*ನಕಲಿ ಲೋಕಾಯುಕ್ತ ಆಫೀಸರ್ ಧನಂಜಯ ರೆಡ್ಡಿಯನ್ನು ಬಂಧಿಸಿ ಜೈಲಿಗಟ್ಟಿದ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು* *PWD AEE ತಿಪ್ಪೇಸ್ವಾಮಿಯವರಿಗೆ ಲೋಕಾಯುಕ್ತ ಅಧಿಕಾರಿ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ*

*ನಕಲಿ ಲೋಕಾಯುಕ್ತ ಆಫೀಸರ್ ಧನಂಜಯ ರೆಡ್ಡಿಯನ್ನು ಬಂಧಿಸಿ ಜೈಲಿಗಟ್ಟಿದ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು*

*PWD AEE ತಿಪ್ಪೇಸ್ವಾಮಿಯವರಿಗೆ ಲೋಕಾಯುಕ್ತ ಅಧಿಕಾರಿ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ*

ತಾನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಶಿವಮೊಗ್ಗ ಲೋಕೋಪಯೋಗಿ ಇಲಾಖೆ ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಪ್ಪೇಸ್ವಾಮಿಯವರಿಗೆ ಹಣದ ಬೇಡಿಕೆಯನ್ನು ವ್ಯಾಟ್ಸಪ್ ಕರೆಯ ಮೂಲಕ ಇಟ್ಟಿದ್ದ ಯುವಕನನ್ನು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಕಳೆದ ಏ.22ರಂದು ಆರೋಪಿ ಆಂಧ್ರಪ್ರದೇಶ ಅನಂತಪುರ ಜಿಲ್ಲೆ ನಲ್ಲಗುತ್ತಲಾ ಪಲ್ಲಿ ವೆಂಕಟಾಪುರಂ ವಾಸಿ ಟಿ.ಧನಂಜಯ ರೆಡ್ಡಿ(33) ವ್ಯಾಟ್ಸಪ್ ಕಾಲ್ ಮಾಡಿ, ತಾನು ಬೆಂಗಳೂರು ಹೆಡ್ ಆಫೀಸಿನ ಲೋಕಾಯುಕ್ತ ಅಧಿಕಾರಿ ದಯಾನಂದ್ ಎಂದು ಪರಿಚಯಿಸಿಕೊಂಡು, ನಿಮ್ಮ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಬಿ ರಿಪೋರ್ಟ್ ಮಾಡಲು ಆನ್ ಲೈನ್ ಮೂಲಕ ಹಣ ಹಾಕಲು ರೆಡಿ ಇರಿ ಎಂದಿದ್ದ.

ಅಧಿಕಾರಿ ತಿಪ್ಪೇಸ್ವಾಮಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಎಸ್ ಪಿ ನಿಖಿಲ್, ಅಡಿಷನಲ್ ಎಸ್ ಪಿ ಎ .ಜಿ. ಕಾರಿಯಪ್ಪ ಮಾರ್ಗದರ್ಶನದಲ್ಲಿ ಸಿಪಿಐ ಸೈಬರ್ ಕ್ರೈಂ ಮಂಜುನಾಥ್ ನೇತೃತ್ವದಲ್ಲಿ ಎಎಸ್ ಐ ಜೆಕೆ ಪ್ರಕಾಶ್, ಹೆಚ್ ಸಿ ಕಿರಣ್ ಕುಮಾರ್, ಸಿಪಿಸಿ ಸಂಗಮೇಶ, ಶರತ್ ಕುಮಾರ್ ರವರ ತಂಡ ತನಿಖೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.