ಗಮನ ಸೆಳೆಯುತ್ತಿದೆ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಮಾಡುತ್ತಿರುವ ಎಂ.ಶ್ರೀಕಾಂತ್ ರವರ ವಿಶೇಷ ಸಿಂಗಾರ*
*ಗಮನ ಸೆಳೆಯುತ್ತಿದೆ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಮಾಡುತ್ತಿರುವ ಎಂ.ಶ್ರೀಕಾಂತ್ ರವರ ವಿಶೇಷ ಸಿಂಗಾರ*
ಮಾರ್ಚ್ 12 ರಿಂದ 16 ರವರೆಗೆ ಐದು ದಿನಗಳ ಕಾಲ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಇದಕ್ಕಾಗಿ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ವಿಶೇಷ ತಯಾರಿಯನ್ನೂ ಮಾಡಿಕೊಂಡಿದೆ.
ಈ ಬಾರಿ ಈ ಜಾತ್ರೆಯ ವಿಶೇಷ ಆಕರ್ಷಣೆ ಎಂದರೆ, ಕೋಟೆ ಮಾರಿಗದ್ದಿಗೆಯ ದೇವಸ್ಥಾನ ಹಾಗೂ ಅಮ್ಮನನ್ನು ಕೂರಿಸಲಾಗುವ ಗಾಂಧಿ ಬಜಾರಿನ ಸ್ಥಳದಲ್ಲಿ ಇದೇ ಪ್ರಥಮ ಬಾರಿಗೆ ವಿಶೇಷಾಲಂಕಾರ ಹಾಗೂ ದೀಪಾಲಂಕಾರ ನಡೆಯುತ್ತಿದೆ. ಪ್ರಮುಖ ಮುಖಂಡರಾದ ಎಂ.ಶ್ರೀಕಾಂತ್ ರವರೇ ಸ್ವತಃ ನಿಂತು ಈ ಅಲಂಕಾರ ಮಾಡಿಸುತ್ತಿದ್ದಾರೆ.
ಸುಮಾರು 40ಕ್ಕೂ ಹೆಚ್ಚಿನ ಕೆಲಸಗಾರರು ಈ ಅಲಂಕಾರದ ಕೆಲಸದಲ್ಲಿ ಈಗಾಗಲೇ ತಲ್ಲೀನರಾಗಿದ್ದಾರೆ. ಎಂ.ಶ್ರೀಕಾಂತ್ ರವರೇ ಈ ಅಷ್ಟೂ ಕಾರ್ಮಿಕರನ್ನು ಬೆಂಗಳೂರಿನಿಂದ ಕರೆಸಿಕೊಂಡು ಕೆಲಸಕ್ಕೆ ಹಚ್ಚಿದ್ದಾರೆ.
ಕೋಟೆ ಶ್ರೀ ಮಾರಿಕಾಂಬ ಜಾತ್ರೆಯದೇ ಒಂದು ವಿಶೇಷತೆಯಿದ್ದರೆ, ಈಗ ಆ ವಿಶೇಷತೆ ಜೊತೆಗೆ ಹೃದಯವಂತ ಸಮಾಜ ಸೇವಕರೂ ಆಗಿರುವ ಎಂ.ಶ್ರೀಕಾಂತ್ ರವರು ಕೈಗೆತ್ತಿಕೊಂಡಿರುವ ದೇವಿ, ದೇವಸ್ಥಾನ, ಅಮ್ಮ ಮೊದಲ ದಿನ ಕೂರುವ ಗಾಂಧಿ ಬಜಾರಿನ ಸ್ಥಳದ ವಿಶೇಷ ಅಲಂಕಾರ, ದೀಪಾಲಂಕಾರ ಭಕ್ತರ ಗಮನ ಸೆಳೆಯಲಿದೆ.
ಬೇಲದ ಹಣ್ಣುಗಳನ್ನೇ ಲೋಡುಗಟ್ಟಲೆ ತರಲಾಗಿದ್ದು, ಇದನ್ನೂ ವಿಶೇಷ ಅಲಂಕಾರದಲ್ಲಿ ಬಳಸಿಕೊಳ್ಳಲಾಗುತ್ತಿದೆ.
ದೇವಸ್ಥಾನದ ಒಳಗೆ, ಹೊರಗಿರುವ ಪಿಲ್ಲರ್ ಗಳಿಗೆ ಕಬ್ಬಿನ ಜಲ್ಲೆಗಳಿಂದ ಅಲಂಕಾರ ಮಾಡಲಾಗಿದೆ. ದೇವಸ್ಥಾನದ ಒಳಕ್ಕೆ ಪ್ರವೇಶಿಸುವ ಮುನ್ನ ಒಂಭತ್ತು ದೇವತೆಗಳ ನವ ದೇವತಾ ದರ್ಶನ ಪಡೆದು ಭಕ್ತರು ಪ್ರಸನ್ನರಾಗುವಂತೆ ಸಿಂಗರಿಸಲಾಗಿದೆ. ಹೂವು, ಹಣ್ಣು, ಮಾರಿಯಮ್ಮನಿಗೆ ಇಷ್ಟವೆನ್ನಲಾಗುವ ಹಸಿರು, ಕೆಂಪು ಗಾಜಿನ ಬಳೆಗಳನ್ನೂ ವಿಶೇಷ ಅಲಂಕಾರಕ್ಕೆ ಬಳಸಿಕೊಳ್ಳುತ್ತಿರುವುದು ವಿಶೇಷ
ಈ ಬಾರಿ ಕೋಟೆ ಶ್ರೀ ಮಾರಿಕಾಂಬ ದೇವಿ, ಭಕ್ತರೂ ಆಗಿರುವ ಎಂ.ಶ್ರೀಕಾಂತ್ ರವರ ವಿಶೇಷ ಅಲಂಕಾರ, ದೀಪಾಲಂಕಾರದಿಂದ ಕಂಗೊಳಿಸಲಿರುವುದಕ್ಕೆ ಭಕ್ತ ಗಣ ಹರ್ಷ ವ್ಯಕ್ತಪಡಿಸುತ್ತಿದೆ.
– *ಶಿ.ಜು.ಪಾಶ*
8050112067