*ಶಿವಮೊಗ್ಗ ತಾಲ್ಲೂಕು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ* *ಭ್ರಷ್ಟರ ತೊಡೆಗಳೇಕೆ ನಡಗುತ್ತಿವೆ?*

*ಶಿವಮೊಗ್ಗ ತಾಲ್ಲೂಕು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ*

*ಭ್ರಷ್ಟರ ತೊಡೆಗಳೇಕೆ ನಡಗುತ್ತಿವೆ?*

ಲೋಕಾಯುಕ್ತ ಪೊಲೀಸರ ಕಣ್ಣು ಕೊನೆಗೂ ಶಿವಮೊಗ್ಗ ತಾಲ್ಲೂಕು ಕಚೇರಿಯ ಮೇಲೆ ಬಿದ್ದಿದೆ. ಜೂ.24ರ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತಹಶೀಲ್ದಾರ್ ಸೇರಿದಂತೆ ಅಲ್ಲಿನ ಹಲವು ಭ್ರಷ್ಟ ಮನಸುಗಳ ತೊಡೆ ನಡುಗಿಸಿದ್ದಾರೆ.

ಶಿವಮೊಗ್ಗ ಗೋವಿಂದಾಪುರ ಗ್ರಾಮದಲ್ಲಿನ 11 ಎಕರೆ ಸರ್ಕಾರಿ ಜಮೀನಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಈ ಲೋಕಾಯುಕ್ತ ದಾಳಿ ನಡೆದಿದೆ. ಈ ಜಮೀನಲ್ಲಿ ಅಕ್ರಮವಾಗಿ ಶೆಡ್ ಗಳ ನಿರ್ಮಾಣ ಕೂಡ ಆಗಿದೆ.

ಅಲ್ಲದೇ, ಶಿವಮೊಗ್ಗ ತಾಲ್ಲೂಕು ಕಚೇರಿಯ ಅನಧಿಕೃತ ದಾಖಲೆಗಳ ಪರಿಶೀಲನೆ, ಸಾರ್ವಜನಿಕ ಕೆಲಸಗಳ ವಿನಾ ವಿಳಂಬ ದೂರುಗಳ ಬಗ್ಗೆಯೂ ಲೋಕಾಯುಕ್ತ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.