*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಎಸಿಯೂ ಇಲ್ಲ…ಫ್ಯಾನುಗಳೂ ಸತ್ತಿವೆ!* *ರೌರವ ನರಕದಲ್ಲಿ ಡಯಾಲಿಸಿಸ್ ಪೇಷಂಟ್ ಗಳು!!*

*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಎಸಿಯೂ ಇಲ್ಲ…ಫ್ಯಾನುಗಳೂ ಸತ್ತಿವೆ!*

*ರೌರವ ನರಕದಲ್ಲಿ ಡಯಾಲಿಸಿಸ್ ಪೇಷಂಟ್ ಗಳು!!*

ಶಿವಮೊಗ್ಗದಲ್ಲಿರುವ ಮೆಗ್ಗಾನ್ ಆಸ್ಪತ್ರೆ ಮಲೆನಾಡಿನ ಜನರ, ಮಲೆನಾಡಿನ ಸುತ್ತಮುತ್ತಲಿರುವವರ ಜೀವ ನಾಡಿ. ಆದರೆ, ಇಲ್ಲಿ ಕಿಡ್ನಿ ಸಮಸ್ಯೆಯ ಚಿಕಿತ್ಸಾ ವಿಭಾಗವಾಗಿರುವ ಡಯಾಲಿಸಿಸ್ ವಾರ್ಡಲ್ಲಿ ಸಂಪೂರ್ಣ ನರಕವೇ ಸೃಷ್ಟಿಯಾಗಿದೆ!

ಇಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇರಬೇಕು. ರಕ್ತ ತೆಗೆಸಿ ರಕ್ತ ಏರಿಸಿಕೊಳ್ಳಲು ಅಂದರೆ, ಡಯಾಲಿಸಿಸ್ ಗೆ ಬರುವ ರೋಗಿಗಳು ಬಡವರೇ. ಅಂಥವರಿಗೆ ಇರುವ ಎಸಿ ವ್ಯವಸ್ಥೆ ಹಾಳಾಗಿದೆ. ಅದನ್ನು ಸರಿಪಡಿಸುವ ಸಣ್ಣ ಕಾಳಜಿಯೂ ಇಲ್ಲಿ ಯಾರಿಗೂ ಇಲ್ಲ!

ಎಸಿಗಳಷ್ಟೇ ಅಲ್ಲ, ಇಲ್ಲಿ ಗಾಳಿ ಕೊಡಬೇಕಾದ ಫ್ಯಾನುಗಳೂ ಸತ್ತಿವೆ…

ಬದುಕಿರುವವರು ಈ ವ್ಯವಸ್ಥೆ ಸರಿ ಪಡಿಸುವರಾ?

– *ಶಿ.ಜು.ಪಾಶ*