ನಮ್ಮ ಕನಸಿನ ಶಿವಮೊಗ್ಗ ತಂಡಕ್ಕೆ ಈ ಬಾರಿಯ ಸೇವಾ ಪ್ರಶಸ್ತಿ; ರೋಟರಿ ಕ್ಲಬ್ ಮಿಡ್‌ಟೌನ್ ಕಾರ್ಯ ಶ್ಲಾಘನೀಯ : ಎನ್. ಗೋಪಿನಾಥ್
ನಮ್ಮ ಕನಸಿನ ಶಿವಮೊಗ್ಗ ತಂಡಕ್ಕೆ ಈ ಬಾರಿಯ ಸೇವಾ ಪ್ರಶಸ್ತಿ;
ರೋಟರಿ ಕ್ಲಬ್ ಮಿಡ್‌ಟೌನ್ ಕಾರ್ಯ ಶ್ಲಾಘನೀಯ : ಎನ್. ಗೋಪಿನಾಥ್
ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ವತಿಯಿಂದ ತಿಂಗಳ ಸೇವಾ ಕಾರ್ಯಕ್ರಮದ ಅಂಗವಾಗಿ “ನಮ್ಮ ಕನಸಿನ ಶಿವಮೊಗ್ಗ” ತಂಡಕ್ಕೆ ಈ ಬಾರಿಯ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ “ನಮ್ಮ ಕನಸಿನ ಶಿವಮೊಗ್ಗ” ತಂಡದ ಅಧ್ಯಕ್ಷರಾದ ಎನ್. ಗೋಪಿನಾಥ್ ಅವರು, ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷರಾದ ಹರ್ಷ ಕಾಮತ್ ಅವರ ನೇತೃತ್ವದಲ್ಲಿ ಈ ಬಾರಿ ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಇಂದು ಜಿಲ್ಲೆಯಲ್ಲಿ ರೋಟರಿ ಕ್ಲಬ್ ಮಿಡ್‌ಟೌನ್ ತನ್ನ ವಿಭಿನ್ನ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, “ನಮ್ಮ ಕನಸಿನ ಶಿವಮೊಗ್ಗ” ತಂಡಕ್ಕೆ ನೀಡಿರುವ ಈ ಸೇವಾ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ “ನಮ್ಮ ಕನಸಿನ ಶಿವಮೊಗ್ಗ” ತಂಡದ ಕಾರ್ಯದರ್ಶಿ ಆನಾ ವಿಜಯೇಂದ್ರ ಅವರು ಮಾತನಾಡಿ, ರೋಟರಿ ಸ್ನೇಹಿತರೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ “ನಮ್ಮ ಕನಸಿನ ಶಿವಮೊಗ್ಗ” ತಂಡದ ಪರವಾಗಿ ನಿರ್ಮಲ ಕಾಶಿ, ವಾಗೀಶ್ ಹಾಗೂ ಹರೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಹರ್ಷ ಕಾಮತ್ ವಹಿಸಿದ್ದರು. ಕಾರ್ಯದರ್ಶಿ ಮುಂಜುನಾಥ್, ಪಬ್ಲಿಕ್ ಇಮೇಜ್ ಡೈರೆಕ್ಟರ್ ಮೆನಕಾ ಜಗದೀಶ್, ಪವಿತ್ರ ಹಾಗೂ ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


