಂಶ ಸಿಗುತ್ತಿದೆ. ಅಂಬಾನಿ, ಅದಾನಿ ಉದ್ಧಾರ ಆಗ್ತಾನೇ ಇರ್ಬೇಕು ಬೇರೆಯವರೆಲ್ಲ ಸಾಯ್ಬೇಕಾ?

ಗಣತಿ ಬಗ್ಗೆ ಯಡಿಯೂರಪ್ಪರವರು, ದೇವೇಗೌಡರು ಎಲ್ಲೂ ಮಾತಾಡಿಲ್ಲ. ಮಾತಾಡಿದವರೆಲ್ಲ ಬಚ್ಚಾಗಳು. ಕಾನೂನುಬದ್ಧ ವಾಗಿದ್ರೆ ಗೌರವ. ಇಲ್ದಿದ್ರೆ ಕಾನೂನು ಇದ್ದೇ ಇದೆ.

ಗಣತಿಯಿಂದ ಸಮಾನತೆ ಸಾಧ್ಯ. ಇದೊಂದು ಮಹತ್ವದ ವೇದಿಕೆ.

ವೋಟ್ ಚೋರಿಯಿಂದ ಸಂವಿಧಾನದ ಹತ್ಯೆ- ಪ್ರಜಾಪ್ರಭುತ್ವದ ಹತ್ಯೆ… ನಿರಂತರ ಹೋರಾಟ