*ಶಿವಮೊಗ್ಗದ ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ ಕಳ್ಳತನ ಪ್ರಕರಣ* *ಮೂರು ದಿನಗಳಲ್ಲೇ ಇಬ್ಬರು ಕಳ್ಳರು ಅಂದರ್* ವಿನೋಬನಗರ ಸಿಪಿಐ ಸಂತೋಷ್ ಕುಮಾರ್- ಪಿಎಸ್ ಐ ತಿರುಮಲೇಶ್ ತಂಡದ ಸಾಧನೆ

*ಶಿವಮೊಗ್ಗದ ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ ಕಳ್ಳತನ ಪ್ರಕರಣ*

*ಮೂರು ದಿನಗಳಲ್ಲೇ ಇಬ್ಬರು ಕಳ್ಳರು ಅಂದರ್*

ವಿನೋಬನಗರ ಸಿಪಿಐ ಸಂತೋಷ್ ಕುಮಾರ್- ಪಿಎಸ್ ಐ ತಿರುಮಲೇಶ್ ತಂಡದ ಸಾಧನೆ

ಶಿವಮೊಗ್ಗದ ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ವಿನೋಬನಗರ ಪೊಲೀಸರು ಬಂಧಿಸಿದ್ದು, ಕದ್ದ ಮಾಲುಗಳನ್ನು ವಶಕ್ಕೆ ಪಡೆದಿದ್ದಾರೆ.

ಜೂ.17ರಂದು ಈ ಕಳ್ಳತನ ನಡೆದಿತ್ತು‌.ಕಳ್ಳರ ಪತ್ತೆಗಾಗಿ ಎಸ್ ಪಿ ನಿಖಿಲ್, ಡಿವೈಎಸ್ ಪಿ ಸಂಜೀವ್ ಕುಮಾರ್, ಸಿಪಿಐ ಸಂತೋಷ್ ಕುಮಾರ್, ಎಸ್ ಐ ತಿರುಮಲೇಶ್ ನೇತೃತ್ವದಲ್ಲಿ ತಂಡ ರಚನೆಯಾಗಿತ್ತು. ಈ ತಂಡದಲ್ಲಿ ಕೆ ಆರ್ ರಾಜು, ಎಸ್ ಜಿ ಮಲ್ಲಪ್ಪ, ಅರುಣ್ ಕುಮಾರ್, ಮನುಶಂಕರ್ ಇದ್ದರು.

ಆಶ್ರಯ ಬಡಾವಣೆಯ ವಾಸಿಗಳೇ ಆದ ರವಿ @ ಬೆಕ್ಕು(27) ಮತ್ತು ಗಣೇಶ @ ಗಣಿ(26)ಯನ್ನು ಬಂಧಿಸಿದ್ದು, ಅವರಿಂದ 51 ಗ್ರಾಂ ತೂಕದ ಅಂದಾಜು 6 ಲಕ್ಷ ರೂ., ಮೌಲ್ಯದ ಬಂಗಾರದ ಆಭರಣಗಳನ್ನು, 27 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳ್ಳತನ ನಡೆದ ಮೂರು ದಿನಗಳಲ್ಲಿ ಕಳ್ಳರು ಅಂದರ್ ಆಗಿದ್ದಾರೆ.