ಅಮ್ಜದ್ ಮೇಲೆ ಓಸಿ ಜೂಜಾಟದ ಕರಿಸಾಯೆ?* *ಓಸಿ ಮಾಫಿಯಾದಿಂದ ನಡೆಯಿತಾ ಹಲ್ಲೆ?!*
*ಅಮ್ಜದ್ ಮೇಲೆ ಓಸಿ ಜೂಜಾಟದ ಕರಿಸಾಯೆ?*
*ಓಸಿ ಮಾಫಿಯಾದಿಂದ ನಡೆಯಿತಾ ಹಲ್ಲೆ?!*

*ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!*
*ಯಾರು ಈ ಅಮ್ಜದ್?*
*ಬೆರಳುಗಳ ಜೊತೆ ಕೈ, ಹೊಟ್ಟೆಗೂ ಚಾಕುವಿನಿಂದ ಕತ್ತರಿಸಿ ಹಲ್ಲೆ!!*
*ಜೊತೆಗಿದ್ದವನಿಗೂ ಬಿಡಲಿಲ್ಲ ಹಲ್ಲೆಕೋರರು…*
ಶಿವಮೊಗ್ಗದ ಅಮ್ಜದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಇಂದು ರಾತ್ರಿ ಹಲ್ಲೆಯಾಗಿದ್ದು, ಜೀವನ್ಮರಣದ ಮಧ್ಯೆ ಇರುವ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ ಶಾಹಿದ್ ಎಂಬಾತನ ಜೊತೆ ಅಮ್ಜದ್ ನಿಂತಿದ್ದಾಗ ನುಗ್ಗಿಬಂದ ಹಂತಕರು ಮಾರಕಾಸ್ತ್ರಗಳಿಂದ ಎಡೆಬಿಡದೇ ಹಲ್ಲೆ ಮಾಡಿದ್ದಾರೆ.
ಕೈ ಬೆರಳುಗಳು, ಮತ್ತೊಂದು ಕೈ ಕತ್ತರಿಸಲ್ಪಟ್ಟಿದ್ದು, ಹೊಟ್ಟೆಗೂ ಚಾಕು ಹಾಕಲಾಗಿದೆ ಎಂದು ಹೇಳಲಾಗುತ್ತಿದ್ದು, ಅಮ್ಜದನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಅಮ್ಜದನ ಜೊತೆ ಇದ್ದ ಶಾಹಿದನಿಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿದವರು ಯಾರು ಎಂದು ಈವರೆಗೂ ಗೊತ್ತಾಗಿಲ್ಲ. ಪೊಲೀಸರು ಹುಡುಕಾಟದಲ್ಲಿದ್ದಾರೆ.