*ಶಿವಮೊಗ್ಗ ಟಿಪ್ಪುನಗರದ ಅಬ್ದುಲ್ ಶೋಯಬ್ ಗೆ ಜೀವಾವಧಿ ಶಿಕ್ಷೆ…* *ಹೆಂಡತಿಯನ್ನೇ ಭೀಕರವಾಗಿ ಕೊಂದಿದ್ದ ಶೋಯಬ್*

*ಶಿವಮೊಗ್ಗ ಟಿಪ್ಪುನಗರದ ಅಬ್ದುಲ್ ಶೋಯಬ್ ಗೆ ಜೀವಾವಧಿ ಶಿಕ್ಷೆ…*

*ಹೆಂಡತಿಯನ್ನೇ ಭೀಕರವಾಗಿ ಕೊಂದಿದ್ದ ಶೋಯಬ್*

ಶಿವಮೊಗ್ಗ ನಗರದ ಟಿಪ್ಪುನಗರದ ವಾಸಿ ಆರೋಪಿತನಾದ ಅಬ್ದುಲ್ ಶೊಯೆಬ್ (26 ವರ್ಷ) ನು ಪಿರ್ಯಾದುದಾರರಾದ ಕೌಸರ್ ಫರ್ವಿಜ್ ರವರ ಮಗಳಾದ *ಮೃತ ಕೌಸರ್ ಫಿಜಾ (20 ವರ್ಷ)* ರವರನ್ನು ಪ್ರೀತಿಸಿ ಮದುವೆಯಾಗಿದ್ದು, ಅವರಿಗೆ ಒಂದುವರೆ ವರ್ಷದ ಮಗುವಿದ್ದು, ಆರೋಪಿತನು *ಕೌಸರ್ ಫಿಜಾರವರಿಗೆ* ಮಾನಸಿಕವಾಗಿ ದೈಹಿಕವಾಗಿ ಹಿಂಸೆಕೊಡುತ್ತಿದ್ದರಿಂದ, ಕೌಸರ್ ಫಿಜಾ ನಿನಗೆ ನಾನು ಇಷ್ಟವಿಲ್ಲದಿದ್ದರೆ ನನ್ನನ್ನು ಬಿಟ್ಟು ಬಿಡು ಎಂದು ಹೇಳಿದ್ದರಿಂದ ಆರೋಪಿತನು ಕೌಸರ್ ಫಿಜಾಳ ಮೇಲೆ ಅನುಮಾನಗೊಂಡು, ಆಕೆ ಯಾರಿಗೂ ಸಿಗಬಾರದು ಎಂದು *ದಿನಾಂಕ:16-10-2021 ರಂದು ಬೇರೆ ಬಾಡಿಗೆ ಮನೆ ನೋಡಿದ್ದೆನೆ ಇಬ್ಬರೂ ನೋಡಿಕೊಂಡು ಬರೋಣ ಎಂದು ಹೇಳಿ ನಂಬಿಸಿ ಶಿವಮೊಗ್ಗಕ್ಕೆ ಕಾರಿನಲ್ಲಿ ಕರೆದುಕೊಂಡು ಬಂದು ಹಾಳೂರು, ಅನುಪಿನ ಕಟ್ಟೆ ರಸ್ತೆಯಲ್ಲಿ ಇರುವ ಹೊನ್ನಪ್ಪ ಲೇಔಟ್ ಗೆ ಕರೆದುಕೊಂಡು ಹೋಗಿ ಸಂಜೆ 5-15 ರಿಂದ 5-45 ಗಂಟೆಯ ಮಧ್ಯದ ಅವಧಿಯಲ್ಲಿ ಅವಳೊಂದಿಗೆ ಗಲಾಟೆ ಮಾಡಿ ಚಾಕುವನ್ನು ಚುಚ್ಚಿ ಹಾಗೂ ಮಚ್ಚಿನಿಂದ ತಲೆಗೆ ಹೊಡೆದು ಕಲ್ಲಿನಿಂದ ಮುಖ ಮತ್ತಿತರೆ ಕಡೆಗಳಲ್ಲಿ ಜಜ್ಜಿ ಕೊಲೆ ಮಾಡಿದ್ದು* ಸದರಿ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ನಂ 341/2021 ಕಲಂ 498 (ಎ), 302 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ *ಶ್ರೀ ದೀಪಕ್ ಎಂ.ಎಸ್ ಪಿಐ ತುಂಗಾನಗರ ಠಾಣೆ,* ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ *ದೋಷಾರೋಪಣ ಪತ್ರವನ್ನು* ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ *ಶ್ರೀಮತಿ ಪಿ.ಓ ಪುಷ್ಪಾ,* ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ.ಪಿ. ರವರು ದಿನಾಂಕ:23-09-2026 ರಂದು ಆರೋಪಿತನಿಗೆ ಕಲಂ *498(ಎ), 302 ಐಪಿಸಿ ಕಾಯಿದೆಗಳಿಗೆ ಜೀವಾವಧಿ ಶಿಕ್ಷೆ & 2,10,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ. ನೊಂದವರ ಕುಟುಂಬದವರಿಗೆ 2,05,000/- ರೂ ಪರಿಹಾರ* ನೀಡಿ ಆದೇಶಿಸಿರುತ್ತದೆ.